*ಅ.26 ರಂದು ಯಕ್ಷ ಸಂಗಮ ಬಳಗದಿಂದ ಯಕ್ಷದೀಪ*
*ಅ.26 ರಂದು ಯಕ್ಷ ಸಂಗಮ ಬಳಗದಿಂದ ಯಕ್ಷದೀಪ* ಯಕ್ಷ ಸಂಗಮ ಬಳಗ ಇವರ ಸಂಯೋಜನೆಯಲ್ಲಿ ಅ. ೨೬ರಂದು ಸಂಜೆ ೪.೩೦ರಿಂದ ರಾತ್ರಿ ೧೦ ಗಂಟೆಯವರೆಗೆ ಕುವೆಂಪು ರಂಗಮಂದಿರದಲ್ಲಿ ಯಕ್ಷದೀಪ ಎಂಬ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದರ ಅಂಗವಾಗಿ ಚಕ್ರಸಂಭವ, ಅಗ್ನಿಸಂಭವೆ ಎಂಬ ಎರಡು ಪೌರಾಣಿಕ ಯಕ್ಷಗಾನ ಪ್ರಸಂಗಗಳನ್ನು ಆಯೋಜಿಸಲಾಗಿದೆ ಎಂದು ಯಕ್ಷ ಸಂಗಮ ಬಳಗದ ಶ್ರೀನಿವಾಸ ಆಚಾರ್ಯ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಎರಡು ಯಕ್ಷಗಾನ ಪ್ರಸಂಗಗಳು ವಿಶೇಷವಾಗಿದ್ದು ತೆಂಗು ತಿಟ್ಟು ಮತ್ತು ಬಡಗುತಿಟ್ಟು ಕಲಾವಿದರ…


