ಕುವೆಂಪು ವಿವಿಯಲ್ಲಿ 79ನೇ ಸ್ವಾತಂತ್ರೋತ್ಸವ ಆಚರಣೆ* *ಸಂಪದ್ಭರಿತವಾದ ಸುಸ್ಥಿರ ದೇಶ ಕಟ್ಟಲು ಕೈ ಜೋಡಿಸೋಣ: ಪ್ರೊ. ಶರತ್ ಅನಂತಮೂರ್ತಿ*
*ಕುವೆಂಪು ವಿವಿಯಲ್ಲಿ 79ನೇ ಸ್ವಾತಂತ್ರೋತ್ಸವ ಆಚರಣೆ* *ಸಂಪದ್ಭರಿತವಾದ ಸುಸ್ಥಿರ ದೇಶ ಕಟ್ಟಲು ಕೈ ಜೋಡಿಸೋಣ: ಪ್ರೊ. ಶರತ್ ಅನಂತಮೂರ್ತಿ* ಶಂಕರಘಟ್ಟ, ಆ. 15: ದೇಶ ಇಂದು ಸಂಪದ್ಭರಿತವಾಗಿದ್ದರೂ ಅನೇಕ ಜ್ವಲಂತ ಸವಾಲುಗಳನ್ನು ಕೂಡ ಎದುರಿಸುತ್ತಿದ್ದು, ಅವನ್ನು ಬಗೆಹರಿಸಿ ಸಂಪನ್ಮೂಲಗಳನ್ನು ಸೃಷ್ಟಿಸಿ ಸುಸ್ಥಿರತೆಯನ್ನು ಸಾಧಿಸುವುದರತ್ತ ಹೆಜ್ಜೆಯಿಡೋಣ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಭಿಪ್ರಾಯಪಟ್ಟರು. ದೇಶವನ್ನು ಸುಸ್ಥಿರವಾಗಿ ಕಟ್ಟುವಲ್ಲಿ ಮತ್ತು ನಮಗೆ ದೊರೆತ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು…