ಶಿವಮೊಗ್ಗ ಪಾಲಿಕೆ ಚುನಾವಣೆ ಅಂತ ಲಕ್ಷ ಲಕ್ಷ ಚೆಲ್ಲಿದವರಿಗೆ ಬಿಗ್ ಶಾಕ್…ಡ್ರೋಣ್ ಮೂಲಕ ನಡೆಯುತ್ತಿದೆ ಸರ್ವೇಕಾರ್ಯ! ವರ್ಷಾನುಗಟ್ಟಲೆ ಮುಂದೆ ಹೋಗಲಿದೆ ಪಾಲಿಕೆ ಚುನಾವಣೆ!!ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆ ಲೇಟೋ ಲೇಟೂ…

ಶಿವಮೊಗ್ಗ ಪಾಲಿಕೆ ಚುನಾವಣೆ ಅಂತ ಲಕ್ಷ ಲಕ್ಷ ಚೆಲ್ಲಿದವರಿಗೆ ಬಿಗ್ ಶಾಕ್…

ಡ್ರೋಣ್ ಮೂಲಕ ನಡೆಯುತ್ತಿದೆ ಸರ್ವೇಕಾರ್ಯ! ವರ್ಷಾನುಗಟ್ಟಲೆ ಮುಂದೆ ಹೋಗಲಿದೆ ಪಾಲಿಕೆ ಚುನಾವಣೆ!!

ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆ ಲೇಟೋ ಲೇಟೂ…

ಶಿವಮೊಗ್ಗ ಮಹಾನಗರ ಪಾಲಿಕೆಗೆ ಇದೇ ನವೆಂಬರ್ ತಿಂಗಳಲ್ಲಿ ಚುನಾವಣೆ ನಡೆದೇಬಿಡುತ್ತೆ ಎಂದು ಗಣಪತಿ ಹಬ್ಬ, ಈದ್ ಮಿಲಾದ್, ರಾಜಕಾರಣಿಗಳ ಹುಟ್ಟು ಹಬ್ಬಗಳಿಗೆ ಲಕ್ಷ ಲಕ್ಷ ಚೆಲ್ಲಿದ ಕಾರ್ಪೊರೇಟರ್ ಕನಸು ಕಂಡವರಿಗೆ ಇದು ಶಾಕಿಂಗ್ ನ್ಯೂಸ್…

ಪಾಲಿಕೆಯಲ್ಲಿ ಹಾಲಿ 35 ವಾರ್ಡ್ ಗಳಿದ್ದು, ಕಳೆದ ಬಾರಿ ಇದ್ದ ಮೀಸಲಾತಿಯನ್ನೇ ಮುಂದಿಟ್ಟುಕೊಂಡು ಅದೇ ಹಳೆಯ 35 ವಾರ್ಡ್ ಗಳಿಗೆ ಪಾಲಿಕೆ ವ್ಯಾಪ್ತಿಯಲ್ಲಿ ಚುನಾವಣೆ ನಡೆದುಬಿಡುತ್ತೆ ಎಂದೇ ಹೇಳಲಾಗುತ್ತಿತ್ತು.

ಅಲ್ಲದೇ, ಮತ್ತೊಂದು ಚರ್ಚೆಯೂ ಚಾಲ್ತಿಯಲ್ಲಿತ್ತು; ಇರುವ 35 ವಾರ್ಡ್ ಗಳಲ್ಲಿ ಅತೀ ದೊಡ್ಡ ವಾರ್ಡ್ ಗಳನ್ನೇ ಕತ್ತರಿಸಿ 40 ವಾರ್ಡ್ ಗಳನ್ನಾಗಿಸಿ, ಇರುವ ಮೀಸಲಾತಿ ಬದಲಾಯಿಸಿ ಚುನಾವಣಾ ಆಯೋಗ ಚುನಾವಣೆಯನ್ನು ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ನಡೆಸಲಿದೆ ಎಂಬುದು ಚರ್ಚೆ.

ಈ ನಡುವೆ, ಪಾಲಿಕೆಯ ನೂತನ ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್ ಬಂದ ಹೊಸತರಲ್ಲೇ ಪಾಲಿಕೆ ಹೊಸ ಗಡಿ ಗುರುತಿಸದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ ಶೋಕಾಸ್ ನೋಟಿಸ್ ಕೂಡ ಜಾರಿ ಮಾಡಿದ್ದರು.

ಇದಾದ ನಂತರ, ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾದವು. ಹಳೆ 35 ವಾರ್ಡ್ ಗಳ ಬದಲಿಗೆ 51 ಅಥವಾ55 ನೂತನ ಸೇರ್ಪಡೆಯ ವಾರ್ಡ್ ಗಳಿಗೆ ಚುನಾವಣೆ ನಡೆಸುವ ಪ್ರಯತ್ನಗಳು ನಡೆದಿರುವುದಕ್ಕೆ ಬಹಳಷ್ಟು ಸಾಕ್ಷಿಗಳು ದೊರೆಯತೊಡಗಿವೆ.

ಈಗಾಗಲೇ ಡ್ರೋಣ್ ಸರ್ವೆ ಮುಗಿಸಿರುವ ಮಹಾನಗರ ಪಾಲಿಕೆ, 9 ಜನ ಪ್ರಮುಖ ಅಧಿಕಾರಿಗಳ ತಂಡದೊಂದಿಗೆ ಸುತ್ತಮುತ್ತಲಿನ ಗ್ರಾಮಪಂಚಾಯತ್ ಗಳಿಗೆ ಆಯುಕ್ತೆ ಕವಿತಾರವರು ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆಂಬ ಅಧಿಕೃತ ಮೂಲಗಳು ಹೊರಬಿದ್ದಿವೆ.

ಬೆಂಗಳೂರಿನ ಬಿಬಿಎಂಪಿ ಚುನಾವಣೆ ನಡೆದು ಆರು ವರ್ಷಗಳೇ ಕಳೆಯುತ್ತಿರುವ ಈ ಹೊತ್ತಿನಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆ ಕೂಡ ವರ್ಷಗಟ್ಟಲೆ ಸಮಯ ತೆಗೆದುಕೊಳ್ಳುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ…

ನವೆಂಬರ್ ನಲ್ಲೇ ಚುನಾವಣೆ ನಡೆಯಲಿದೆ ಎಂದು ಗಣಪತಿ/ ಈದ್ ಮಿಲಾದ್/ ಹುಟ್ಟು ಹಬ್ಬ ಅಂತೆಲ್ಲ ಹಣ ಚೆಲ್ಲಿಕೊಂಡವ ಅಭ್ಯರ್ಥಿ ಆಗುವ ಆಸೆಯ ವ್ಯಕ್ತಿಗಳಿಗೆ ಶಿವಮೊಗ್ಗ ಮಹಾನಗರ ಪಾಲಿಕೆ ಬಿಗ್ ಶಾಕ್ ನೀಡಿದೆ.