65 ಲಕ್ಷದ ನಿಧಿಯಲ್ಲಿ ಕುಟುಂಬಕ್ಕೆ ಸಿಗುವ ಪಾಲು ಎಷ್ಟು?* *ನಿಧಿ ಪತ್ತೆಯಾದ ಲಕ್ಕುಂಡಿ ಜನರಿಗೆ ಆತಂಕ*
*65 ಲಕ್ಷದ ನಿಧಿಯಲ್ಲಿ ಕುಟುಂಬಕ್ಕೆ ಸಿಗುವ ಪಾಲು ಎಷ್ಟು?* *ನಿಧಿ ಪತ್ತೆಯಾದ ಲಕ್ಕುಂಡಿ ಜನರಿಗೆ ಆತಂಕ* ಚಾಲುಕ್ಯರ ಕಾಲದ ಐತಿಹಾಸಿಕ ದೇವಾಲಯಗಳ ತವರೂರು, ‘ಶಿಲ್ಪಕಲೆಯ ನೆಲೆವೀಡು’ ಎಂದೇ ಪ್ರಖ್ಯಾತಿ ಪಡೆದಿರುವ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಈಗ ‘ನಿಧಿ’ಯ ಚರ್ಚೆ ತೀವ್ರಗೊಂಡಿದೆ. ಇತ್ತೀಚೆಗೆ ಗ್ರಾಮದ ರಿತ್ತಿ ಕುಟುಂಬದ ಮನೆಯ ಪಾಯ ಅಗೆಯುವಾಗ ಅನಿರೀಕ್ಷಿತವಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ನಿಧಿ ಪತ್ತೆಯಾದ ಬೆನ್ನಲ್ಲೇ, ಸರ್ಕಾರಕ್ಕೆ ಸಂತಸವಾದರೆ-ಗ್ರಾಮಸ್ಥರಿಗೆ ಸಂಕಷ್ಟ ಎದುರಾಗಿದೆ. ಲಕ್ಕುಂಡಿಯ ಹೊರವಲಯದಲ್ಲಿರುವ ಪುರಾತನ ಗೋಣಿ ಬಸವೇಶ್ವರ ದೇವಸ್ಥಾನ ಈಗ…


