ಎನ್.ಕೆ.ಶ್ಯಾಮಸುಂದರ್; ಶಿವಮೊಗ್ಗ ನಗರ ಸ್ಮಾರ್ಟ್ ಸಿಟಿ ಕರ್ಮಕಾಂಡ-2*

*ಶಿವಮೊಗ್ಗ ನಗರ ಸ್ಮಾರ್ಟ್ ಸಿಟಿ ಕರ್ಮಕಾಂಡ-2*

ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ ಹೆಸರಿನಲ್ಲಿ ನಡೆದಿರುವ ಕಳಪೆ ಕಾಮಗಾರಿಯ ಇನ್ನಷ್ಟು ಅಕ್ರಮಗಳು ಐಸಿಟಿ ಕಮಾಂಡೋ ಕಂಟ್ರೋಲ್ ಕಾಮಗಾರಿ ಅಡಿಯಲ್ಲಿ ಬರುವ ವಾಣಿಜ್ಯ ಸ್ಥಳಗಳಲ್ಲಿ ಕನ್ಸರ್ವೆನ್ಸಿ ಅಭಿವೃದ್ಧಿ, ಪಾರ್ಕಿಂಗ್ ವ್ಯವಸ್ಥೆ, ಮತ್ತು ಟೈಲ್ಸ್ ಗಳ ಅಳವಡಿಕೆ ಎಷ್ಟು ಕಳಪೆಯಾಗಿದೆ ಎಂಬುದನ್ನ ಪರಿಶೀಲಿಸಬೇಕು.

ಇದಕ್ಕೆ ಅಳವಡಿಸಿರುವ ಭೂಮ್ ಬ್ಯಾರಿಯರ್ಸ್ ಗೇಟ್ ಗಳು ಕೆಲಸ ನಿರ್ವಹಿಸುತಿದಿಯಾ? ಇದರ ನಿರ್ವಹಣೆ ಹೆಸರಲ್ಲಿ ಕೊಡುತ್ತಿರುವ ಬಿಲ್ ಎಷ್ಟು?

ಶಿವಮೊಗ್ಗ ನಗರದಲ್ಲಿ ಎಲ್ಲಾ ಸಿಗ್ನಲ್ ಸರ್ಕಲ್ ಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳ ಸಂಖ್ಯೆ ಎಷ್ಟು? ಅವು ಎಷ್ಟು ಕೆಲಸ ನಿರ್ವಹಿಸುತ್ತಿವೆ? ಸಿಸಿ ಕ್ಯಾಮೆರಾ ಕಾರ್ಯಗತ ಆಗುತ್ತಿಲ್ಲವಂತೆ. ಅದೇ ರೀತಿ ಬಸ್ ಶೆಲ್ಟರ್ ಗಳಲ್ಲಿ ಅಳವಡಿಸಿರುವ ಟಿವಿಗಳ ಸ್ಥಿತಿಯೇನು?ಇವುಗಳ ನಿರ್ವಹಣೆಯ ಹೆಸರಲ್ಲಿ ಎಷ್ಟು ಬಿಲ್ಲು,ಗುತ್ತಿಗೆದಾರನಿಗೆ ಹೋಗುತ್ತಿದೆ?

ಸಾರ್ವಜನಿಕ ಸೈಕಲ್ ಯೋಜನೆ ಅಡಿಯಲ್ಲಿ ಗುತ್ತಿಗೆದಾರನಿಗೆ ಗುತ್ತಿಗೆ ಕೊಟ್ಟು ಬಿಲ್ ಪಾವತಿಸಿ ಮತ್ತು ಸಾರ್ವಜನಿಕರು ಅರ್ಧ ಗಂಟೆ ಸೈಕಲ್ ಸವಾರಿ ಮಾಡಿದರೆ ಅವರಿಂದ 10ರೂ ಬಾಡಿಗೆ ಗುತ್ತಿಗೆದಾರನ ಖಾತೆಗೆ ಹೋಗುತ್ತದೆ. ಆದರೆ ಮೂರು ತಿಂಗಳಿಗೊಮ್ಮೆ ನಿರ್ವಹಣೆ ಆಗದೇನೆ ಗುತ್ತಿಗೆದಾರನ ಖಾತೆಗೆ ನಿರ್ವಹಣೆ ಹೆಸರಲ್ಲಿ ಹೋಗುತ್ತಿರುವ ಹಣ ಎಷ್ಟು?

ನಗರದ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಹಾಗೂ ಕನ್ಸರ್ವೆನ್ಸಿ ಗಳಲ್ಲಿ ಈ ಶೌಚಾಲಯ ನಿರ್ಮಿಸಿದ್ದು ಅವುಗಳ ನಿರ್ವಹಣೆ ಆಗದೆ ಕೊಳೆತು ಗಬ್ಬು ನಾರುತ್ತಿದೆ. ಅದಕ್ಕೆ ತಾಜಾ ಉದಾಹರಣೆ ಜೈಲ್ ರಸ್ತೆ ಸುಬ್ಬಯ್ಯ ಆಸ್ಪತ್ರೆ ಹಿಂಭಾಗ ಈ ಶೌಚಾಲಯದ ಸ್ಥಿತಿ ನೋಡಿ ಪಕ್ಕದಲ್ಲಿ ನೀರು ತುಂಬಿರುವ ಟ್ಯಾಂಕಿಗೆ ಮುಚ್ಚಳವಿಲ್ಲ ರಾತ್ರಿ ವೇಳೆ ಯಾರಾದರೂ ಅದರೊಳಗೆ ಬಿದ್ದರೆ ದೇವರೇ ಗತಿ ಅದಕ್ಕೆ ಸ್ಮಾರ್ಟ್ ಸಿಟಿ ಅಧಿಕಾರಿಗಳೇ ಹೊಣೆ ಅಲ್ಲವೇ?

ಸರ್ಕಿಟ್ ಹೌಸ್ ಸರ್ಕಲ್ ನಿಂದ ಸಾಗರ ರಸ್ತೆಯಲ್ಲಿ ಕುಡಿಯುವ ನೀರಿನ ಕಳಪೆ ಪೈಪ್ ಲೈನ್ ಅಳವಡಿಸಿ ತೊಂದರೆಯಾಗಿದ್ದು ಗೊತ್ತಿದ್ದು ಅದನ್ನು ಸರಿಪಡಿಸ ಬೇಕಿದ್ದ ಗುತ್ತಿಗೆದಾರನಿಗೆ ಹೊಸ ಅಂದಾಜು ವೆಚ್ಚ ತಯಾರಿಸಿ ಕಾಮಗಾರಿ ನಿರ್ವಹಿಸಿದ್ದು ಏಕೆ?ಅದಕ್ಕೆ ಕೊಟ್ಟಿರುವ ಹಣ ಎಷ್ಟು? ಮಲ್ಲಿಗೆನಹಳ್ಳಿ ವಾಜಪೇಯಿ ಬಡಾವಣೆಯ ಕೆರೆಯ ಪಕ್ಕದಲ್ಲಿ ಇಂಟರ್ನ್ಯಾಷನಲ್ ಹಾಕಿ ಗ್ರೌಂಡ್ ನ ಅಸಲಿ ಕಥೆ ಏನು?

ಇಷ್ಟೆಲ್ಲಾ ಅಕ್ರಮಗಳು ನಡೆದಿರುವ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳನ್ನು ಪರಿಶೀಲಿಸಲು ಈ ಮಂಡಳಿಯ ಅಧ್ಯಕ್ಷರು ಬರಬೇಕು ಯಾವುದೇ ಭಯವಿಲ್ಲದೆ ಭ್ರಷ್ಟಾಚಾರ ಮಾಡಿರುವ ಯೋಜನೆಯ ಕೆಲಸ ನಿರ್ವಹಿಸಿದ ನಿವೃತ್ತಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಸುಂದರ ಶಿವಮೊಗ್ಗದ ಕನಸು ಕಂಡ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯ ಪಡಿಸುತ್ತೇನೆ.

*ಎನ್.ಕೆ. ಶ್ಯಾಮಸುಂದರ್,

ಮಾಜಿ ನಗರಸಭಾ ಸದಸ್ಯರು* ಹಾಗೂ ಪ್ರಧಾನ ಕಾರ್ಯದರ್ಶಿ ಜಿಲ್ಲಾ ಕಾಂಗ್ರೆಸ್ ಶಿವಮೊಗ್ಗ*