ಅಕ್ರಮ ಬಡ್ಡಿ ದಂಧೆಕೋರರ ವಿರುದ್ಧ ಶಿವಮೊಗ್ಗ ಜಿಲ್ಲಾ ಪೊಲೀಸರ ಕಾರ್ಯ ಶ್ಲಾಘನೀಯ;**ಜೆಡಿಎಸ್ ಶಿವಮೊಗ್ಗ ಜಿಲ್ಲಾ ವಕ್ತಾರ* *ನರಸಿಂಹ ಗಂಧದ ಮನೆ*

*ಅಕ್ರಮ ಬಡ್ಡಿ ದಂಧೆಕೋರರ ವಿರುದ್ಧ ಶಿವಮೊಗ್ಗ ಜಿಲ್ಲಾ ಪೊಲೀಸರ ಕಾರ್ಯ ಶ್ಲಾಘನೀಯ;*

*ಜೆಡಿಎಸ್ ಶಿವಮೊಗ್ಗ ಜಿಲ್ಲಾ ವಕ್ತಾರ*
*ನರಸಿಂಹ ಗಂಧದ ಮನೆ*

ಇಂದು ಎಸ್ ಪಿ ಮಿಥುನ್ ಕುಮಾರ್ ರವರ ನೇತೃತ್ವದಲ್ಲಿ ಶಿವಮೊಗ್ಗದ ವಿವಿಧ ಭಾಗಗಳಲ್ಲಿ ನಡೆದ ಅಕ್ರಮ ಬಡ್ಡಿ ದಂಧೆಕೋರರ ವಿರುದ್ಧದ ದಾಳಿ ಅತ್ಯಂತ ಶ್ಲಾಘನೀಯ ಎಂದು ಜೆಡಿಎಸ್ ಶಿವಮೊಗ್ಗ ಜಿಲ್ಲಾ ವಕ್ತಾರರಾದ ನರಸಿಂಹ ಗಂಧದಮನೆ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಬಹಳಷ್ಟು ಜನ ಮೀಟರ್ ಬಡ್ಡಿ ದಂಧೆಯಿಂದ ತೊಂದರೆಗೆ ಒಳಗಾಗಿದ್ದು, ಇವರ ನೋವಿಗೆ ಸ್ಪಂದಿಸಿದ ಪೊಲೀಸ್ ಇಲಾಖೆ ಸಾರ್ವಜನಿಕರ ಪರ ನಿಂತು ಮೀಟರ್ ಬಡ್ಡಿ ದಂಧೆಕೋರರಿಗೆ ಮಟ್ಟ ಹಾಕುತ್ತಿರುವುದು ಸಂತೋಷದಾಯಕ ಸಂಗತಿ. ಪೊಲೀಸರ ಇಂತಹ ಸಾಮಾಜಿಕ ನ್ಯಾಯದ ಕೆಲಸಕ್ಕೆ ಇಂದು ಹೊಸಮನೆ ಬಡಾವಣೆಯಲ್ಲಿ ಬೆಂಬಲಿಸಿದಂತೆ ನಾನು ಹಾಗೂ ಜೆಡಿಎಸ್ ಪಕ್ಷ ಸದಾ ಬೆಂಬಲವಾಗಿ ನಿಲ್ಲುತ್ತೇವೆಂದು ನರಸಿಂಹ ಗಂಧದ ಮನೆ ತಿಳಿಸಿದ್ದಾರೆ.