ಈಶ್ವರಾಯ ನಮ: ಅನ್ನಲಿದೆ ಕುರುಬರ ಸೈನ್ಯ?
ಈಶ್ವರಾಯ ನಮ: ಅನ್ನಲಿದೆ ಕುರುಬರ ಸೈನ್ಯ? ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಇತ್ತೀಚೆಗೆ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರನ್ನು ಪರೋಕ್ಷವಾಗಿ ಸಂಪರ್ಕಿಸಿದ್ದಾರೆ.ಅರ್ಥಾತ್,ಈಶ್ವರಪ್ಪ ಅವರ ಅತ್ಯಾಪ್ತರ ಜತೆ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆಯ ಸಂದರ್ಭದಲ್ಲಿ ಈಶ್ವರಪ್ಪ ಅವರ ಅತ್ಯಾಪ್ತರ ಬಳಿ ವಿಜಯೇಂದ್ರ ಒಬ್ಬ ನಿಜವಾದ ನಾಯಕನಂತೆ ಮಾತನಾಡಿದ್ದಾರೆ. ಹಾಗೆ ನೋಡಿದರೆ ಅಧ್ಯಕ್ಷರಾದ ನಂತರ ವಿಜಯೇಂದ್ರ ಅವರು ಒಂದು ಬಗೆಯ ಠಾಕು-ಠೀಕಿನಿಂದಲೇ ನಡೆದುಕೊಳ್ಳುತ್ತಿದ್ದರು. ಬಿಜೆಪಿ ಮೂಲಗಳ ಪ್ರಕಾರ,ಅವತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಚ ಜಗತ್ ಪ್ರಕಾಶ್ ನಡ್ಡಾ ಅವರ ಸಿಗ್ನಲ್ ಅನ್ನು ವಿಜಯೇಂದ್ರ…


