ರಸ್ತೆ ಬದಿ ಪತ್ತೆಯಾದ ಮಗು ಪೋಷಕರ ಪತ್ತೆಗಾಗಿ ಮನವಿ
ರಸ್ತೆ ಬದಿ ಪತ್ತೆಯಾದ ಮಗು ಪೋಷಕರ ಪತ್ತೆಗಾಗಿ ಮನವಿ ಭದ್ರಾವತಿ ತಾಲ್ಲೂಕು, ಮಲ್ಲಾಪುರ ಗ್ರಾಮದ ಗೇಟ್ ಹತ್ತಿರ ರಸ್ತೆ ಬದಿ ಪತ್ತೆಯಾಗಿದ್ದು ಹೊಳೆಹೊನ್ನೂರು ಪೋಲೀಸ್ ಠಾಣಾಧಿಕಾರಿಗಳು ಸಾರ್ವಜನಿಕರ ಮಾಹಿತಿ ಮೇರೆಗೆ ರಕ್ಷಿಸಿ ದಿನಾಂಕ: 16.12.2025 ರಂದು ಪೋಷಕರ ಪತ್ತೆಗಾಗಿ ದೂರು ದಾಖಲಿಸಿ ಮಕ್ಕಳ ಕಲ್ಯಾಣ ಸಮಿತಿ ಶಿವಮೊಗ್ಗ ಇಲ್ಲಿಗೆ ದಾಖಲಿಸಿರುತ್ತಾರೆ. ಮಗುವಿನ ಮುಂದಿನ ಪುನರ್ವಸತಿ ಹಿತದೃಷ್ಠಿಯಿಂದ ಮಗುವಿನ ಸಂಬಂಧಿಕರು ಯಾರಾದರೂ ಇದ್ದಲ್ಲಿ ಅಥವಾ ಪೋಷಕರ ಬಗ್ಗೆ ಮಾಹಿತಿ ದೊರೆತಲ್ಲಿ ಸೂಕ್ತ ದಾಖಲಾತಿಯೊಂದಿಗೆ ಅಧೀಕ್ಷಕರು, ಸರ್ಕಾರಿ ಬಾಲಕರ ಬಾಲಮಂದಿರ,…


