*ಸಂಕ್ರಾಂತಿ ಹಬ್ಬದಂದೇ ಭೀಕರ ಕೊಲೆ;* *ಪ್ರಿಯತಮೆಯನ್ನು ಚುಚ್ಚಿ ಕೊಂದ ಪ್ರಿಯಕರ*
*ಸಂಕ್ರಾಂತಿ ಹಬ್ಬದಂದೇ ಭೀಕರ ಕೊಲೆ;* *ಪ್ರಿಯತಮೆಯನ್ನು ಚುಚ್ಚಿ ಕೊಂದ ಪ್ರಿಯಕರ* ಪ್ರಿಯಕರನಿಂದ ಪ್ರಿಯತಮೆಯ ಬರ್ಬರ ಹತ್ಯೆ (murder) ನಡೆದಿರುವಂತಹ ಘಟನೆ ಕೋಲಾರ (Kolar) ಹೊರವಲಯದ ಬಂಗಾರಪೇಟೆ ರಸ್ತೆಯಲ್ಲಿ ನಡೆದಿದೆ. ಚಾಕುವಿನಿಂದ ಇರಿದು ಸುಜಾತಾ(27)ರನ್ನು ಚಿರಂಜೀವಿ ಕೊಲೆಗೈದಿದ್ದಾನೆ. ಕಳೆದ ಕೆಲವು ದಿನಗಳಿಂದ ಇಬ್ಬರ ಪ್ರೀತಿಯಲ್ಲಿ ವಿರಸ ಉಂಟಾಗಿದ್ದು, ಅದುವೇ ಕೊಲೆಗೆ ಕಾರಣ ಎನ್ನಲಾಗುತ್ತಿದೆ. ಸದ್ಯ ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಯಾದ ಸುಜಾತಾ ಬಂಗಾರಪೇಟೆಯ ಮಾರುತಿ ನಗರದ ನಿವಾಸಿ….


