ಜನ ಪ್ರಶ್ನಿಸುತ್ತಿದ್ದಾರೆ… ಉತ್ತರಿಸುತ್ತದೆಯೇ ಪೊಲೀಸ್ ಇಲಾಖೆ ಅಥವಾ ಡಿವೈಎಸ್ ಪಿ?ಸಿನಿಮಾ ನೋಡುತ್ತಿದ್ದ ವೈದ್ಯ ದಂಪತಿಗೆ ಛೇಡಿಸಿದ ಹುಡುಗರ ಪರ ಸೆಟ್ಲ್ ಮೆಂಟ್ ಮಾಡಿದ್ಯಾರು?ಶಿವಮೊಗ್ಗದ ಬ್ಯಾರಿ ಮಾಲ್ ನಲ್ಲಿ ಪುಂಡ ಪೋಕರಿಗಳಿಂದ ರಕ್ಷಣೆ ಎಲ್ಲಿದೆ?ಕೇಸೇ ದಾಖಲಾಗಲಿಲ್ಲ- ಇದು ಕೇಸಾಗದಂತೆ ನೋಡಿಕೊಂಡ ಕಿಸೆಯ ಕಥೆ!

ಜನ ಪ್ರಶ್ನಿಸುತ್ತಿದ್ದಾರೆ…
ಉತ್ತರಿಸುತ್ತದೆಯೇ ಪೊಲೀಸ್ ಇಲಾಖೆ ಅಥವಾ ಡಿವೈಎಸ್ ಪಿ?

ಸಿನಿಮಾ ನೋಡುತ್ತಿದ್ದ ವೈದ್ಯ ದಂಪತಿಗೆ ಛೇಡಿಸಿದ ಹುಡುಗರ ಪರ ಸೆಟ್ಲ್ ಮೆಂಟ್ ಮಾಡಿದ್ಯಾರು?

ಶಿವಮೊಗ್ಗದ ಬ್ಯಾರಿ ಮಾಲ್ ನಲ್ಲಿ ಪುಂಡ ಪೋಕರಿಗಳಿಂದ ರಕ್ಷಣೆ ಎಲ್ಲಿದೆ?

ಕೇಸೇ ದಾಖಲಾಗಲಿಲ್ಲ- ಇದು ಕೇಸಾಗದಂತೆ ನೋಡಿಕೊಂಡ ಕಿಸೆಯ ಕಥೆ!

ಶಿವಮೊಗ್ಗದ ಬ್ಯಾರಿ ಮಾಲ್ ನಲ್ಲಿ ವೈದ್ಯ ದಂಪತಿಗಳಿಗೆ ಯುವಕರ ತಂಡ ಛೇಡಿಸಿದ ವಿಚಾರ, ಬ್ಯಾರಿ ಮಾಲ್ ನಲ್ಲಿ ಪೋಲಿ ಪುಂಡರ ಕಾಟಕ್ಕೆ ರಕ್ಷಣೆ ಇಲ್ಲದಿರುವುದು ಹಾಗೂ ಶಿವಮೊಗ್ಗದ ಡಿವೈಎಸ್ ಪಿ ಒಬ್ಬರು ರಾತ್ರಿ ಪಾಳಿಯಲ್ಲಿದ್ದರೂ ಕ್ರಮ ಕೈಗೊಳ್ಳದೇ ಸೆಟ್ಲ್ ಮೆಂಟ್ ಮಾಡಿ ಪ್ರಕರಣಕ್ಕೆ ತಿಪ್ಪೆ ಸಾರಿಸಿರೋದು ಸಾಕಷ್ಟು ಅನುಮಾನಗಳಿಗೆ ಕಾರಣವಾಗುತ್ತಿದೆ!

ಜನವರಿ 18 ರಂದು ರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ಶಿವಮೊಗ್ಗ ಬ್ಯಾರಿ ಮಾಲಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಅವತ್ತು ರಾತ್ರಿ ವೈದ್ಯ ದಂಪತಿ ಸಿನಿಮಾ ನೋಡಲು ರಾತ್ರಿ ಬ್ಯಾರಿ ಮಾಲಿಗೆ ಹೋಗಿದ್ದರು. ಸಿನಿಮಾ ನೋಡುವಾಗ ಹಿಂಬದಿ ಕುಳಿತಿದ್ದ ಪೋಕರಿ ಯುವಕರ ಗ್ಯಾಂಗ್( ದಾರಿ ತಪ್ಪಿದ ಅಧಿಕಾರಿ ಮಕ್ಕಳು!) ಅವರನ್ನು ಛೇಡಿಸತೊಡಗಿತು. ಆ ನಂತರ ವೈದ್ಯರು ವಿರೋಧಿಸಿದಾಗ ಆ ಗ್ಯಾಂಗ್ ಬೇರೆಯದೇ ರೀತಿಯಲ್ಲಿ ಹಿಂಸೆಕೊಡಲು ಆರಂಭಿಸಿತು. ಸಿನಿಮಾ ಬಿಟ್ಟರೂ ಬ್ಯಾರಿ ಮಾಲಿನ ತುಂಬಾ ಓಡಾಡಿಸಿ ಹಿಂಸೆ ನೀಡಿದರೂ ಮಾಲಿನ ರಕ್ಷಣಾ ಸಿಬ್ಬಂದಿ ಕಾಪಾಡುವ ಪ್ರಯತ್ನ ಮಾಡಲೇ ಇಲ್ಲ ಎಂದು ಮೂಲಗಳು ಹೇಳುತ್ತಿವೆ.

ಈ ನಡುವೆ ರಾತ್ರಿ ರೌಂಡ್ಸಿನಲ್ಲಿದ್ದ ಡಿವೈಎಸ್ ಪಿಯೊಬ್ಬರ ಕಿವಿಗೆ ಈ ಮಾಹಿತಿ ಬಿದ್ದು ಮಾಲಿನೊಳಗೆ ಹೋಗಿದ್ದಾರೆ. ಆ ಹುಡುಗರಿಗೆ ಹಿಗ್ಗಾಮುಗ್ಗಾ ಝಾಡಿಸಿದ್ದಾರೆ. ಆ ಹುಡುಗರ ಪೋಷಕರಿಗೆ ವಿಷಯ ತಿಳಿದು ಸ್ಥಳಕ್ಕಾಗಮಿಸಿ ಡಿವೈಎಸ್ ಪಿಗೇ ರೋಪು ಹಾಕಿದರೆನ್ನಲಾಗಿದೆ.

ಹಾಗಾದರೆ, ಆ ಪುಂಡ ಪೋಕರಿ ಹುಡುಗರ ಪೋಷಕರು ಎಷ್ಟು ಪ್ರಭಾವಶಾಲಿಗಳಿರಬಹುದು ಯೋಚಿಸಿ. ಈ ಪ್ರಭಾವದಿಂದಾಗಿ ವೈದ್ಯ ದಂಪತಿಗಳಿಗೆ ಹೆದರಿಸಿ ದೂರು ನೀಡದಂತೆ ಮಾಡಲಾಯಿತೇ? ಡಿವೈಎಸ್ ಪಿ ಮಧ್ಯಸ್ಥಿಕೆ ವಹಿಸಿ ತಣ್ಣಗಾಗಿಸಿದರೇ?

ಛೇಡಿಸುವ ಯುವಕರ ವಿರುದ್ಧ ಚನ್ನಮ್ಮ ಪಡೆ ಕಟ್ಟಿ ಕಾಲೇಜು ಸುತ್ತಮುತ್ತ ಛೂ ಬಿಡುವ ಪೊಲೀಸ್ ಇಲಾಖೆ ಶಿವಮೊಗ್ಗದ ಬ್ಯಾರಿ ಮಾಲ್ ನಲ್ಲಿ ನಡೆದ ಘಟನೆಗೆ ಸ್ಪಂದಿಸಲಿಲ್ಲವೇಕೆ? ಸ್ವತಃ ಡಿವೈಎಸ್ ಪಿ ಈ ಪ್ರಕರಣ ಮುಚ್ಚು ಹಾಕುವಂಥದ್ದು ಏನು ಘಟಿಸಿತು? ಕನಿಷ್ಠ ಪುಂಡ ಪೋಕರಿಗಳಿಂದ ತಪ್ಪೊಪ್ಪಿಗೆ ಪತ್ರವನ್ನಾದರೂ ಡಿವೈಎಸ್ ಪಿ ಬರೆಸಿಕೊಂಡರಾ? ಅಥವಾ…

ಈ ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಗೆ ರೆಫರ್ ಆಗಬೇಕಿತ್ತು. ಆದರೆ, ಆಗಲಿಲ್ಲ. ಡಿವೈಎಸ್ ಪಿ ವ್ಯಾಪ್ತಿಯಲ್ಲೇ ಎಲ್ಲದೂ ಮುಗಿದು ಹೋಗಿದೆ! ತೊಂದರೆಗೊಳಗಾದ ದಂಪತಿಗೆ ಏನು ಪರಿಹಾರ ಸಿಕ್ಕಿತು? ಹೆದರಿಸಿ ಬೆದರಿಸಲಾಯಿತಾ? ಅಥವಾ ಇವರ ಸಹವಾಸವೇ ಬೇಡವೆಂದು ಆ ದಂಪತಿಗಳು ದೂರು ಕೊಡುವಷ್ಟು ಧೈರ್ಯ ಮಾಡಲಿಲ್ಲವೇ? ಸೆಟ್ಲ್ ಮೆಂಟ್ ಆಯ್ತು ಬಿಡಿ ಅಂತ ಅಧಿಕಾರಿಯೊಬ್ಬರು ಹೇಳುತ್ತಾರೆ. ಈ ವಿಚಾರವಾಗಿ ಎರಡೆರಡು ಬಾರಿ ಡಿವೈಎಸ್ ಪಿಯವರಿಗೆ ಕೇಳಿದರೂ ಏನೂ ಹೇಳದೇ ಬ್ಯುಝಿ ಅಂತ ತಪ್ಪಿಸಿಕೊಂಡಿದ್ದಾರೆ. ಛೇಡಿಸಿ, ಭಯ ಹುಟ್ಟಿಸಿ ಬಚಾವಾಗುವುದು ಇಷ್ಟು ಸುಲಭವೇ? ಬ್ಯಾರಿ ಮಾಲಿನ ಸಿಸಿ ಟಿವಿಗಳು ಹೇಳುವ ಸತ್ಯವೇನು?

ಜನ ಪ್ರಶ್ನಿಸುತ್ತಿದ್ದಾರೆ…
ಉತ್ತರಿಸುತ್ತದೆಯೇ ಪೊಲೀಸ್ ಇಲಾಖೆ ಅಥವಾ ಡಿವೈಎಸ್ ಪಿ?