ಮಲೆನಾಡು ಎಕ್ಸ್ ಪ್ರೆಸ್ ವಾರಪತ್ರಿಕೆಯಲ್ಲಿ ಈ ವಾರ ಏನಿದೆ ವಿಶೇಷ?
ಮಲೆನಾಡು ಎಕ್ಸ್ ಪ್ರೆಸ್ ವಾರಪತ್ರಿಕೆಯಲ್ಲಿ ಈ ವಾರ ಏನಿದೆ ವಿಶೇಷ?
ಮಲೆನಾಡು ಎಕ್ಸ್ ಪ್ರೆಸ್ ವಾರಪತ್ರಿಕೆಯಲ್ಲಿ ಈ ವಾರ ಏನಿದೆ ವಿಶೇಷ?
*ಲೋಕಾಯುಕ್ತ ಬಲೆಗೆ ಬಿದ್ದ ಸೊರಬ ಪುರಸಭೆಯ ಕಂದಾಯ ನಿರೀಕ್ಷಕ ವಿನಾಯಕ* ಸೊರಬ ಪುರಸಭೆಯ ಕಂದಾಯ ನಿರೀಕ್ಷಕ ವಿನಾಯಕ ಬಿನ್ ಗುರುವಯ್ಯ ಮಾ.6 ರ ಇಂದು 40,000₹ ಲಂಚ ಪಡೆಯುವಾಗ ಲೋಕಾಯುಕ್ತರಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ. ಈತ ಹೊನ್ನಾವರ ವಾಸಿ ಶ್ರೀಮತಿ ಪ್ರತಿಭಾ ಎಂ.ನಾಯ್ಕರಿಗೆ ಖಾಲಿ ನಿವೇಶನಕ್ಕೆ ಸಂಬಂಧಿಸಿದಂತೆ ಕೆಲಸ ಮಾಡಿಕೊಡಲು 50,000₹ ಗಳಿಗೆ ಬೇಡಿಕೆ ಇಟ್ಟಿದ್ದ.ಕೊನೆಗೆ 40,000₹ ಗಳಿಗೆ ಡೀಲ್ ಕುದುರಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಡಿವೈಎಸ್ ಪಿ ಉಮೇಶ್ ಈಶ್ವರ ನಾಯ್ಕ ಮತ್ತು…
ಮಾ.8; ಶಿವರಾತ್ರಿ ಪ್ರಯುಕ್ತ ಮಾಂಸ ಮಾರಾಟ ನಿಷೇಧ* ಶಿವಮೊಗ್ಗ; 08 ರಂದು ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ಮಾಂಸ ಮಾರಾಟದ ಮಾಲೀಕರು ತಮ್ಮ ಉದ್ದಿಮೆಯನ್ನು ಬಂದ್ ಮಾಡಿ ಸಹಕರಿಸಲು ಕೋರಿದೆ. ಈ ಆದೇಶವನ್ನು ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
*ಕಾನೂನಿನ ಸಂಘರ್ಷಕ್ಕೊಳಗಾದ ಮಕ್ಕಳಿಗೆ ಉತ್ತಮ ಪ್ರಜೆಯಾಗುವ ಅವಕಾಶವಿದೆ : ನ್ಯಾ.ಅಮೃತ ಎಸ್ ರಾವ್* ಶಿವಮೊಗ್ಗ; ಕಾನೂನಿನ ಸಂಘರ್ಷಕ್ಕೆ ಒಳಗಾದ ಮಕ್ಕಳು ಮುಂದೆ ಉತ್ತಮ ಪ್ರಜೆಯಾಗುವ ಅವಕಾಶವಿದ್ದು, ಬಾಲನ್ಯಾಯ ಕಾಯ್ದೆ ಉದ್ದೇಶ ಸಹ ಅವರನ್ನು ಉತ್ತಮ ಪ್ರಜೆಯಾಗಲು ಅವಕಾಶ ನೀಡುವುದಾಗಿದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ಅಮೃತ ಎಸ್.ರಾವ್ ನುಡಿದರು. ಮಕ್ಕಳ ರಕ್ಷಣಾ ನಿರ್ದೇಶನಾಲಯ, ಬೆಂಗಳೂರು, ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,…
*ಮಹಿಳಾ ದಿನಾಚರಣೆ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು : ಡಿಎಸ್ ಅರುಣ್ ಶಿವಮೊಗ್ಗ; ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತ ಆಗಬಾರದು ಎಂದು ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್ ಅರುಣ್ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಫೆ.6 ಮತ್ತು 07 ರಂದು ನಗರದ ನೆಹರು ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿರುವ 2023-24 ನೇ ಸಾಲಿನ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗಾಗಿ ಕ್ರೀಡಾಕೂಟ ಮತ್ತು…
Gm ಶುಭೋದಯ💐 *ಕವಿಸಾಲು* ಕಣ್ರೆಪ್ಪೆಯಲ್ಲಿ ಕಣ್ಣೀರು ಹೃದಯದಲ್ಲಿ ನೋವು ಈಗಷ್ಟೇ ಮಲಗಿದೆ; ನಗುವವರೇ ಮೆಲ್ಲಗೆ ನಗಿ… ನಿಗಿನಿಗಿ ಕೆಂಡದ ಮೇಲಿನ ಬೂದಿ ಹಾರೀತು! – *ಶಿ.ಜು.ಪಾಶ* 8050112067 (6/3/24)
ಕುವೆಂಪು ವಿವಿಗೆ* *ಅನಂತಮೂರ್ತಿ ಪುತ್ರ* *ಪ್ರೊ.ಶರತ್ ನೂತನ ಕುಲಪತಿ* ಕುವೆಂಪು ವಿಶ್ವವಿದ್ಯಾಲಯದ ನೂತನ ಕುಲಪತಿ ಯಾಗಿ ಪ್ರೊ. ಶರತ್ ಅನಂತಮೂರ್ತಿ ಅವರನ್ನು ನೇಮಿಸಿ ರಾಜ್ಯಪಾಲರು ಮಂಗಳವಾರ ಆದೇಶ ಹೊರಡಿಸಿದ್ದಾರೆ. ಪ್ರೊ. ಶರತ್ ಅವರು ಹೈದ್ರಾಬಾದ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಫಿಸಿಕ್ಸ್ ನಲ್ಲಿ ಪ್ರೊಫೆಸರ್ ಆಗಿದ್ದಾರೆ. ಇವರ ಅವಧಿ 4 ವರ್ಷವಿರುತ್ತದೆ. ಇವರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ದಿ. ಯು ಆರ್ ಅನಂತಮೂರ್ತಿ ಅವರ ಪುತ್ರ.
ಬೇರೆ ಮದುವೆಯಾಗಿಯೂ ಹೊಸ ಮದುವೆ ಆಗಿ ಮೋಸ ಮಾಡಿದವನಿಗೆ 6 ವರ್ಷ ಶಿಕ್ಷೆ ವಿಧಿಸಿದ ಶಿವಮೊಗ್ಗ ಕೋರ್ಟ್…ಆ ಮಹಿಳೆಗೂ 3 ವರ್ಷದ ಶಿಕ್ಷೆ!!!! 2017ರಲ್ಲಿ ಚಿಕ್ಕಮಗಳೂರು ಜಿಲ್ಲೆಯ 25 ವರ್ಷದ ಯುವತಿಗೆ ಶಿವಮೊಗ್ಗ ನಗರದ ವಿನೋದ್ ನೊಂದಿಗೆ ವಿವಾಹವಾಗಿದ್ದು, ಆದರೆ ಅವನು ಈ ಮೊದಲೇ *ಬೇರೆ ಮದುವೆಯಾಗಿದ್ದು* ಈ ಬಗ್ಗೆ ಯುವತಿಯು ಕೇಳಿದಾಗ ಆಕೆಯ ಮೇಲೆ *ಕೌಟುಂಬಿಕ ದೌರ್ಜನ್ಯವೆಸಗಿರುತ್ತಾರೆಂದು* ನೊಂದ ಯುವತಿ ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ *ಗುನ್ನೆ ಸಂಖ್ಯೆ 0004/2018 ಕಲಂ…
**** *//ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ ಚುನಾವಣೆ ತಯಾರಿ//* *ಕ್ಷೇತ್ರದ ಜೆಡಿಎಸ್, ಬಿಜೆಪಿ ಹಿರಿಯ ನಾಯಕರ ಜತೆ ಸಮಾಲೋಚನೆ* ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಿದ್ಧತೆ, ಅಭ್ಯರ್ಥಿ ಆಯ್ಕೆ ಇನ್ನಿತರೆ ಅಂಶಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ನಿವಾಸದಲ್ಲಿ ಎನ್ ಡಿಎ ಮೈತ್ರಿಕೂಟದ ನಾಯಕರ ಜತೆ ಮಹತ್ವದ ಸಮಾಲೋಚನೆ ನಡೆಸಿದರು. ಮಾಜಿ ಸಚಿವರಾದ ಸಿ.ಪಿ.ಯೋಗೇಶ್ವರ್, ಮುನಿರತ್ನ, ಡಿ.ನಾಗರಾಜಯ್ಯ, ಮಾಜಿ ಸಂಸದ ಕುಪೇಂದ್ರರೆಡ್ಡಿ, ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ಯುವ ಜನತಾದಳ ರಾಜ್ಯಾಧ್ಯಕ್ಷರಾದ…
*ಅಧಿಕೃತವಾಗಿ ಮರಳು ಲಭ್ಯವಾಗುವಂತೆ ಕ್ರಮ ವಹಿಸಲು ಡಿಸಿ ಸೂಚನೆ ಜಿಲ್ಲೆಯಲ್ಲಿ ಅವಧಿ ಮುಗಿದಿರುವ ಮರಳು ನಿಕ್ಷೇಪಗಳಿಗೆ ಮರಳು ನೀತಿಯನ್ವಯ ನವೀಕರಣಗೊಳಿಸಿ ಆದಷ್ಟು ಶೀಘ್ರದಲ್ಲಿ ಮರಳು ಲಭ್ಯವಾಗುವಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಟಾಸ್ಕ್ ಫೋರ್ಸ್, ಜಿಲ್ಲಾ ಮರಳು ಸಮಿತಿ ಮತ್ತು ಜಿಲ್ಲಾ ಕ್ರಷರ್ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಧಿಕೃತವಾಗಿ ಸಾರ್ವಜನಿಕರಿಗೆ ಮರಳು ಲಭ್ಯವಾಗುವಂತೆ ಕ್ರಮ ವಹಿಸಬೇಕು …