ಕುವೆಂಪು ವಿವಿ: 2025-26ನೇ ಸಾಲಿಗೆ 3726.12 ಲಕ್ಷಗಳ ಕೊರತೆಯ ಬಜೆಟ್ ಮಂಡನೆ
ಕುವೆಂಪು ವಿವಿ: 2025-26ನೇ ಸಾಲಿಗೆ 3726.12 ಲಕ್ಷಗಳ ಕೊರತೆಯ ಬಜೆಟ್ ಮಂಡನೆ ಶಂಕರಘಟ್ಟ, ಕುವೆಂಪು ವಿಶ್ವವಿದ್ಯಾಲಯದಲ್ಲಿ ಮಂಗಳವಾರ 2025-26ನೇ ಸಾಲಿಗೆ 3726.12 ಲಕ್ಷಗಳ ಕೊರತೆಯ ಆಯವ್ಯಯವನ್ನು ಮಂಡಿಸಲಾಯಿತು. ಇಂದು ನಡೆದ ವಿದ್ಯಾವಿಷಯಕ ಪರಿಷತ್ತಿನ ಸಭೆಯಲ್ಲಿ ಹಣಕಾಸು ಅಧಿಕಾರಿ ಪ್ರೊ. ಎಚ್. ಎನ್. ರಮೇಶ್ ಬಜೆಟ್ ಮಂಡಿಸಿದರು. 2025-26ನೇ ಸಾಲಿಗೆ ಒಟ್ಟಾರೆ, ಸ್ವೀಕೃತಿಗಳಿಂದ 13384.81 ಲಕ್ಷಗಳನ್ನು ನಿರೀಕ್ಷಿಸಲಾಗಿದ್ದು, ವೆಚ್ಚಗಳಿಗಾಗಿ 17110.93 ಲಕ್ಷಗಳನ್ನು ನಿಗದಿಗೊಳಿಸಿದ್ದು, 3726.12 ಲಕ್ಷಗಳ ಕೊರತೆಯಿದೆ ಎಂದರು. 13384.81 ಲಕ್ಷಗಳ ಸ್ವೀಕೃತಿ ನಿರೀಕ್ಷಣೆಯಲ್ಲಿ ವೇತನ ಮತ್ತು ಭತ್ಯೆಗಳು…