ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಸಮಸ್ಯೆಗಳು ಬಂದರೆ Part of life ಅಂದು ಕೋ ಹೃದಯವೇ… ಆ ಸಮಸ್ಯೆಗಳಿಂದ ಮುಗುಳ್ನಕ್ಕು ಹೊರ ಬಂದುಬಿಡು Art of life ಆಗುವುದಾಗ! 2. ಒಂದಿಷ್ಟು ಖಾಲಿತನವಿರಲಿ ನಿನ್ನಲ್ಲಿ… ನೀನೇ ನಿನ್ನೊಳಗಿಂದ ಹೊರ ಹೋಗದ ಸ್ಥಿತಿ ಬರದಿರಲಿ – *ಶಿ.ಜು.ಪಾಶ* 8050112067 (13/12/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಮನಸು ಬಯಸಿದ್ದೆಲ್ಲ ಸಿಕ್ಕಿಬಿಟ್ಟರೆ ಕನಸಿಗೇನು ಅರ್ಥ? ಬದುಕಿಗೇನು ಅರ್ಥ? 2. ಬದುಕು ಬಹಳ ವೇಗದಿಂದ ಚಲಿಸುತ್ತಿದೆ ಹೃದಯವೇ… ಬೆಳಗಿನ ನೋವು ಸಂಜೆಗೆ ಹಳತಾಗುತ್ತಿದೆ! – *ಶಿ.ಜು.ಪಾಶ* 8050112067 (10/12/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಬೇಡವಾದರೆ ನೀನು ನಿನ್ನವರೇ ಬೀಳಿಸುವರು! 2. ಬದುಕು ಅರ್ಥವಾಗಿಬಿಟ್ಟರೆ ಏಕಾಂಗಿಯಾಗಿಯೂ ಸಂತೆ ನಿನ್ನೊಳಗೆ… ಅರ್ಥವಾಗದಿದ್ದರೆ ಸಂತೆಯೊಳಗೂ ನೀ ಏಕಾಂಗಿಯೂ! 3. ಪ್ರತಿವರ್ಷದ ಜನವರಿಯು ಕನಸು ಕಾಣಿಸುವುದು ಡಿಸೆಂಬರ್ ಯೋಗ್ಯತೆ ಲೆಕ್ಕ ಹಾಕುವುದು! – *ಶಿ.ಜು.ಪಾಶ* 8050112067 (8/12/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ನಿರ್ಧಾರ ಗಟ್ಟಿಯಿರಲಿ ಹೃದಯವೇ… ವಿಷಕಾರುವವರೂ ಕಾಲಕೆಳಗಿರುವರು! 2. ಸುಮ್ಮನೆ ಸೇರುವುದಿಲ್ಲ ಜನ ಶವಯಾತ್ರೆಗೆ… ಸತ್ತ ಮೇಲೆ ಸತ್ಪ್ರಜೆಗಳೆಲ್ಲರೂ! – *ಶಿ.ಜು.ಪಾಶ* 8050112067 (5/12/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಮೌನ‌ ಓದುವ ಅಕ್ಷರಸ್ಥ ಸಿಕ್ಕರದೇ ಸ್ವರ್ಗ! 2. ನಿನ್ನೆ ನಿನ್ನನ್ನು ಪಡೆಯುವ ಹಠವಿತ್ತು… ಇಂದು ಅದೇ ನಿನ್ನನ್ನು ಮರೆಯುವ ಹಠವಿದೆ 3. ಪುಸ್ತಕಕ್ಕಿಂತ ದೊಡ್ಡ ಪಾಠ ಕಲಿಸುವ ಜನ ಈ ಜಗತ್ತಲ್ಲಿದ್ದಾರೆ ಹೃದಯವೇ ಹುಷಾರು! – *ಶಿ.ಜು.ಪಾಶ* 8050112067 (30/11/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಹಿಟ್ಟಿನ ಜರಡಿಯಲ್ಲಿ ಹಾಕಿ ನೋಡು ಮಣ್ಣಿನ ಹೊರತು ನೀನೇನೂ ಅಲ್ಲ! 2. ಹೃದಯ ಶ್ರೀಮಂತವಾಗಿಡು ಜನ ಮಹಲುಗಳಲ್ಲೂ ಕಣ್ಣೀರು ಸುರಿಸುತ್ತಿದ್ದಾರೆ! – *ಶಿ.ಜು.ಪಾಶ* 8050112067 (28/11/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ನಿನ್ನ ನಿಶ್ಯಬ್ದದಲ್ಲಿ ಅತ್ಯಂತ ದೊಡ್ಡ ಸದ್ದಿದೆ! 2. ನೆನಪಿಸಿಕೊಳ್ಳುವ ಹಕ್ಕು ಕೊಟ್ಟುಬಿಡು ಇಲ್ಲವೇ ಮರೆತು ಬಿಡುವ ಅನುಮತಿ! 3. ಪ್ರೇಮ ಎಂಬುದು ಪೂಜೆ ಎನ್ನುವರು ನೀನು ಪ್ರಸಾದವು! – *ಶಿ.ಜು.ಪಾಶ* 8050112067 (27/11/2025)

Read More