ರಾಷ್ಟ್ರಭಕ್ತರ ಬಳಗದ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ ಮುಖ್ಯಾಂಶಗಳು**12 ಜನ ಅತೃಪ್ತರ ಸಭೆಯಿಂದ ಬಿಜೆಪಿ ಹೋಳು ಸಾಧ್ಯತೆ…**ಬಾಂಗ್ಲಾ ಹಿಂದೂಗಳ ದೌರ್ಜನ್ಯದ ವಿರುದ್ಧ ಗುಡುಗು**ಪಾಲಿಕೆ 35 ವಾರ್ಡ್ ಗಳಲ್ಲೂ ರಾಷ್ಟ್ರಭಕ್ತ ಬಳಗದ ಚುನಾವಣೆ*
*ರಾಷ್ಟ್ರಭಕ್ತರ ಬಳಗದ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ ಮುಖ್ಯಾಂಶಗಳು*
*12 ಜನ ಅತೃಪ್ತರ ಸಭೆಯಿಂದ ಬಿಜೆಪಿ ಹೋಳು ಸಾಧ್ಯತೆ…*
*ಬಾಂಗ್ಲಾ ಹಿಂದೂಗಳ ದೌರ್ಜನ್ಯದ ವಿರುದ್ಧ ಗುಡುಗು*
*ಪಾಲಿಕೆ 35 ವಾರ್ಡ್ ಗಳಲ್ಲೂ ರಾಷ್ಟ್ರಭಕ್ತ ಬಳಗದ ಚುನಾವಣೆ*
12 ಜನ ಅತೃಪ್ತರ ಸಭೆ ಆಶ್ಚರ್ಯ ಮೂಡಿಸಿದೆ. ಪಕ್ಷ ಕಟ್ಟಿದ ಇವರ ನೋವು ಇನ್ನೂ ಬಹಿರಂಗ ಆಗಿಲ್ಲ.
ಕೇವಲ 12 ಜನ ಮಾತ್ರ ಇದಾರೆ ಅಂತ ಅನ್ಕೊಳೋದು ಬೇಡ ಕೇಂದ್ರದ ನಾಯಕರು.
ರಾಜ್ಯಾಧ್ಯಕ್ಷರನ್ನು ಬಿಟ್ಟು ನಡೀತಿರೋ ಸಭೆಗಳಿವು. ಪಾದಯಾತ್ರೆಗಳು ಆರಂಭವಾದ್ರೆ ಬಿಜೆಪಿ ಹೋಳಾಗುವುದು ಖಂಡಿತ. ಹಿರಿಯರ ತಪಸ್ಸಿನ ಪಾರ್ಟಿ ಬಿಜೆಪಿ.
ಬಹಳ ಜನ ನೋವಿನಲ್ಲಿದ್ದಾರೆ. ವಿಜಯೇಂದ್ರ ಅಧ್ಯಕ್ಷರಾದ ನಂತರ ಎಲ್ಲರಿಗೂ ಆಶ್ಚರ್ಯ. ಒಂದೇ ಕುಟುಂಬದ ಕೈಯಲ್ಲಿ ಪಕ್ಷ. ಆತಂಕಕಾರಿ. 27 ಸಂಸದರಿದ್ದವರು 17 ಕ್ಕಿಳಿದಾಯ್ತು. ವಿಧಾನಸಭೆ ಕೂಡ ಕಡಿಮೆಯಾಯ್ತು. ಜೆಡಿಎಸ್ ಹೊಂದಾಣಿಕೆ ಇಲ್ದಿದ್ರೆ ಇನ್ನೆಷ್ಟು ಕುಸೀತಿತ್ತು. ಇನ್ನೂ ಬಿಜೆಪಿ ತಳ ಹಿಡಿಯೋದು.
ಮೋದಿ ನಮ್ಮ ಆಸ್ತಿ. ದೇಶ ರಕ್ಷಣೆಯ ಮೊದಲ ನಾಯಕ. ಎಲ್ಲರಿಗೂ ಬೇಕಾದ ನಾಯಕ. ಇಂಥ ನಾಯಕರನ್ನು ಮುಂದಿಟ್ಟುಕೊಂಡರೂ ಸ್ಥಾನ ಕಡಿಮೆ ಆಗೋಯ್ತು. ನೋವಿನಲ್ಲಿ ಬಹಳಷ್ಟು ಜನ ಎಂ.ಪಿ, ಎಂಎಲ್ ಎ ಗಳು, ಕಾರ್ಯಕರ್ತರಿದ್ದಾರೆ. ಎಲ್ಲರಿಗೂ ಬೇಸರ ಇರೋದು ಯಡಿಯೂರಪ್ಪ ಕುಟುಂಬಕ್ಕೆ ಪಕ್ಷ ಕೊಟ್ಟಿದ್ದೇ ಆಗಿದೆ.
ಸಾಮೂಹಿಕ ನಾಯಕತ್ವ ಈಗಿಲ್ಲ. ಕೋರ್ ಕಮಿಟಿಯಲ್ಲಿ ಆಗುವ ತೀರ್ಮಾನಗಳೆಲ್ಲ ಒಂದು ಮನೆಯಲ್ಲಿ ಆಗ್ತಿದೆ. ಹೊಂದಾಣಿಕೆ ರಾಜಕಾರಣ ನಡೀತಿದೆ. ಸ್ವಜನ ಪಕ್ಷಪಾತದಲ್ಲಿ ಬಿಜೆಪಿ ಇದೆ. ಹಿಂದುತ್ವದಿಂದ ದೂರ ಉಳಿಯುತ್ತಿದೆ ಬಿಜೆಪಿ.
ಅತೃಪ್ತರನ್ನು ಕರೆದು ಹಿರಿಯ ಕೇಂದ್ರದ ನಾಯಕರು ಮಾತಾಡಲಿ. ನಿರ್ಲಕ್ಷ್ಯ ಮಾಡಿದರೆ ಅನಾಹುತ. ಕಳಕಳಿಯಿಂದಲೇ ಈ 12 ಜನ ಸಭೆ ಸೇರಿದ್ದಾರೆ. ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಭಾರೀ ಕುಸಿತ ಬಿಜೆಪಿಯಲ್ಲಾಗುತ್ತೆ.
ಅತೃಪ್ತರ ಬಿಜೆಪಿ ಪಾದಯಾತ್ರೆ ಬಹಳ ಅನಾಹುತ ಮಾಡುತ್ತೆ. ಕೇಂದ್ರಕ್ಕೆ ದೊಡ್ಡ ಶಕ್ತಿ ಇದೆ. ಅವರು ಮನಸು ಮಾಡಿದ್ರೆ ಬಿಜೆಪಿ ಉಳಿಯುತ್ತೆ.
ಬಾಂಗ್ಲಾ ಹಿಂದುಗಳ ಮೇಲಿನ ದೌರ್ಜನ್ಯಕ್ಕೆ ಅರ್ಥವೇ ಇಲ್ಲಿ. ಕಠೋರ ಹಿಂಸಾಚಾರ ಹಿಂದೂಗಳ ಮೇಲೆ ನಡೆಯುತ್ತಿದೆ. ಹಿಂದೂಗಳು ಏನ್ ಮಾಡಿದ್ರು? ಅಲ್ಲಿ ಶಾಂತಿಯಿಂದ ಹಿಂದೂಗಳು ಪ್ರತಿಭಟಿಸಿದ್ದಾರೆ. ಪ್ರಧಾನ ಮಂತ್ರಿ ಮಾತಾಡಿದ್ದಾರೆ. ವಿಶ್ವಸಂಸ್ಥೆ ಗಂಭೀರವಾಗಿ ಮಧ್ಯಪ್ರವೇಶಿಸಬೇಕು.
ಭಾರತದ ಕಾಂಗ್ರೆಸ್ಸಿಗರು ಬಾಂಗ್ಲಾ ಆಕ್ರಮಣ ಭಾರತದಲ್ಲಾದ್ರೂ ಆಶ್ಚರ್ಯವಿಲ್ಲ ಅಂತಿದಾರೆ. ಹೇಳಿಕೆ ನೀಡಿದ ಸಲ್ಮಾನ್ ಖುರ್ಷಿದ್ ನನ್ನು ಕೂಡಲೇ ಬಂಧಿಸಬೇಕು.
ಬಾಂಗ್ಲಾದಲ್ಲಿ ಹಿಂದೂಗಳಿಗೆ ಶೇ.10 ರಷ್ಟು ಸ್ಥಾನಮಾನ ಮಾಡಿಕೊಡಿ.
ಆಶ್ರಯ ಮನೆ ಹಕ್ಕೊತ್ತಾಯ, ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಹಣವಿದೆ. ವಾಲ್ಮೀಕಿ ಹಗರಣದ ಪ್ರಯುಕ್ತ ಸೀಝ್ ಮಾಡಿದ್ದಾರೆ. ಕೂಡಲೇ ಬಿಡುಗಡೆ ಮಾಡಬೇಕೆಂದು ಮಂಗಳವಾರ ರಾಷ್ಟ್ರಭಕ್ತರ ಬಳಗದಿಂದ ಹಕ್ಕೊತ್ತಾಯ. ಬೆಳಿಗ್ಗೆ 11 ಆರಂಭ.
ಕೂಡಲೇ ಕಾರ್ಪೊರೇಷನ್ ಚುನಾವಣೆ ನಡೆಸಬೇಕು.
35 ವಾರ್ಡಲ್ಲೂ ಪಾಲಿಕೆಗೆ ಅಭ್ಯರ್ಥಿಗಳನ್ನು ಹಾಕಲಿದ್ದೇವೆ.