ಮೂಕ ಕಣಿವೆಯೊಂದರಲ್ಲಿ ಹೂತು ಹೋದಂತಿದ್ದ ಗುಲ್ಜಾರ್
*ಮೂಕ ಕಣಿವೆಯೊಂದರಲ್ಲಿ ಹೂತು ಹೋದಂತಿದ್ದ ಗುಲ್ಜಾರ್* _______________ ನಾವು ಅವರನ್ನು ನೋಡುತ್ತಿದ್ದರೆ ಯಾವುದೋ ರಾಗದ ಅಲೆಯಲ್ಲಿ ತೇಲಿದಂತೆ ಭಾಸವಾಗುತ್ತಿತ್ತು. ಅಥವಾ ಹೇಳಲಾಗದೇ ಇರುವ ಒಂದು ಭಾವವೊಂದು ಅವರನ್ನು ನೋಡಿದೊಡನೆ ಬಿಡುಗಡೆಯಾದಂತೆ ಅನಿಸುತ್ತಿತ್ತು. ಹಾಗಾಗಿ ಹರಡಿಕೊಂಡಿರುವ ಮರದ ನೆರಳಿನ ಕೆಳಗೆ ದಣಿವಾರಿಸಿಕೊಳ್ಳುವಂತೆ ಅವರ ಸುತ್ತ ಕುಳಿತು ನಮ್ಮೆಲ್ಲರ ಕತೆ-ಕಷ್ಟ-ಅನುಭವಗಳನ್ನು ಹೇಳುತ್ತಿದ್ದೆವು. ಗುಲ್ಜಾರರನ್ನು ಹತ್ತಿರದಿಂದ ನೋಡಿದರೆ ಪಕ್ಕದಲ್ಲೇ ತೇಲುವ ಮೋಡದ ತುಂಡಿನ ಹಾಗೆ ಸ್ಫಟಿಕಶುದ್ಧವಾಗಿಯೂ-ಹಗುರವಾಗಿಯೂ ಕಾಣುತ್ತಿದ್ದರು. ಎಂಬತ್ನಾಲ್ಕು ವರ್ಷಗಳ ಪರಿಪಕ್ವ ಹರೆಯದಲ್ಲಿಯೂ ಬದುಕಿನ ಸಂತೋಷವನ್ನು ಸವಿಯುವ ಜೀವನದ ಉತ್ಸಾಹ ಕಿಂಚಿತ್ತೂ…