ಪೊಲೀಸ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದೇನು?
*ಶಿವಮೊಗ್ಗ ನಗರದಲ್ಲಿ ಪೊಲೀಸ್ ಇಲಾಖೆಯು ನೂತನವಾಗಿ ನಿರ್ಮಿಸಿರುವ ಜಿಲ್ಲಾ ಪೊಲೀಸ್ ಭವನವನ್ನು ಉದ್ಘಾಟಿಸಿದ ಗೃಹ ಸಚಿವ ಜಿ.ಪರಮೇಶ್ವರ ಅವರು, ಬಳಿಕ ಶಿವಮೊಗ್ಗ ಜಿಲ್ಲಾ ಪೊಲೀಸ್ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕೆಲವು ಕಟ್ಟುನಿಟ್ಟಿನ ಸೂಚನೆ ನೀಡಿದರು.* *ಕೆಲ ಅಂಶಗಳು…* √ ಸಮಾಜದ ಶಾಂತಿ ಕದಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ, ಸುಳ್ಳು ಸುದ್ದಿ, ವಿವಾದಾತ್ಮಕ ಪೋಸ್ಟ್ಗಳನ್ನು ಪ್ರಕಟಿಸುವರ ಮೇಲೆ ನಿಗಾವಹಿಸಿ, ಕಾನೂನು ಚೌಕಟ್ಟಿನಲ್ಲಿ ಕ್ರಮ ಜರುಗಿಸುವಂತೆ ಸೂಚಿಸಿದರು….
ಗೃಹ ಸಚಿವ ಪರಮೇಶ್ವರ್ ಮುಂದೆ ಹೆಚ್.ಸಿ.ಯೋಗೇಶ್ ಇಟ್ಟ ಆ ಐದು ಬೇಡಿಕೆಗಳೇನು?
ಗೃಹ ಸಚಿವ ಪರಮೇಶ್ವರ್ ಮುಂದೆ ಹೆಚ್.ಸಿ.ಯೋಗೇಶ್ ಇಟ್ಟ ಆ ಐದು ಬೇಡಿಕೆಗಳೇನು? ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಂತಹ ಹೆಚ್ ಸಿ ಯೋಗೇಶ್ ರವರು ಶಿವಮೊಗ್ಗ ನಗರಕ್ಕೆ ಆಗಮಿಸಿದ್ದ ಕರ್ನಾಟಕ ರಾಜ್ಯ ಸರ್ಕಾರದ ಗೃಹ ಮಂತ್ರಿಗಳಾದ ಡಾ. ಜಿ ಪರಮೇಶ್ವರ್ ರವರಿಗೆ ಶಿವಮೊಗ್ಗ ನಗರದಲ್ಲಿನ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರಿಗೆ ಸಂಬಂಧಿಸಿದಂತೆ ಕೆಲವು ಬೇಡಿಕೆಗಳ ಪಟ್ಟಿ ನೀಡಿದರು. ಶಿವಮೊಗ್ಗ ನಗರವು ಬೃಹದಾಕಾರವಾಗಿ ಬೆಳೆದಿದ್ದು ಜನಸಂಖ್ಯೆಯು ಸಹ ಅಧಿಕವಾಗಿದ್ದು ಸುಮಾರು ನಾಲ್ಕು ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು…
ಗೃಹ ಸಚಿವ ಪರಮೇಶ್ ರಿಂದ ಪೊಲೀಸ್ ಸಮುದಾಯ ಭವನ ಉದ್ಘಾಟನೆ*3.75 ಕೋಟಿ ವೆಚ್ಚ500 ಆಸನದ ಸಾಮರ್ಥ್ಯಊಟದ ಹಾಲ್ ಸೇರಿದಂತೆ ಸುಸಜ್ಜಿತ ಭವನ
*ಗೃಹ ಸಚಿವ ಪರಮೇಶ್ ರಿಂದ ಪೊಲೀಸ್ ಸಮುದಾಯ ಭವನ ಉದ್ಘಾಟನೆ* 3.75 ಕೋಟಿ ವೆಚ್ಚ 500 ಆಸನದ ಸಾಮರ್ಥ್ಯ ಊಟದ ಹಾಲ್ ಸೇರಿದಂತೆ ಸುಸಜ್ಜಿತ ಭವನ ಶಿವಮೊಗ್ಗದ ಡಿ.ಎ.ಆರ್. ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪೊಲೀಸ್ ಸಮುದಾಯ ಭವನದ ಉದ್ಘಾಟನೆಯನ್ನು ಶನಿವಾರದಂದು ಕರ್ನಾಟಕ ಸರ್ಕಾರದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ನೆರವೇರಿಸಿದರು. ಡಿ.ಎ.ಆರ್ ಆವರಣದಲ್ಲಿ 3.75 ಕೋಟಿ ವೆಚ್ಚದಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ನೂತನವಾಗಿ ಪೊಲೀಸ್ ಸಮುದಾಯ ಭವನವನ್ನು ನಿರ್ಮಿಸಲಾಗಿದೆ. 500 ಸೀಟಿಂಗ್ ಸಾಮರ್ಥ್ಯ, ಊಟದ ಹಾಲ್ ಸೇರಿದಂತೆ ಸುಸಜ್ಜಿತವಾಗಿ…
ಶಿವಮೊಗ್ಗ ಮಾಜಿ ನಗರಸಭಾ ಅಧ್ಯಕ್ಷ ಪಿ.ರಾಮಪ್ಪ ನಿಧನ*
*ಮಾಜಿ ನಗರಸಭಾ ಅಧ್ಯಕ್ಷ ಪಿ.ರಾಮಪ್ಪ ನಿಧನ* ಶಿವಮೊಗ್ಗ ನಗರಸಭೆ ಮಾಜಿ ಅಧ್ಯಕ್ಷರು, ಭೋವಿ ಸಮಾಜದ ಮುಖಂಡರು ಆದ ಪಿ.ರಾಮಪ್ಪ(82) ಇಂದು ಮುಂಜಾನೆ 1.30 ಕ್ಕೆ ಹುಬ್ಬಳಿಯ ಸ್ವಗೃಹದಲ್ಲಿ ನಿಧನರಾದರು. ಮೃತ ಪಿ.ರಾಮಪ್ಪ ಶಿವಮೊಗ್ಗ ಹೊಸಮನೆ ಬಡಾವಣೆಯ 1ನೆ ತಿರುವಿನ ನಿವಾಸಿಯಾಗಿದ್ದು,ಶಿವಮೊಗ್ಗ ನಗರಸಭೆ 4 ನೆ ವಾರ್ಡಿನ ಕೌನ್ಸಿಲರ್ ಆಗಿದ್ದ ಅವರು,ನಗರಸಭೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಗಿಡ ನೆಡುವ ಮೂಲಕ ಜನಪ್ರಿಯರಾಗಿದ್ದ ರಲ್ಲದೇ ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ ಅರಸು, ದಿ.ಬದರಿ ನಾರಾಯಣ್ ಐಯ್ಯಂಗಾರ್, ದಿ.K.H.ಶ್ರೀನಿವಾಸ್…
ರಂಗಾಯಣದಲ್ಲಿ ನಾಟಕ ಅವಲೋಕನ ಕಾರ್ಯಾಗಾರ; ಗುಣಮುಖ ಓದಿ ಉದ್ಘಾಟನೆ ಮಾಡಿದ ನಟರಾಜ್ ಹೊನ್ನವಳ್ಳಿ
ರಂಗಾಯಣದಲ್ಲಿ ನಾಟಕ ಅವಲೋಕನ ಕಾರ್ಯಾಗಾರ; ಗುಣಮುಖ ಓದಿ ಉದ್ಘಾಟನೆ ಮಾಡಿದ ನಟರಾಜ್ ಹೊನ್ನವಳ್ಳಿ ಶಿವಮೊಗ್ಗ ರಂಗಾಯಣದಲ್ಲಿ ‘ನಾಟಕ ಅವಲೋಕನ ಕಾರ್ಯಾಗಾರ’ವನ್ನು ಇಂದು ರಂಗನಿರ್ದೇಶಕರಾದ ನಟರಾಜ್ ಹೊನ್ನವಳ್ಳಿ ಇವರು ‘ಗುಣಮುಖ’ ನಾಟಕದ ತುಣುಕೊಂದನ್ನು ಓದುವುದರ ಮೂಲಕ ಉದ್ಘಾಟಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಂಗಾಯಣ, ಶಿವಮೊಗ್ಗದ ನಿರ್ದೇಶಕರಾದ ಪ್ರಸನ್ನ ಡಿ ಸಾಗರ ಇವರು ವಹಿಸಿದ್ದರು. ಅತಿಥಿಗಳಾಗಿ ಕೊಟ್ರಪ್ಪ ಹಿರೇಮಾಗಡಿ, ರಂಗಕರ್ಮಿಗಳು ಹಾಗೂ ನಿಕಟಪೂರ್ವ ಅಧ್ಯಕ್ಷರು, ಕಲಾವಿದರ ಒಕ್ಕೂಟ, ಶಿವಮೊಗ್ಗ ಇವರು ಆಗಮಿಸಿದ್ದರು. ಡಾ.ಶೈಲಜಾ ಎ.ಸಿ., ಆಡಳಿತಾಧಿಕಾರಿಗಳು, ರಂಗಾಯಣ, ಶಿವಮೊಗ್ಗ, ಇವರು…
ತಂಬಾಕು ದಾಳಿ : 751 ಪ್ರಕರಣ ದಾಖಲು*50210 ₹ ದಂಡ ವಸೂಲಿ
*ತಂಬಾಕು ದಾಳಿ : 751 ಪ್ರಕರಣ ದಾಖಲು* 50210 ₹ ದಂಡ ವಸೂಲಿ ಶಿವಮೊಗ್ಗ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ತಂಬಾಕು ಮುಕ್ತ ಯುವ ಅಭಿಯಾನ 2.0 ಪ್ರಯುಕ್ತ ಅ.22 ರಂದು ಜಿಲ್ಲೆಯಾದ್ಯಂತ ಏಕಕಾಲದಲ್ಲಿ 32 ತಂಬಾಕು ದಾಳಿ ನಡೆಸಲಾಯಿತು. ಜಿಲ್ಲೆಯ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಏಕ ಕಾಲದಲ್ಲಿ ಕೋಟ್ಪಾ ಕಾಯ್ದೆ ಉಲ್ಲಂಘಿಸುವವರ ವಿರುದ್ದ ದಾಳಿಯನ್ನು ಹಮ್ಮಿಕೊಂಡು ಒಟ್ಟು 751 ಪ್ರಕರಣ ದಾಖಲಿಸಿ, ರೂ.50210 ದಂಡವನ್ನು ಸಂಗ್ರಹಿಸಲಾಯಿತು
ನೂತನ ಪೊಲೀಸ್ ಭವನ; ಅ.26ಕ್ಕೆ ಉದ್ಘಾಟಿಸಲಿದ್ದಾರೆ ಗೃಹಮಂತ್ರಿ ಡಾ.ಜಿ.ಪರಮೇಶ್ವರ್*
*ನೂತನ ಪೊಲೀಸ್ ಭವನ; ಅ.26ಕ್ಕೆ ಉದ್ಘಾಟಿಸಲಿದ್ದಾರೆ ಗೃಹಮಂತ್ರಿ ಡಾ.ಜಿ.ಪರಮೇಶ್ವರ್* ಶಿವಮೊಗ್ಗ ಪೊಲೀಸ್ ಇಲಾಖೆಯ ನೂತನ ಪೊಲೀಸ್ ಭವನದ ಉದ್ಘಾಟನಾ ಸಮಾರಂಭವನ್ನು ಅ.26 ರಂದು ಬೆಳಿಗ್ಗೆ 11 ಕ್ಕೆ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ರಾಜ್ಯ ಸರ್ಕಾರದ ಗೃಹಮಂತ್ರಿಗಳಾದ ಡಾ. ಜಿ. ಪರಮೇಶ್ವರರವರು ಭವನದ ಉದ್ಘಾಟನೆ ನೆರವೇರಸಲಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉಪಸ್ಥಿತಿಯಲ್ಲಿ ಶಾಸಕರು ಹಾಗೂ ಕ.ರಾ.ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಕೆ….