ಅಕ್ರಮ ಬಡ್ಡಿ ದಂಧೆಕೋರರ ವಿರುದ್ಧ ತೊಡೆ ತಟ್ಟಿದ ಪೊಲೀಸ್ ಇಲಾಖೆ**ಎಸ್ ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ 9 ಬಡ್ಡಿಕೋರರ ಮನೆ, ಆಫೀಸುಗಳ ಮೇಲೆ ದಾಳಿ**39 ಲಕ್ಷ ನಗದು ಸೇರಿದಂತೆ ಏನೆಲ್ಲ ವಶಕ್ಕೆ ಪಡೆದರು ಪೊಲೀಸರು? ಇಲ್ಲಿದೆ ಮಾಹಿತಿ…*
*ಅಕ್ರಮ ಬಡ್ಡಿ ದಂಧೆಕೋರರ ವಿರುದ್ಧ ತೊಡೆ ತಟ್ಟಿದ ಪೊಲೀಸ್ ಇಲಾಖೆ*
*ಎಸ್ ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ 9 ಬಡ್ಡಿಕೋರರ ಮನೆ, ಆಫೀಸುಗಳ ಮೇಲೆ ದಾಳಿ*
*39 ಲಕ್ಷ ನಗದು ಸೇರಿದಂತೆ ಏನೆಲ್ಲ ವಶಕ್ಕೆ ಪಡೆದರು ಪೊಲೀಸರು? ಇಲ್ಲಿದೆ ಮಾಹಿತಿ…*
![](https://malenaduexpress.com/wp-content/uploads/2025/02/IMG-20250211-WA0390.jpg)
ಮಂಗಳವಾರವಾದ ಇಂದು ಬೆಳ್ಳಂ ಬೆಳಗ್ಗೆ ಅಕ್ರಮ ಬಡ್ಡಿ ವ್ಯವಹಾರ ನಡೆಸುತ್ತಿದ್ದವರ ವಿರುದ್ಧ ಕ್ರಮ ಪೊಲೀಸ್ ಇಲಾಖೆ ತೊಡೆ ತಟ್ಟಿದ್ದು, ಶಿವಮೊಗ್ಗವನ್ನು ಸಂಪೂರ್ಣ ರೌಂಡಪ್ ಮಾಡಿ ಒಟ್ಟು 9 ಜನ ಬಡ್ಡಿಕೋರರ ವಿರುದ್ಧ ಪ್ರಕರಣ ದಾಖಲಿಸಿ, 39 ಲಕ್ಷ ನಗದು ಸೇರಿದಂತೆ ಹತ್ತು ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಎಸ್ ಪಿ ಮಿಥುನ್ ಕುಮಾರ ಜಿ ಕೆ, ಅಡಿಷನಲ್ ಎಸ್ಪಿಗಳಾದ ಅನಿಲ್ ಕುಮಾರ್ ಭೂಮರಡ್ಡಿ, ಕಾರಿಯಪ್ಪ ಎ ಜಿ. ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ಬಾಬು ಆಂಜನಪ್ಪ, ಸಂಜೀವ್ ಕುಮಾರ್ ಟಿ, ಕೃಷ್ಣ ಮೂರ್ತಿ ರವರ ಮೇಲ್ವಿಚಾರಣೆಯಲ್ಲಿ ದೊಡ್ಡಪೇಟೆ ಸಿಪಿಐ ರವಿ ಪಾಟೀಲ್, ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅಣ್ಣಾ ನಗರ , ಮಾರ್ನಾಮಿ ಬೈಲು , ಕಾಮಾಕ್ಷಿ ಬೀದಿಯಲ್ಲಿ, ಕೋಟೆ ಸಿಪಿಐ ಹರೀಶ್ ಕೆ ಪಾಟೀಲ್ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ *ವಿದ್ಯಾನಗರ* ದಲ್ಲಿ, ವಿನೋಬನಗರ ಸಿಪಿಐ ಶ್ರೀಮತಿ ಚಂದ್ರಕಲಾ ರವರು ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಶಿಪುರದಲ್ಲಿ, ಜಯನಗರ ಸಿಪಿಐ ಸಿದ್ದೇಗೌಡ, ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆ ಗಂಗೂರು , ಬಸವನಗುಡಿಯಲ್ಲಿ, ತುಂಗಾನಗರ ಸಿಪಿಐ ಗುರುರಾಜ್ ಕೆ ಟಿ, ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಿಶೆಟ್ಟಿಕೊಪ್ಪ, ಚಾಲುಕ್ಯನಗರದಲ್ಲಿ, ಶಿವಮೊಗ್ಗ ಗ್ರಾಮಾಂತರದ ಸಿಪಿಐ ಸತ್ಯನಾರಾಯಣ ರವರು ಪೊಲೀಸ್ ಠಾಣಾ ವ್ಯಾಪ್ತಿಯ ಇಂದಿರಾ ಬಡಾವಣೆ, ಗುರುಪುರ ಸೇರಿದಂತೆ ಒಟ್ಟು 9 ಕಡೆಗಳಲ್ಲಿ ದಾಳಿ ನಡೆಸಿ, ಒಟ್ಟು 39 ಲಕ್ಷ ನಗದು, 24 ಮೊಬೈಲ್, 02 ಲ್ಯಾಪ್ ಟಾಪ್, 72 ಚೆಕ್ ಗಳು, 19 ಆರ್ಸಿ ಬುಕ್ ಗಳು, 07 ವೆಹಿಕಲ್ ಬಾಂಡ್, 02 ಫಾರ್ಮ್ ನಂ 29, 30 ಮತ್ತು ಅಗ್ರಿಮೆಂಟ್ ಕಾಪಿ , ಪಾಸ್ ಬುಕ್, ಸೇಲ್ ರೀಡ್, ಪಹಣಿ, 29 ಬೈಕ್ ಗಳು ಮತ್ತು 2 ಕಾರುಗಳನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ.
ಒಟ್ಟು 9 ಆರೋಪಿತರ ವಿರುದ್ಧ ಒಟ್ಟು 9 ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.