ಔಷಧಿ ಆರ್ಡರ್ ಮಾಡಿದ ಮಹಿಳೆಗೆ ಬಾಕ್ಸ್ನಲ್ಲಿ ಬಂದಿದ್ದು ಮಾನವ ದೇಹದ ಅಂಗಗಳು!!*
*ಔಷಧಿ ಆರ್ಡರ್ ಮಾಡಿದ ಮಹಿಳೆಗೆ ಬಾಕ್ಸ್ನಲ್ಲಿ ಬಂದಿದ್ದು ಮಾನವ ದೇಹದ ಅಂಗಗಳು!!* ಔಷಧಿಗೆಂದು ಕಾಯುತ್ತಿದ್ದ ಮಹಿಳೆ ಬಾಕ್ಸ್ ನೋಡಿ ಹೌಹಾರಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಮಹಿಳೆ ಔಷಧಿಗಳನ್ನು ಆರ್ಡರ್ ಮಾಡಿದ್ದರು. ಮನೆಗೆ ಬಾಕ್ಸ್ ಬಂದ ಕೂಡಲೇ ತೆರೆದು ನೋಡಿದಾಗ ಅದರಲ್ಲಿ ಔಷಧಿಗಳಲ್ಲ ಬದಲಾಗಿ ಮನುಷ್ಯದ ದೇಹದ ಅಂಗಗಳಿರುವುದು ಕಂಡು ಬೆಚ್ಚಿಬಿದ್ದಿದ್ದಾರೆ. ಅದರಲ್ಲಿ ಮನುಷ್ಯನ ತೋಳುಗಳು ಹಾಗೂ ಬೆರಳುಗಳನ್ನು ಐಸ್ ಜತೆಗೆ ಇಟ್ಟಿರುವುದು ಕಂಡುಬಂದಿದೆ. ಕೆಂಟುಕಿಯ ಹಾಪ್ಕಿನ್ಸ್ವಿಲ್ಲೆಯಲ್ಲಿರುವ ತನ್ನ ಮನೆಯಲ್ಲಿ ಬುಧವಾರ ಪಾರ್ಸೆಲ್ ಪಡೆದ ನಂತರ, ಪೊಲೀಸರಿಗೆ ಕರೆ…


