Headlines

Featured posts

Latest posts

All
technology
science

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

ಜನವರಿ, 17 ಮತ್ತು 18 ರಂದು ಶಿವಮೊಗ್ಗದ ಫ್ರೀಡಂ ಪಾರ್ಕಲ್ಲಿ  ವೀಣಾ ತ್ರಿಶತೋತ್ಸವ-2026* ನಾದ.. ನಿನಾದ.. ಝೇಂಕಾರ.. : ಏಕ ನಾದಂ ಬಹು ವೀಣಾಃ

*ಜನವರಿ, 17 ಮತ್ತು 18 ರಂದು ಶಿವಮೊಗ್ಗದ ಫ್ರೀಡಂ ಪಾರ್ಕಲ್ಲಿ  ವೀಣಾ ತ್ರಿಶತೋತ್ಸವ-2026* ನಾದ.. ನಿನಾದ.. ಝೇಂಕಾರ.. : ಏಕ ನಾದಂ ಬಹು ವೀಣಾಃ ನಗರದ ತಿಲಕ್‌ನಗರದಲ್ಲಿರುವ ಪ್ರತಿಷ್ಟಿತ ಶ್ರೀ ಸರಸ್ವತಿ ಸಂಗೀತ ವಿದ್ಯಾಲಯ, ಸುಶ್ರಾವ್ಯ ಮತ್ತು ಸಾಯಿಶೃತಿ ಸಂಗೀತ ವಿದ್ಯಾಲಯ ಇವರುಗಳ ಸಹಯೋಗದಲ್ಲಿ ನಗರದ ಅಲ್ಲಮಪ್ರಭು (ಫ್ರೀಡಂ ಪಾರ್ಕ್) ನಲ್ಲಿ ಶ್ರೀ ಸರಸ್ವತಿ ಸಂಗೀತ ವಿದ್ಯಾಲಯದ ರಜತ ಮಹೋತ್ಸವದ ಅಂಗವಾಗಿ ಜನವರಿ 17 ರ ಶನಿವಾರ ಮತ್ತು 18 ರ ಭಾನುವಾರ “ವೀಣಾ ತ್ರಿಶತೋತ್ಸವ-2026” ವೀಣಾ…

Read More

ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಜ. 19ರಂದು ವಾರಸುದಾರರಿಲ್ಲದ ವಾಹನಗಳ ಹರಾಜು

ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಜ. 19ರಂದು ವಾರಸುದಾರರಿಲ್ಲದ ವಾಹನಗಳ ಹರಾಜು ಶಿವಮೊಗ್ಗ: ವಿನೋಬನಗರ ಪೊಲೀಸ್ ಠಾಣೆಯಲ್ಲಿ ವಾರಸುದಾರರು ಇಲ್ಲದ ವಾಹನಗಳ ಹರಾಜು ವಿಲೇವಾರಿ ಪ್ರಕ್ರಿಯೆ ಯನ್ನು ಜ. 19 ರ ಸೋಮವಾರದಂದು  ನಡೆಸ ಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವಿನೋಬನಗರ ಪೊಲೀಸ್ ಠಾಣೆಯ ಆವರಣದಲ್ಲಿ ವಾರಸುದಾರರು ಇಲ್ಲದ 14 ವಾಹನಗಳನ್ನು ವಿಲೇವಾರಿ ಮಾಡುವಂತೆ  3ನೇ ಜೆ.ಎಂ.ಎಫ್.ಸಿ ನ್ಯಾಯಾಲಯ ಶಿವಮೊಗ್ಗ ನ್ಯಾಯಾಲಯದ ಆದೇಶದಂತೆ ದಿನಾಂಕ 19-01-2026 ರಂದು ಬೆಳಿಗ್ಗೆ 10:00 ಗಂಟೆಗೆ ವಿನೋಬನಗರ ಪೊಲೀಸ್ ಠಾಣಾ ಆವರಣದಲ್ಲಿ…

Read More

*ಸಂಕ್ರಾಂತಿ ಹಬ್ಬದಂದೇ ಭೀಕರ ಕೊಲೆ;* *ಪ್ರಿಯತಮೆಯನ್ನು ಚುಚ್ಚಿ ಕೊಂದ ಪ್ರಿಯಕರ*

*ಸಂಕ್ರಾಂತಿ ಹಬ್ಬದಂದೇ ಭೀಕರ ಕೊಲೆ;* *ಪ್ರಿಯತಮೆಯನ್ನು ಚುಚ್ಚಿ ಕೊಂದ ಪ್ರಿಯಕರ* ಪ್ರಿಯಕರನಿಂದ ಪ್ರಿಯತಮೆಯ ಬರ್ಬರ ಹತ್ಯೆ (murder) ನಡೆದಿರುವಂತಹ ಘಟನೆ ಕೋಲಾರ (Kolar) ಹೊರವಲಯದ ಬಂಗಾರಪೇಟೆ ರಸ್ತೆಯಲ್ಲಿ ನಡೆದಿದೆ. ಚಾಕುವಿನಿಂದ ಇರಿದು ಸುಜಾತಾ(27)ರನ್ನು ಚಿರಂಜೀವಿ ಕೊಲೆಗೈದಿದ್ದಾನೆ. ಕಳೆದ ಕೆಲವು ದಿನಗಳಿಂದ ಇಬ್ಬರ ಪ್ರೀತಿಯಲ್ಲಿ ವಿರಸ ಉಂಟಾಗಿದ್ದು, ಅದುವೇ ಕೊಲೆಗೆ ಕಾರಣ ಎನ್ನಲಾಗುತ್ತಿದೆ. ಸದ್ಯ ಸ್ಥಳೀಯರು‌ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಯಾದ ಸುಜಾತಾ ಬಂಗಾರಪೇಟೆಯ ಮಾರುತಿ ನಗರದ ನಿವಾಸಿ….

Read More

65 ಲಕ್ಷದ ನಿಧಿಯಲ್ಲಿ ಕುಟುಂಬಕ್ಕೆ ಸಿಗುವ ಪಾಲು ಎಷ್ಟು?* *ನಿಧಿ ಪತ್ತೆಯಾದ ಲಕ್ಕುಂಡಿ ಜನರಿಗೆ ಆತಂಕ*

*65 ಲಕ್ಷದ ನಿಧಿಯಲ್ಲಿ ಕುಟುಂಬಕ್ಕೆ ಸಿಗುವ ಪಾಲು ಎಷ್ಟು?* *ನಿಧಿ ಪತ್ತೆಯಾದ ಲಕ್ಕುಂಡಿ ಜನರಿಗೆ ಆತಂಕ* ಚಾಲುಕ್ಯರ ಕಾಲದ ಐತಿಹಾಸಿಕ ದೇವಾಲಯಗಳ ತವರೂರು, ‘ಶಿಲ್ಪಕಲೆಯ ನೆಲೆವೀಡು’ ಎಂದೇ ಪ್ರಖ್ಯಾತಿ ಪಡೆದಿರುವ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಈಗ ‘ನಿಧಿ’ಯ ಚರ್ಚೆ ತೀವ್ರಗೊಂಡಿದೆ. ಇತ್ತೀಚೆಗೆ ಗ್ರಾಮದ ರಿತ್ತಿ ಕುಟುಂಬದ ಮನೆಯ ಪಾಯ ಅಗೆಯುವಾಗ ಅನಿರೀಕ್ಷಿತವಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ನಿಧಿ ಪತ್ತೆಯಾದ ಬೆನ್ನಲ್ಲೇ, ಸರ್ಕಾರಕ್ಕೆ ಸಂತಸವಾದರೆ-ಗ್ರಾಮಸ್ಥರಿಗೆ ಸಂಕಷ್ಟ ಎದುರಾಗಿದೆ. ಲಕ್ಕುಂಡಿಯ ಹೊರವಲಯದಲ್ಲಿರುವ ಪುರಾತನ ಗೋಣಿ ಬಸವೇಶ್ವರ ದೇವಸ್ಥಾನ ಈಗ…

Read More

*9ನೇ ಕ್ಲಾಸ್ ಹುಡುಗರಿಂದ 10ನೇ ಕ್ಲಾಸ್ ಬಾಲಕನ ಭೀಕರ ಕೊಲೆ!* *ಕೊಲೆ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ ಬಾಲಕ ‘ಡಾನ್’ಗಳು*

*9ನೇ ಕ್ಲಾಸ್ ಹುಡುಗರಿಂದ 10ನೇ ಕ್ಲಾಸ್ ಬಾಲಕನ ಭೀಕರ ಕೊಲೆ!* *ಕೊಲೆ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ ಬಾಲಕ ‘ಡಾನ್’ಗಳು* ಅಪ್ರಾಪ್ತ ಬಾಲಕರಿಂದಲೇ ಅಪ್ರಾಪ್ತ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯ ಭೀಕರ ಹತ್ಯೆ. ಸಾಮಾಜಿಕ ಜಾಲತಾಣ ಪ್ರಚೋದನೆಯ ಶಂಕೆ. ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ಅಪ್ರಾಪ್ತ ಬಾಲಕರಿಂದಲೇ ಅಪ್ರಾಪ್ತ ಬಾಲಕನನ್ನು ಚಾಕುವಿನಿಂದ ಇರಿದು ಹತ್ಯೆಗೈದ ಮನಕಲಕುವ ಘಟನೆ ಬುಧವಾರ ಸಂಜೆ ನಡೆದಿದೆ. ಈ ಘಟನೆ ಜಿಲ್ಲೆಯಲ್ಲಿ ಭಾರೀ ಆಘಾತಕ್ಕೆ ಕಾರಣವಾಗಿದ್ದು, ಬಾಲಕರ ಮೇಲೆ ಸಾಮಾಜಿಕ ಜಾಲತಾಣಗಳ ದುಷ್ಪ್ರಭಾವದ ಬಗ್ಗೆ…

Read More

*ಸಕ್ರಾಂತಿ ದಿನವೇ ಪಥ ಬದಲಿಸಿದ ಹೆಚ್ ಡಿ ಕೆ;* *2028ಕ್ಕೆ ರಾಜ್ಯ ರಾಜಕಾರಣಕ್ಕೆ ರೀ-ಎಂಟ್ರಿ!*

*ಸಕ್ರಾಂತಿ ದಿನವೇ ಪಥ ಬದಲಿಸಿದ ಹೆಚ್ ಡಿ ಕೆ;* *2028ಕ್ಕೆ ರಾಜ್ಯ ರಾಜಕಾರಣಕ್ಕೆ ರೀ-ಎಂಟ್ರಿ!* ‘ನಾನು ಸದ್ಯಕ್ಕೆ ಮೈತ್ರಿ ಸರ್ಕಾರದ ಭಾಗವಾಗಿ ಕೇಂದ್ರದಲ್ಲಿ ಸಚಿವನಾಗಿದ್ದೇನೆ. ಹಾಗಂತ ನಾನು ರಾಜ್ಯ ರಾಜಕಾರಣದಿಂದ ದೂರ ಸರಿಯುತ್ತೇನೆ ಎಂದು ಯಾರೂ ಅಂದುಕೊಳ್ಳಬೇಡಿ. ನಾನು ಎಲ್ಲಿರಬೇಕು ಎಂಬುದನ್ನು ರಾಜ್ಯದ ಜನತೆ ನಿರ್ಧಾರ ಮಾಡುತ್ತಾರೆ ಎಂದು ಹೇಳುವ ಮೂಲಕ 2028ರ ವಿಧಾನಸಭಾ ಚುನಾವಣೆಗೆ ವಾಪಸ್ ರಾಜ್ಯ ರಾಜಕಾರಣಕ್ಕೆ ವಾಪಸ್ ಬರುವ ಸುಳಿವನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ…

Read More

ಕುವೆಂಪು ರಂಗಮಂದಿರದಲ್ಲಿ ಜ.17-18ರಂದು ಎರಡು ದಿನ “ಗಾನ ಗಂಧರ್ವನ ನೂರೊಂದು ನೆನಪು” 

ಕುವೆಂಪು ರಂಗಮಂದಿರದಲ್ಲಿ ಜ.17-18ರಂದು ಎರಡು ದಿನ “ಗಾನ ಗಂಧರ್ವನ ನೂರೊಂದು ನೆನಪು” **************************************** ಶಿವಮೊಗ್ಗ : ನಗರದ ಹೆಸರಾಂತ “ರಾಗರಂಜನಿ” ಸಾಂಸ್ಕೃತಿಕ ಸಂಸ್ಥೆಯ ದಶಮಾನೋತ್ಸವದ ಅಂಗವಾಗಿ ಜನವರಿ 17 ರ ಶನಿವಾರ ಮತ್ತು 18 ರ ಭಾನುವಾರ ಕುವೆಂಪು ರಂಗಮಂದಿರದಲ್ಲಿ “ಎಸ್ ಪಿ ಬಿ ಗೆ ಸ್ವರ ನಮನ” ಕಾರ್ಯಕ್ರಮ ನಡೆಯಲಿದೆ. ಈ ಕುರಿತು ಮಾಹಿತಿ ನೀಡಿದ “ರಾಗರಂಜನಿ” ಸಂಸ್ಥೆಯ ಮುಖ್ಯಸ್ಥ, ಪ್ರಖ್ಯಾತ ಸುಗಮ ಸಂಗೀತ ಗಾಯಕ ಪ್ರಹ್ಲಾದ್ ದೀಕ್ಷಿತ್ ರವರು, ಜ. 17 ರ ಶನಿವಾರ…

Read More

ಕವಿಸಾಲು

*ಮೊದಲ ಹಬ್ಬ ಮಕರ ಸಂಕ್ರಾಂತಿಯ ಶುಭಾಶಯಗಳು ನಿಮಗೆ💐* Gm ಶುಭೋದಯ💐💐 *ಕವಿಸಾಲು* 1. ಹುಷಾರು ಜಗತ್ತೇ, ನಿನ್ನ ಮನೆಯ ನೌಕರ ತನ್ನ ಮನೆಯ ಮಾಲೀಕನು… 2. ಉರಿಯುವವರಿಗೆ ಉರಿಯಲು ಬಿಡು… ಕೊನೆಗಾಗುವುದವರು ಬೂದಿಯೇ! 3. ಎಲ್ಲದೂ ಸಿಗುವುದಿಲ್ಲ ಬದುಕಲ್ಲಿ… ಮುಗುಳ್ನಕ್ಕು ಬಿಟ್ಟು ಬಿಡಬೇಕು ಕೆಲವೊಂದನ್ನು! – *ಶಿ.ಜು.ಪಾಶ* 8050112067 (15/1/2026)

Read More

*ಅಡವಿಟ್ಟಾಗ ಅಸಲಿ ಚಿನ್ನ- ಬಿಡಿಸಿಕೊಂಡಾಗ ನಕಲಿ ಚಿನ್ನ!* *SBI ಬ್ಯಾಂಕಲ್ಲಿ ಇದೇನಿದು ಮೋಸ?- ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ*

*ಅಡವಿಟ್ಟಾಗ ಅಸಲಿ ಚಿನ್ನ- ಬಿಡಿಸಿಕೊಂಡಾಗ ನಕಲಿ ಚಿನ್ನ!* *SBI ಬ್ಯಾಂಕಲ್ಲಿ ಇದೇನಿದು ಮೋಸ?- ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ* ಇತ್ತೀಚೆಗೆ ಮೈಸೂರಿನಲ್ಲಿ ಕೆನರಾ ಬ್ಯಾಂಕ್​​ನಲ್ಲಿ ಗ್ರಾಹಕರು ಗಿರವಿ ಇಟ್ಟಿದ್ದ ಚಿನ್ನದಲ್ಲಿ ಮೋಸವೆಸಗಿದ್ದ ಆರೋಪ ಕೇಳಿಬಂದಿತ್ತು. ಇದೀಗ ಅಂತಹದ್ದೇ ಒಂದು ಘಟನೆ ಬೆಂಗಳೂರಿನಲ್ಲಿ (bangaluru) ನಡೆದಿದೆ. ಅಡವಿಟ್ಟು ಬಿಡಿಸಿಕೊಂಡಿದ್ದ ಚಿನ್ನದ ಚೈನ್​ ಪರಿಶೀಲಿಸಿದಾಗ ನಕಲಿ ಎಂಬುವುದು ಪತ್ತೆ ಆಗಿದೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​ನ ಎಸ್​​ಬಿಐ (SBI) ಶಾಖೆಯಲ್ಲಿ ಘಟನೆ ನಡೆದಿದ್ದು, ದಂಪತಿ ಮೋಸ ಹೋಗಿದ್ದಾರೆ. ಸದ್ಯ ಮಹಾಲಕ್ಷ್ಮೀ ಲೇಔಟ್…

Read More

*ಕಾರ್ಮಿಕ ಇಲಾಖೆಯಿಂದ ದಿಡೀರ್ ಕಾರ್ಯಾಚರಣೆ* *4 ಬಾಲ ಕಾರ್ಮಿಕರ ಪತ್ತೆ*

*ಕಾರ್ಮಿಕ ಇಲಾಖೆಯಿಂದ ದಿಡೀರ್ ಕಾರ್ಯಾಚರಣೆ* *4 ಬಾಲ ಕಾರ್ಮಿಕರ ಪತ್ತೆ* ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಮಕ್ಕಳ ಸಹಾಯವಾಣಿ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಅನಿರೀಕ್ಷಿತ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿದ್ದು, 4 ಕಿಶೋರಾ ಕಾರ್ಮಿಕರು ಪತ್ತೆಯಾಗಿದ್ದಾರೆ. ಈ ಕಿಶೋರಾ ಕಾರ್ಮಿಕರನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರು ಪಡಿಸಲಾಗಿದೆ ಎಂದು ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ತಪಾಸಣೆಯಲ್ಲಿ ಬಾಲಕಾರ್ಮಿಕ ಹಾಗೂ…

Read More