ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.3.75ರಷ್ಟು ಮಂಜೂರು; ಆಯನೂರು ಸ್ವಾಗತ

ಸರ್ಕಾರಿ ನೌಕರರ ತುಟ್ಟಿಭತ್ಯೆವನ್ನು ಶೇ.೩.೭೫ರಷ್ಟು ಮಂಜೂರು; ಆಯನೂರು ಸ್ವಾಗತ

ರಾಜ್ಯ ಸರ್ಕಾರ ಸರ್ಕಾರಿ ನೌಕರರ ತುಟ್ಟಿಭತ್ಯೆವನ್ನು ಶೇ.೩.೭೫ರಷ್ಟು ಮಂಜೂರು ಮಾಡಿರುವುದು ಅತ್ಯಂತ ಸ್ವಾಗತದ ವಿಷಯ ಎಂದು ಆಯನೂರು ಮಂಜುನಾಥ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ತುಟ್ಟಿಭತ್ಯೆವನ್ನು ಮಂಜೂರು ಮಾಡಿದೆ. ಬೆಲೆ ಏರಿಕೆಯ ಈ ಕಾಲಘಟ್ಟದಲ್ಲಿ ನೌಕರರಿಗೆ ಒಂದಿಷ್ಟು ಸಹಾಯವಾಗುತ್ತದೆ. ಇದಕ್ಕಾಗಿ ಸರ್ಕಾರಕ್ಕೆ ೧೯೭೦ ಕೋಟಿ ಹೆಚ್ಚಿನ ಹೊರೆಯಾಗುತ್ತದೆ. ರಾಜ್ಯ ಸರ್ಕಾರ ನೌಕರರ ಹಿರತಕ್ಷಣೆ ಮಾಡುತ್ತಿದೆ. ಇದಕ್ಕಾಗಿ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟಕ್ಕೆ ಅಭಿನಂದನೆಗಳು ಎಂದರು.
ಅದೇ ರೀತಿ ವೇತನದ ಆಯೋಗದ ವರದಿಯೂ ಕೂಡ ಜಾರಿಗೆ ಬರಬೇಕಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಮಧ್ಯಂತರವಾಗಿ ಶೇ.೧೭.೧ರಷ್ಟನ್ನು ನೀಡಿದೆ. ಆದರೆ ಪೂರ್ಣ ಪ್ರಮಾಣದ ವರದಿ ಇನ್ನೂ ಕೈಸೇರಬೇಕಾಗಿದೆ. ನಾಳೆ ಆ ವರದಿ ಸಿಗಬಹುದು. ಲೋಕಸಭಾ ಚುನಾವಣೆಯ ನೀತಿ ಸಂಹಿತೆಗಿಂತ ಮೊದಲು ರಾಜ್ಯ ಸರ್ಕಾರ ಇದನ್ನು ಜಾರಿಗೆ ತರಬೇಕಾಗಿದೆ. ಇದರಿಂದ ನೌಕರರ ಕುಟುಂಬಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು.
ಹಾಗೆಯೇ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದುಮಾಡಿ ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿತ್ತು. ಅದರಂತೆ ಆದಷ್ಟು ಬೇಗ ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಉಳಿದಂತೆ ಶಿಕ್ಷಕರ ಸಮಸ್ಯೆಗಳಿವೆ, ಒಟ್ಟಾರೆ ರಾಜ್ಯ ಸರ್ಕಾರಿ ನೌಕರರ ಪರವಾಗಿ ನಾನು ಯಾವತ್ತು ಕೆಲಸ ಮಾಡುತ್ತೇವೆ ಎಂದರು.
ವಿಧಾನಪರಿಷತ್ತಿನ  ನೈರುತ್ಯ ಪದವಿದರರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಈ ಬಾರಿ ನನಗೆ ಟಿಕೇಟ್ ಸಿಕ್ಕೇ ಸಿಗುತ್ತದೆ. ಒಂದು ಪಕ್ಷ ಸಿಗದಿದ್ದರು ಕೂಡ ಕಾಂಗ್ರೆಸ್ ಪಕ್ಷದ ಪರವಾಗಿಯೇ ನಾವು ಇರುತ್ತೇವೆ. ನನಗೆ ಸಿಗಬೇಕು ಇಲ್ಲ ಎಸ್.ಪಿ. ದಿನೇಶ್ ಅವರಿಗೆ ಸಿಗಬೇಕು. ಎಸ್.ಪಿ. ದಿನೇಶ್‌ಗೆ ಸಿಕ್ಕರೂ ಕೂಡ ಅವರನ್ನು ಗೆಲ್ಲಿಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ. ಸದಸ್ಯ ವೈ.ಹೆಚ್.ನಾಗರಾಜ್, ಪ್ರಮುಖರಾದ ಏಸುದಾಸ್, ಜಿ.ಪದ್ಮನಾಬ್, ಶಿ.ಜು.ಪಾಶ, ತಿಮ್ಲಾಪುರ ಲೋಕೇಶ್, ಕೃಷ್ಣ, ಎಸ್.ಬಿ.ಪಾಟೀಲ್, ಸೈಯ್ಯದ್ ಅಡ್ಡು, ಆಯನೂರು ಸಂತೋಷ್ ಸೇರಿದಂತೆ ಮುಂತಾದವರು ಇದ್ದರು.