ಶಿವರುದ್ರಯ್ಯ ಸ್ವಾಮಿ ಲೊಕಸಭಾ ಚುನಾವಣೆಯಲ್ಲಿ ಸ್ಪರ್ಧೆ; ಮಾಧ್ಯಮ ಗೋಷ್ಠಿಯಲ್ಲಿ ಇವತ್ತೇನಂದ್ರು?
ಶಿವರುದ್ರಯ್ಯ ಸ್ವಾಮಿ ಲೊಕಸಭಾ ಚುನಾವಣೆಯಲ್ಲಿ ಸ್ಪರ್ಧೆ;
ಮಾಧ್ಯಮ ಗೋಷ್ಠಿಯಲ್ಲಿ ಇವತ್ತೇನಂದ್ರು?
ಶಿವಮೊಗ್ಗ;
ಎಲ್ಲರೂ ಕುತೂಹಲದಿಂದ ನಿರೀಕ್ಷಿಸುತ್ತಿರುವ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಥಳೀಯ ನಾಯಕರು ಮತ್ತು ಸಮಾನ ಮನಸ್ಕ ಪಕ್ಷಗಳ ಸಹಕಾರ, ಆತ್ಮೀಯ ನಾಯಕರ ಮಾರ್ಗದರ್ಶನದಲ್ಲಿ ಶಿವಮೊಗ್ಗ ಲೋಕಸಭಾ ವ್ಯಾಪ್ತಿಯ ಮತದಾರರ ಅಪೇಕ್ಷೆಯನ್ನು ಅನುಲಕ್ಷಿಸಿ ಸ್ಪರ್ಧೆಯನ್ನು ಮಾಡುವೆ.
ಸ್ಪರ್ಧೆಯ ಉದ್ದೇಶ:
ರಾಜಕೀಯ ಎನ್ನುವುದು ಕೆಲವು ಕುಟುಂಬಗಳ ವ್ಯಾಪಾರ ವಾಣಿಜ್ಯ ರಾಷ್ಟ್ತ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಈ ಕುಟುಂಬಗಳ ಹಿಡಿತದಲ್ಲಿದ್ದು ಮತದಾರರನ್ನು ಈ ಕುಟುಂಬ ರಾಜಕಾರಣಿಗಳು ಪಕ್ಷಗಳ ಮುಖಾಂತರ ಅಮಾಯಕ ಜನರನ್ನು ಜಾತಿ ಧರ್ಮದ ಹೆಸರಿನಲ್ಲಿ ವಿಭಜಿಸಿ ಪ್ರಚೋದನಾತ್ಮಕ ವಿಚಾರಗಳನ್ನು ಬಿತ್ತುತ್ತ ಅಮಾಯಕ ಕಾರ್ಯಕರ್ತರ ಹೆಣಗಳ ಮೇಲೆ ರಾಜಕಾರಣದ ಸವಾರಿ ಮಾಡುತ್ತಿದ್ದಾರೆ. ಯಾರು ಕುಟುಂಬ ರಾಜಕಾರಣ ವಿರೋಧಿಸಿದರೋ ಅವರೇ ಅವರ ಮಕ್ಕಳನ್ನು ಒಬ್ಬರ ನಂತರ ಒಬ್ಬರನ್ನು ರಾಜಕೀಯಕ್ಕೆ ತಂದು ತಮ್ಮ ರಾಜಕೀಯ ವಿಶ್ವಾಸಾರ್ಹತೆಯನ್ನು ಕಳೆದುಕೊಂಡು ಭ್ರಷ್ಟಾಚಾರದಲ್ಲಿ ತೊಡಗಿ ತಮ್ಮ ಆಸ್ತಿ ಸಂಪತ್ತು ಹೆಚ್ಚಿಸಿಕೊಳ್ಳುತ್ತಿದ್ದರೆ.
ಮಗ ಶಾಸಕ ಮತ್ತೆ ಸಂಸದ, ಮತ್ತೊಬ್ಬ ಮಗನೂ ಶಾಸಕ ಸಾಲದೆಂದು ಪಕ್ಷದ ರಾಜ್ಯಾಧ್ಯಕ್ಷ ಪಟ್ಟ, ಮತ್ತೆ ಅಡುಗೆ ಮನೆಯ ಮಹಿಳಾಮಣಿಳಿಗೆ ಪಕ್ಷದಲ್ಲಿ ಒಂದಲ್ಲ ಒಂದು ಸ್ಥಾನಮಾನ, ಸಾಲದೆಂದು ವಿಧಾನ ಪರಿಷತ್ತಿನಲ್ಲಿ ಒಬ್ಬರು, ಕೇಂದ್ರದಲ್ಲಿ ಮತ್ತೊಬ್ಬರು ಮಂತ್ರಿ.
ಇದು ಒಂದೇ ಕುಟುಂಬದ ನಾಲ್ವರ ಕೈಲಿ ದೇಶಭಕ್ತರ ಪಕ್ಷ ನರಳುತ್ತಿರುವ ಕತೆ. ಇನ್ನು ಪರಂಪರಾಗತವಾಗಿ ಕುಟುಂಬ ರಾಜಕಾರಣವನ್ನು ನಂಬಿರುವ ಜನರಿಂದ ಆಗಾಗ ತಿರಸ್ಕೃತ ಮತ್ತೊಮ್ಮೆ ಪುರಸ್ಕೃತ ಆಗುವ ರಾಷ್ಟ್ತ್ರೀಯ ಪಕ್ಷದ ಅಭ್ಯರ್ಥಿ ಯಾವುದೇ ಜನೊ ಸಂಪರ್ಕ ಇರದೆ ದಂತಗೋಪೂರದಲ್ಲಿ ಇದ್ದು ಐಷಾರಾಮಿ ಜೀವನ ಸಾಗಿಸುತ್ತಾ ಇರುವವರು. ಇವರ ಕುಟುಂಬದ ದೊಡ್ಡ ಹೆಸರಿನ ಹಿನ್ನಲೆಯಲ್ಲಿ ನಾಮಕಾವಸ್ಥೆ ಅಭ್ಯರ್ಥಿಯಾಗಿದ್ದಾರೆ.
ರಾಷ್ಟ್ತ್ರೀಯ ಪಕ್ಷಗಳ ಈ ಇಬ್ಬರೂ ಅಭ್ಯರ್ಥಿಗಳ ಹಿನ್ನೆಲೆ ಗಮನಿಸಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪ್ರಬುದ್ಧ ಮತದಾರರು ಹೊಸ ಮುಖದ ನಿರೀಕ್ಷೆಯಲ್ಲಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಈ ಎರಡೂ ರಾಜಕೀಯ ಪಕ್ಷ ಹೊರತು ಪಡೆಸಿ ಮತ್ತೊಂದು ಪಕ್ಷಕ್ಕೆ ಚುನಾವಣೆ ಮಾಡುವ ಅಭ್ಯರ್ಥಿಗಳನ್ನು ನಿಲ್ಲಿಸುವ ಧೈರ್ಯ ಇಲ್ಲ. ಆದ್ದರಿಂದ ಈ ರಾಷ್ಟ್ತ್ರೀಯ ಪಕ್ಷಗಳ ಹುಸಿತನವನ್ನು ಕುಟುಂಬ ರಾಜಕಾರಣವನ್ನು ಎದುರಿಸಲು ತೃತೀಯ ರಂಗದ ಭಾಗವಾಗಿ ಜನ ಪರಿವರ್ತನ ವೇದಿಕೆ ಮತ್ತು ನೂತನವಾಗಿ ಅಸ್ತಿತ್ವಕ್ಕೆ ಬರುತ್ತಿರುವ ಭಾರತೀಯ ಜನತಾದಳದ ಬೆಂಬಲದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ.
ನನಗೆ ಈ ಹಿನ್ನಲೆಯಲ್ಲಿ ರೈತ, ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ಸಮಾಜದ ಹಲವಾರು ಸಂಘಟನೆಗಳು ನಾಯಕರು ಬೆಂಬಲ ನೀಡಿದ್ದು ಮುಂದಿನ ಪತ್ರಿಕಾಗೋಷ್ಠಿಯಲ್ಲಿ ಅವರೆಲ್ಲಾ ಹಾಜರಿದ್ದು ಮುಂದಿನ ದಿನಗಳಲ್ಲಿ ಚುನಾವಣೆಯ ಬಗೆಗೆ ಮಾಹಿತಿ ನೀಡುವರು
ಬೆಂಗಳೂರು, ನಂತರದಲ್ಲಿ ಭಾರತೀಯ ಜನತಾದಳ ಮತ್ತು ರೈತ ದಲಿತ ಅಲ್ಪಸಂಖ್ಯಾತ ಮತ್ತು ಹಿಂದುಳಿದ ನಾಯಕರ ಪ್ರಚಾರ ಸಭೆ ಮತ್ತು ಪತ್ರಿಕಾ ಗೋಷ್ಠಿಗಳು ನಡೆಯಲಿವೆ.
ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಜನತಾದಳ ಪಕ್ಷದ ಕೆ.ವಿ.ಶಿವರಾಂ, ಜನಪರಿವರ್ತನಾ ವೇದಿಕೆಯ ಎಸ್.ತಿಪ್ಪೇಶಪ್ಪ ಉಪಸ್ಥಿತರಿದ್ದರು.