ಡೆಂಗ್ಯೂ, ಚಿಕೂನ್ಗುನ್ಯ, ಮಂಗನಕಾಯಿಲೆ ನಿಯಂತ್ರಣಕ್ಕೆ ಕ್ರಮ : ಗುರುದತ್ತಹೆಗಡೆ*
*ಡೆಂಗ್ಯೂ, ಚಿಕೂನ್ಗುನ್ಯ, ಮಂಗನಕಾಯಿಲೆ ನಿಯಂತ್ರಣಕ್ಕೆ ಕ್ರಮ : ಗುರುದತ್ತಹೆಗಡೆ* ಶಿವಮೊಗ್ಗ : ಪ್ರತಿವರ್ಷ ಬೇಸಿಗೆಯಲ್ಲಿ ಉಲ್ಬಣಗೊಳ್ಳಬಹುದಾದ ಡೇಂಗ್ಯೂ, ಚಿಕೂನ್ಗುನ್ಯ ಮತ್ತು ಮಂಗನಕಾಯಿಲೆಯಂತಹ ರೋಗಗಳ ಉಲ್ಬಣಗೊಳ್ಳದಂತೆ ನಿಯಂತ್ರಣ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಅಗ್ತತ್ಯ ಸುರಕ್ಷತಾ ಕ್ರಮಗಳನ್ನುಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು. ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಡೇಂಗ್ಯೂ, ಚಿಕೂನ್ಗುನ್ಯ ಮತ್ತು ಮಂಗನಕಾಯಿಲೆಯ ಇಂದಿನ ಸ್ಥಿತಿಗತಿ ಹಾಗೂ ಕೈಗೊಳ್ಳಬಹುದಾದ ನಿಯಂತ್ರನ ಕ್ರಮಗಳ ಕುರಿತು ಏರ್ಪಡಿಸಲಾಗಿದ್ದ ವೈದ್ಯಾಧಿಕಾರಿಗಳೊಂದಿಗಿನ ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯ…