ಏನಿದೆ ಈ ವಾರದ ಮಲೆನಾಡು ಎಕ್ಸ್ ಪ್ರೆಸ್ ವಾರಪತ್ರಿಕೆಯಲ್ಲಿ?
ಯಡಿಯೂರಪ್ಪ ಮತ್ತು ಪೋಕ್ಸೋ; ಏನಿದು ಕಥೆ? ಯಾರು ಈ ಶಿವರುದ್ರಯ್ಯಸ್ವಾಮಿ? ಲೋಕಾ ಸ್ಪರ್ಧೆಗೆ ಕಾರಣವೇನು? ಶಿವಮೊಗ್ಗ ಜಿಲ್ಲೆಗೂ ಕಾಲಿಟ್ಟ ಏಲಕ್ಕಿ ಹಗರಣ! ಬಿಜೆಪಿ ಬಂಡಾಯ ಅಭ್ಯರ್ಥಿ ಈಶ್ವರಪ್ಪಾನಾ? ಕಾಂತೇಶಾನಾ?
ಯಡಿಯೂರಪ್ಪ ಮತ್ತು ಪೋಕ್ಸೋ; ಏನಿದು ಕಥೆ? ಯಾರು ಈ ಶಿವರುದ್ರಯ್ಯಸ್ವಾಮಿ? ಲೋಕಾ ಸ್ಪರ್ಧೆಗೆ ಕಾರಣವೇನು? ಶಿವಮೊಗ್ಗ ಜಿಲ್ಲೆಗೂ ಕಾಲಿಟ್ಟ ಏಲಕ್ಕಿ ಹಗರಣ! ಬಿಜೆಪಿ ಬಂಡಾಯ ಅಭ್ಯರ್ಥಿ ಈಶ್ವರಪ್ಪಾನಾ? ಕಾಂತೇಶಾನಾ?
ಶಿವಮೊಗ್ಗ: ಯಡಿಯೂರಪ್ಪ ನಮ್ಮ ನಾಯಕರು, ಅದರಲ್ಲಿ ಯಾವ ಅನುಮಾನವೂ ಇಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ನಮ್ಮವರು. ನಮ್ಮ ನಾಯಕರು ಅದರಲ್ಲಿ ಯಾವ ಅನುಮಾನ ಇಲ್ಲ. ಆದರೆ, ಅವರು ಏಕೆ ನನಗೆ ಅನ್ಯಾಯ ಮಾಡಿದ್ರು? .ಕೊನೆ ಕ್ಷಣದವರೆಗೂ ಹೇಳ್ತಿದ್ದರೂ ನಿನಗೆ ಟಿಕೇಟ್ ಅಂತಿದ್ದರು. ಈ ರೀತಿ ಸುಳ್ಳು ಆಶ್ವಾಸನೆ ಏಕೆ ಕೊಟ್ಟರು ಎಂದು ಪ್ರಶ್ನಿಸಿದ್ದಾರೆ. ಇಂದು ಕಾಂತೇಶ್ ಹಾವೇರಿಯಲ್ಲಿ ನಿಂತುಕೊಂಡರೆ 100 ಕ್ಕೆ 100 ಗೆಲ್ಲುತ್ತಾನೆ….
ನಾಳೆ ಮಧ್ಯಾಹ್ನ 3ಕ್ಕೆ ಪತ್ರಿಕಾಗೋಷ್ಠಿ ಕರೆದಿರುವ ಚುನಾವಣಾ ಆಯೋಗ ಲೋಕಸಭಾ ಚುನಾವಣಾ ದಿನಾಂಕವನ್ನು ಘೋಷಿಸಲಿದೆ… ಅದರ ಪತ್ರ ಇಲ್ಲಿದೆ
ಮಾ.20ರಿಂದ ಕಾಂಗ್ರೆಸ್ ಅಭ್ಯರ್ಥಿಯಿಂದ ಪ್ರಚಾರ ಆರಂಭ ಶ್ರೀಮತಿ ಗೀತಾಶಿವರಾಜ್‌ಕುಮಾರ್ ಗೆಲುವು ನಿಶ್ಚಿತ : ಮಧುಬಂಗಾರಪ್ಪ ಶಿವಮೊಗ್ಗ : ಮಾ.20ರಿಂದ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಪ್ರಚಾರ ಕಾರ್ಯಕ್ರಮ ಅಧಿಕೃತ ಚಾಲನೆ ನೀಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ತಿಳಿಸಿದರು. ಅವರು ಕಾಂಗ್ರೆಸ್ ಕಛೇರಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಜಿಲ್ಲೆಯ ಎಲ್ಲಾ ಮುಖಂಡರೊಂದಿಗೆ ಚರ್ಚೆಸಲಾಗಿದೆ. ಪ್ರತಿಯೊಬ್ಬರ ಕಾಂಗ್ರೆಸ್ ಕಾರ್ಯಕರ್ತರ ಬೂತ ಮಟ್ಟದ ಪ್ರಚಾರ ಕಾರ್ಯ ಕೈಗೊಳ್ಳುವರ ಅವರ ಜೊತೆ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜ್‌ಕುಮಾರ್ ಭಾಗವಹಿಸುವವರು…
*ಪೋಕ್ಸೋ ಪ್ರಕರಣ;* *ಅಪರೂಪಕ್ಕೆ ನಕ್ಕು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದೇನು?!* ತಾಯಿ ಮಗಳು ತೊಂದರೆ ಇದೆ ಅಂತ ಕಣ್ಣೀರು ಹಾಕಿಕೊಂಡು ಬಂದಿದ್ರು. ಅವರಿಗೆ ಸಹಾಯ ಮಾಡಿದೀನಿ.ಆದರೆ, ಈ ರೀತಿ ದೂರು ನೀಡಿದ್ದಾರೆ. ತೊಂದರೆ ಇದೆ ಅಂದಿದ್ದಕ್ಕೆ ಹಣವನ್ನೂ ಕೊಟ್ಟು ಕಳಿಸಿದ್ದೆ ಎಂದು ತಮ್ಮ ವಿರುದ್ಧ ದಾಖಲಾದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ಹಲವೊಮ್ಮೆ ಬಂದು ಕಾಯುತ್ತಿದ್ದರು. ಒಮ್ಮೆ ಕಣ್ಣೀರು ಹಾಕುತ್ತಿದ್ದವರಿಗೆ ಮನೆಯೊಳಗೆ ಕರೆದೊಯ್ದೆ. ಸಮಸ್ಯೆ ಆಲಿಸಿ ಪೊಲೀಸ್ ಅಧಿಕಾರಿ ದಯಾನಂದ್ ರವರಿಗೆ ಫೋನ್ ಮಾಡಿ ಇವರ…
ಹಳ್ಳಿಯಲ್ಲೂ ಚುನಾವಣಾ ಕಾವು ಏರಿತ್ತು. ಸುಡು ಸುಡು ಮದ್ಯಾನ ಚವಳ್ಳಿಯ ಪೆಟ್ಟಿಗೆ ಅಂಗಡಿಯ ಕಲ್ಲು ಹಾಸಿನ ಮೇಲೆ ಜಂಗ್ಲಿ ಕೂತಿದ್ದ. ಕಲ್ಲು ಬೆಂಚು ಎಷ್ಟು ಕಾದಿತ್ತೆಂದರೆ ಪಟ್ಟಪಟ್ಟಿ ನಿಕ್ಕರನ್ನೂ ದಾಟಿ ಆ ಕಾವು ಕುಂಡಿಗೆ ತಾಗಿತ್ತು. ಒಂದು ಸಲ ಎದ್ದು ಕುಂಡಿಯನ್ನು ಸವರಿಕೊಂಡು ಮತ್ತೆ ಕೂತ. ಲ್ಯೇ ಚವಳ್ಳಿ ಈ ಬಿಸಿಲು ಕಾಲದಲ್ಲಿ ಅಂಗಡಿ ಮುಂದೆ ಒಂದು ಟಾರ್ಪಲ್ನಾದ್ರು ಇಳಿಬಿಡದಲ್ವ. ನಾಲ್ಕು ಜನ ಕೂತ್ಕೊಂಡ್ರೆ ತಾನೇ ನಿಂಗು ನಾಕ್ಕಾಸು ಸಂಪಾದನೆ ಆಗೋದು ಅಂದ. ಜಂಗ್ಲಿಯ ಮಾತು ಉರಿಯೋ…
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಬಾಲಕಿಗೆ ಲೈಂಗಿಕ ದೌರ್ಜನ್ಯ ಸಂಬಂಧ ಪೋಕ್ಸೋ ಪ್ರಕರಣ ಬೆಂಗಳೂರಿನ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರೋ ಪ್ರಕರಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಮತ್ತು ಆಕೆಯ 17 ವರ್ಷದ ಮಗಳು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಸಹಾಯ ಪಡೆಯಲು ಫೆಬ್ರವರಿ 2 ರಂದು ತೆರಳಿದ್ದಾಗ ಲೈಂಗಿಕ ದೌರ್ಜನ್ಯದ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಸದಾಶಿವನಗರ ಪೊಲೀಸರು ಗುರುವಾರ (ಮಾರ್ಚ್ 14) ತಡರಾತ್ರಿ ಬಿಜೆಪಿಯ ಹಿರಿಯ…
*ಜಿಲ್ಲಾ ಜೆಡಿಎಸ್ ಕಚೇರಿಗೆ ಶನಿವಾರ ಕಾಲಿಡಲಿದ್ದಾರೆ ಬಿಜೆಪಿ ಬಿ.ವೈ.ರಾಘವೇಂದ್ರ! ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಶಿವಮೊಗ್ಗ ಜಿಲ್ಲಾ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡುವ ಉದ್ದೇಶದಿಂದ ಮಾ. 16ರ ಶನಿವಾರ ಬೆಳಗ್ಗೆ 10 ಘಂಟೆಗೆ ನಗರದ ನೆಹರೂ ರಸ್ತೆಯಲ್ಲಿರುವ ಪಕ್ಷದ ಕಚೇರಿಗೆ ಕಾಲಿಡಲಿದ್ದಾರೆ. ಈ ಸಂಬಂಧ ಜಿಲ್ಲಾ ಜೆಡಿಎಸ್ ವತಿಯಿಂದ ಪಕ್ಷದ ಕಚೇರಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಈ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಕಡಿದಾಳು ಗೋಪಾಲ್ ವಹಿಸಲಿದ್ದು, ಶಿವಮೊಗ್ಗ…
ಶಿವಮೊಗ್ಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾಗಿ ಸಿ.ಎಸ್.ಚಂದ್ರಭೂಪಾಲ ರಾಜ್ಯ ಸರ್ಕಾರದ ಅಧಿಕೃತ ಆದೇಶ ಶಿವಮೊಗ್ಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಶಿವಮೊಗ್ಗ ಜಿಲ್ಲಾ ಮಟ್ಟದ ಅಧ್ಯಕ್ಷರನ್ನಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮತ್ತು ಆಡಳಿತ ಉಸ್ತುವಾರಿಗಳಾದ ಶ್ರೀ ಸಿ.ಎಸ್. ಚಂದ್ರಭೂಪಾಲ ಅವರನ್ನು ನೇಮಕಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಿ.ಎಸ್.ಚಂದ್ರಭೂಪಾಲರವರು ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ಕಾರ್ಯಕರ್ತರಾಗಿ ನಿತ್ಯಾ ಕಾಂಗ್ರೆಸ್ ಸಂಘಟನೆಯಲ್ಲಿ ಸಕ್ರಿಯವಾಗಿ ಕಾರ್ಯನಿಸುತ್ತಿದ್ದಾರೆ . ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ…