ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ* *ಬ್ಯಾಂಕಿನ ಅಧ್ಯಕ್ಷರಾದ ಡಾ. ಆರ್. ಎಂ. ಮಂಜುನಾಥ ಗೌಡರು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ*

*ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ*
*ಬ್ಯಾಂಕಿನ ಅಧ್ಯಕ್ಷರಾದ ಡಾ. ಆರ್. ಎಂ. ಮಂಜುನಾಥ ಗೌಡರು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ*

> 2023-24 ನೇ ಸಾಲಿನಲ್ಲಿ ಒಟ್ಟು ರೂ.17.99 ಕೋಟಿ ಲಾಭ. ರೂ.10.58 ಕೋಟಿ ನಿವ್ವಳ ಲಾಭಗಳಿಸಿದ್ದು, ಷೇರು ಬಂಡವಾಳ ರೂ.138.99 ಕೋಟಿ ಹಾಗೂ ನಿಧಿಗಳು ರೂ.67.46 ಕೋಟಿ ಹಾಗೂ ದುಡಿಯುವ ಬಂಡವಾಳ ರೂ.2332.29 ಕೋಟಿಗಳಿರುತ್ತದೆ. ರೂ.1462.78 ಕೋಟಿ ಠೇವಣಿ ಸಂಗ್ರಹಣೆಯಾಗಿರುತ್ತದೆ.

> 2023-24 ನೇ ಸಾಲಿನಲ್ಲಿ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಕೃಷಿ ಬೆಳೆ ಸಾಲ ಒಟ್ಟು 104250 ರೈತರಿಗೆ

– ರೂ.1010.20 ಕೋಟಿ ಸಾಲ ಹಂಚಿಕೆ ಮಾಡಲಾಗಿರುತ್ತದೆ. ಈ ಪೈಕಿ 3581 ಹೊಸ ರೈತರಿಗೆ ರೂ.43.04

ಕೋಟಿ ಮತ್ತು ಹೆಚ್ಚುವರಿ ಸಾಲ 6683 ರೈತರಿಗೆ ರೂ.33.68 ಕೋಟಿ ಸಾಲ ವಿತರಣೆ ಮಾಡಿದ್ದು. • ಶೇ. 108.96 ರಷ್ಟು ಪ್ರಗತಿಯಾಗಿರುತ್ತದೆ. ಆಗಸ್ಟ್-24 ರ ಮಾಹೆಯ ಅಂತ್ಯದವರೆಗೆ ಒಟ್ಟು 37672 ರೈತರಿಗೆ ಒಟ್ಟು 417.85 ಕೋಟಿ ಸಾಲ ಹಂಚಿಕೆ ಮಾಡಲಾಗಿದ್ದು, ಸಾಲ ವಸೂಲಾತಿ ಶೇ 99.07 ರಷ್ಟಿರುತ್ತದೆ.

> 2023-24 ನೇ ಸಾಲಿನಲ್ಲಿ 1696 ಸ್ವ-ಸಹಾಯ ಸಂಘಗಳಿಗೆ ರೂ.73.33 ಕೋಟಿ ಸಾಲ ವಿತರಿಸಲಾಗಿದ್ದು, ಶೇ.100 ರಷ್ಟು ಪ್ರಗತಿಯಾಗಿರುತ್ತದೆ. ಆಗಸ್ಟ್-24 ರ ಮಾಹೆಯ ಅಂತ್ಯದವರೆಗೆ ಒಟ್ಟು 680 ಸ್ವ-ಸಹಾಯ ಸಂಘಗಳಿಗೆ ರೂ.29.53 ಕೋಟ ಸಾಲ ಹಂಚಿಕೆ ಮಾಡಲಾಗಿದ್ದು, ಸಾಲ ವಸೂಲಾತಿ ಶೇ.99.00 ಇರುತ್ತದೆ.

* ಹಾಲು ಉತ್ಪಾದಕ ಸಹಕಾರ ಸಂಘದ ಸದಸ್ಯರಿಗೆ ಡಿಸಿಸಿ ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ತೆರೆಯಲು ಅವಕಾಶವನ್ನು ನೀಡಲಾಗಿದ್ದು, ಬ್ಯಾಂಕಿನಿಂದ ಈಗಾಗಲೇ ಹಲವು ಸೌಲಭ್ಯಗಳನ್ನು ಹಾಲು ಉತ್ಪಾದಕ ಸಹಕಾರ ಸಂಘದ ಸದಸ್ಯರಿಗೆ ಒದಗಿಸಲಾಗುತ್ತಿದ್ದು, ರಾಜ್ಯ ಸರ್ಕಾರದ ಯೋಜನೆಯಂತೆ ಶೂನ್ಯ ಬಡ್ಡಿ ದರದಲ್ಲಿ ಪಶು ಸಂಗೋಪನೆ ಉದ್ದೇಶಕ್ಕಾಗಿ ಒಟ್ಟು 3008 ಸದಸ್ಯರಿಗೆ ರೂ.6.53 ಕೋಟ ಕೆ.ಸಿ.ಸಿ ಹೈನುಗಾರಿಕೆ ಸಾಲವನ್ನು ನೀಡಲಾಗಿರುತ್ತದೆ.

> ಬ್ಯಾಂಕಿನ ಶಾಖೆಗಳ ಮೂಲಕ 15231 ವ್ಯಕ್ತಿಗಳಿಗೆ ಕೃಷಿಯೇತರ ಸಾಲ ರೂ. 519.16 ಕೋಟಿ ಸಾಲ ನೀಡಲಾಗಿದ್ದು, ಸಾಲ ವಸೂಲಾತಿ ಶೇ.88.17 ಗಳಷ್ಟಿದ್ದು, ನಿವ್ವಳ ಎನ್.ಪಿ.ಎ ಪ್ರಮಾಣ ಶೇ.0.78 ಮಾತ್ರ ಇರುತ್ತದೆ.

> ರಾಜ್ಯದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಹು ಸೇವಾ ಕೇಂದ್ರಗಳನ್ನಾಗಿಯೂ ಮಾರ್ಪಡಿಸುವ ಕೃಷಿ ಮೂಲಭೂತ ಸೌಕರ್ಯ ನಿಧಿ ಯೋಜನೆಯು ಈಗಾಗಲೇ ಜಾರಿಯಲ್ಲಿದ್ದು. ಸದರಿ ಯೋಜನೆಯಡಿ ಒಟ್ಟು 23 ಸಂಭಗಳಿಗೆ ಬ್ಯಾಂಕಿನಿಂದ ರೂ.0.94 ಕೋಟಿ ಸಾಲ ಮಂಜೂರು ಮಾಡಲಾಗಿರುತ್ತದೆ.

– ರೈತರ ಹಾಗೂ ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಯೋಜನೆಯ ರೀತ್ಯಾ ಮೊಬೈಲ್ ವಾಹನದ ಸೌಲಭ್ಯವನ್ನು ಜಾರಿಗೆ ತರಲಾಗಿದೆ. ಮೊಬೈಲ್ ವ್ಯಾನ್ ನಲ್ಲಿ ಎ.ಟಿ.ಎಂ ನ್ನು ಅಳವಡಿಸಲಾಗಿದ್ದು, ಈಗಾಗಲೇ ಮೊಬೈಲ್ ವ್ಯಾನ್ ಜಿಲ್ಲೆಯ ಎಲ್ಲಾ ಹಳ್ಳಿ-ಹಳ್ಳಿಗಳಲ್ಲೂ ಸಂಚರಿಸುತ್ತಿದ್ದು, ಹಾಲು ಉತ್ಪಾದಕ ಸಂಘದ ಸದಸ್ಯರು ಹಾಗೂ ಗ್ರಾಹಕರು ನಮ್ಮ ಬ್ಯಾಂಕಿನ ಎ.ಟಿ.ಎಂ ಕಾರ್ಡ್ ಮುಖಾಂತರ ಹಣವನ್ನು ದ್ರಾ ಮಾಡಬಹುದಾಗಿರುತ್ತದೆ.

ಬ್ಯಾಂಕ್ ಮೊಬೈಲ್ ಆ್ಯಪ್ ಅನ್ನು ಬಿಡುಗಡೆ ಮಾಡಿದ್ದು ಈ ಆ್ಯಪ್ ಮೂಲಕ ಬ್ಯಾಂಕಿನ ಗ್ರಾಹಕರು

ಖಾತೆಗಳ ಬ್ಯಾಲೆನ್ಸ್, ಮಿನಿ ಪಾಸ್ ಬುಕ್, ಬ್ಯಾಂಕಿನ ಸಾಮಾನ್ಯ ಮಾಹಿತಿಗಳು, ಪಾಸಿಟೀವ್ ಪೇ ಸಿಸ್ಟಂ

ನಡಿಯಲ್ಲಿ ಗ್ರಾಹಕರು ನೀಡಿದ ಚೆಕ್ ವಿವರಗಳನ್ನು ಪಡೆಯಬಹುದಾಗಿದೆ

> ಕೇಂದ್ರ ಸರ್ಕಾರದ ಪ್ರಾಯೋಜಕತ್ವದಲ್ಲಿ ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಏಕರೂಪ ತಂತ್ರಾಶದ ಯೋಜನೆಯಡಿಯಲ್ಲಿ ಗಣಕೀಕರಣ ಮಾಡುವ ಕಾರ್ಯ ಪ್ರಗತಿಯಲ್ಲಿರುತ್ತದೆ

> ಕೇಂದ್ರ ಸರ್ಕಾರದ “ಸಹಕಾರ್ ಸೇ ಸಮೃದ್ಧಿ” ಯೋಜನೆಯಡಿ ಸಹಕಾರಿ ಚಳುವಳಿಗಳನ್ನು ಬಲಪಡಿಸಲು, ಕಳಹಂತದ ಎಲ್ಲಾ ವರ್ಗದ ಜನರಿಗೆ ಸಹಕಾರಿ ತತ್ವ/ಮಹತ್ವ/ಚಾಲನೆಯನ್ನು ತಲುಪಿಸಲು ಸಹಕಾರಿಯಾಗುವಂತೆ, ವಿವಿಧೋದ್ದೇಶ ಯೋಜನೆಗಳನ್ನು ಸಂಘಗಳ ಮೂಲಕ ಜಾರಿಗೊಳಿಸಲಾಗಿರುತ್ತದೆ.

ಸದರಿ ಯೋಜನೆಯಡಿಯಲ್ಲಿ ಸಾಮಾನ್ಯ ಸೇವಾ ಕೇಂದ್ರ (common service centre) ಗಳಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ನೊಂದಣಿ ಮಾಡಿಕೊಂಡು ಜನೌಷಧ ಕೇಂದ್ರ, ಪೆಟ್ರೋಲ್ ಬಂಕ್, ಗ್ಯಾಸ್ ಬಂಕ್, ಗ್ರಾಹಕರ ಸೇವಾ ಕೇಂದ್ರಗಳು ಮತ್ತು ಇನ್ನಿತರೆ ಸೌಲಭ್ಯಗಳನ್ನು ಕಲ್ಪಿಸಲು ಸೂಚಿಸಲಾಗಿದೆ.

ಪ್ರಸಕ್ತ ಸಾಲಿನ ಗುರಿಗಳ ವಿವರ:-

> 2024-25 ನೇ ಸಾಲಿನಲ್ಲಿ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಕೃಷಿ ಬೆಳೆ ಸಾಲ ಒಟ್ಟು 120000 ರೈತರಿಗೆ

ರೂ.1200.00 ಕೋಟಿ ಹಾಗೂ ಶೇ.3 ರ ಬಡ್ಡಿ ದರದಲ್ಲಿ 1500 ರೈತರಿಗೆ ರೂ.80.00 ಕೋಟಿ

ಮಧ್ಯಮಾವಧಿ ಕೃಷಿ ಸಾಲ ಹಂಚಿಕೆ ಮಾಡುವ ಯೋಜನೆಯನ್ನು ಹೊಂದಲಾಗಿದೆ

> 2024-25 ನೇ ಸಾಲಿನಲ್ಲಿ 2100 ಸ್ವ-ಸಹಾಯ ಸಂಘಗಳಿಗೆ ರೂ.100.00 ಕೋಟಿ ಸಾಲ ವಿತರಿಸುವ ಯೋಜನೆಯನ್ನು ಹೊಂದಲಾಗಿದೆ.

> ಬ್ಯಾಂಕಿನಿಂದ ಪೆಟ್ರೋಲ್ ಬಂಕ್, ಟ್ರಾನ್ಸ್‌ಪೋರ್ಟ್ ಕಂಪನಿ, ಹಾಸ್ಪಿಟಲ್ ಮುಂತಾದ ಉದ್ಯಮಗಳಿಗೆ ಸಾಲ ನೀಡುವ ಮೂಲಕ ಕೃಷಿಯೇತರ ಸಾಲ ನೀಡಿಕೆ ಹೆಚ್ಚಿಸಲು ಕ್ರಮವಿಡಲಾಗಿದೆ.

> 2024-25 ನೇ ಸಾಲಿನಲ್ಲಿ ರೂ.1600.00 ಕೋಟಿ ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದೆ.

> ಮಾರ್ಚ್-2025 ರ ಅಂತ್ಯಕ್ಕೆ ರೂ.25.00 ಕೋಟಿ ನಿವ್ವಳ ಲಾಭಗಳಿಸುವ ಯೋಜನೆಯನ್ನು ಹೊಂದಲಾಗಿದೆ.

> ಜಿಲ್ಲೆಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ನೂತನ ಶಾಖೆಗಳನ್ನು ತೆರೆಯುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು, ಶೀಘ್ರದಲ್ಲಿ ಭದ್ರಾವತಿ ತಾಲ್ಲೂಕಿನ ಕಲ್ಲಹಾಳ್, ಸೊರಬ ತಾಲ್ಲೂಕಿನ ಜಡೆ ಹಾಗೂ ಶಿಕಾರಿಪುರ ತಾಲ್ಲೂಕಿನ ಸುಣ್ಣದಕೊಪ್ಪದಲ್ಲಿ ಬ್ಯಾಂಕಿನ ನೂತನ ಶಾಖೆಗಳು ಪ್ರಾರಂಭಿಸಲಾಗುವುದು. ಈ ಕೆಳಕಂಡ ಇನ್ನು 19 ನೂತನ ಶಾಖೆಗಳನ್ನು ತೆರೆಯುವ ಬಗ್ಗೆ ಪ್ರಸ್ತಾವನೆಯನ್ನು ಆರ್.ಬಿ.ಐ ಗೆ ಸಲ್ಲಿಸಲಾಗಿದೆ

• ಶಿವಮೊಗ್ಗ ತಾಲ್ಲೂಕಿನ ಕಾಚಿನಕಟ್ಟೆ, ಗಾಜನೂರು, ನವಲೆ, ಆಯನೂರು ಹಾಗೂ ಹೊಳಲೂರು ಗ್ರಾಮದಲ್ಲಿ.

• ಭದ್ರಾವತಿ ತಾಲ್ಲೂಕಿನ ಬಾರಂದೂರು ಹಾಗೂ ಆನವೇರಿ ಗ್ರಾಮದಲ್ಲಿ.

• ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿ, ತೀರ್ಥಹಳ್ಳಿಯ ಎ.ಪಿ.ಎಂ.ಸಿ ಯಾರ್ಡ್, ದೇವಂಗಿ, ಅರಗ, ಕಟ್ಟಿಹಕ್ಕಲು.

• ಸಾಗರ ತಾಲ್ಲೂಕಿನ ತ್ಯಾಗರ್ತಿ ಹಾಗೂ ಬ್ಯಾಕೋಡು ಗ್ರಾಮದಲ್ಲ.

• ಸೊರಬ ತಾಲ್ಲೂಕಿನ ಕುಪ್ಪಗಡ್ಡೆ ಹಾಗೂ ಚಂದ್ರಗುತ್ತಿ ಗ್ರಾಮದಲ್ಲ.

• ಶಿಕಾರಿಪುರ ತಾಲ್ಲೂಕಿನ ಹಿತ್ತ ಗ್ರಾಮದಲ್ಲಿ.

• ಹೊಸನಗರ ತಾಲ್ಲೂಕಿನ ನಿಟ್ಟೂರು ಹಾಗೂ ನಗರ ಗ್ರಾಮದಲ್ಲಿ.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಎಸ್.ಕೆ.ಮರಿಯಪ್ಪ, ನಿರ್ದೇಶಕರಾದ ಸುಧೀರ್, ಹನುಮಂತು, ದಶರಥ ಗಿರಿ, ಚಂದ್ರಶೇಖರ ಗೌಡ, ಮಹಾಲಿಂಗ ಶಾಸ್ತ್ರಿ, ದುಗ್ಗಪ್ಪ ಗೌಡ, ಡಿ.ಆರ್. ಆಗಿರುವ ನಾಗಭೂಷಣ್ ಕಲ್ಮನೆ ಉಪಸ್ಥಿತರಿದ್ದರು.