
ಸಂಗೀತ ರವಿರಾಜ್ ಅಂಕಣ; ಕೊಕ್ಕೋ ಬೆಳೆಗೆ ಏಕ್ ದಂ ಸುಖದ ಬೆಲೆ
ಕೊಕ್ಕೋ ಬೆಳೆಗೆ ಏಕ್ ದಂ ಸುಖದ ಬೆಲೆ ಜಗಕ್ಕೆಲ್ಲಾ ಚಾಕೋಲೇಟ್ ಹಂಚುವ ಕೊಕ್ಕೋ ಬೆಳೆಗಾರರು ನಾವು ಎಂಬುದಾಗಿ ಹೆಮ್ಮೆಯಿಂದ ಹೇಳುವಂತಹ ಭಾವ ನಮ್ಮಲ್ಲಿ ಜೀವನಪೂರ್ತಿ ಇರುವಂತಹ ಖುಷಿ. ಅಂತಹ ಕೊಕ್ಕೋ ಬೆಳೆಗೆ ಈಗ ಏಕ್ ದಂ ಸುಖದ ಬೆಲೆ ಬಂದಿದ್ದರಿಂದ ನಮ್ಮ ಶ್ರಮ ಇನ್ನು ಸಾರ್ಥಕಗೊಂಡಿದೆ. ಈಗೆಲ್ಲು ಹೋದರು ‘ಕೊಕ್ಕೋಕ್ಕೆ ನೂರ ಐವತ್ತು ದಾಟಿಟು ಗಡ ಗೊತ್ತುಟ ‘ ಎಂಬುದೇ ಎಲ್ಲರ ಬಾಯಲ್ಲಿ ಬರುವ ಮಾತಾಗಿದೆ. ಕೃಷಿಕರಾದ ನಮಗೆ ಇದನ್ನು ಕೇಳುವಾಗ ಒಮ್ಮೆ ಕಿವಿ ನೆಟ್ಟಗಾಗುವುದು…