ಮಾರುಕಟ್ಟೆಯಲ್ಲಿ ಕಲಬೆರೆಕೆಯಾಗಿರುವ ರಸಗೊಬ್ಬರ!
ಮಾರುಕಟ್ಟೆಯಲ್ಲಿ ಕಲಬೆರೆಕೆಯಾಗಿರುವ ರಸಗೊಬ್ಬರ! ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ಶಿವಮೊಗ್ಗ, ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ, ಇರುವಕ್ಕಿ ಯ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯನುಭವ ಕಾರ್ಯಕ್ರಮದ ಅಡಿಯಲ್ಲಿ ಶಿಕಾರಿಪುರ ತಾಲೂಕಿನ ಹೊಸಗೊದ್ದನಕೊಪ್ಪ ಗ್ರಾಮದಲ್ಲಿ ತಂಗಿರುವರು. ರೈತರಲ್ಲಿ ಅರಿವು ಮೂಡಿಸಲು ಕಲಬೆರಿಕೆ ಆಗಿರುವ ರಸಗೊಬ್ಬರಗಳನ್ನು ಪತ್ತೆ ಹಚ್ಚುವುದರ ಬಗ್ಗೆ ಪದ್ಧತಿ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ಮಣ್ಣು ವಿಜ್ಞಾನಿಯಾದ ಡಾಕ್ಟರ್ ಗಣಪತಿ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಮಾರುಕಟ್ಟೆಯಲ್ಲಿ ರಸಗೊಬ್ಬರಗಳಿಗೆ ಅನೇಕ ರೀತಿಯಲ್ಲಿ…