ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಮೌನ‌ ಓದುವ ಅಕ್ಷರಸ್ಥ ಸಿಕ್ಕರದೇ ಸ್ವರ್ಗ! 2. ನಿನ್ನೆ ನಿನ್ನನ್ನು ಪಡೆಯುವ ಹಠವಿತ್ತು… ಇಂದು ಅದೇ ನಿನ್ನನ್ನು ಮರೆಯುವ ಹಠವಿದೆ 3. ಪುಸ್ತಕಕ್ಕಿಂತ ದೊಡ್ಡ ಪಾಠ ಕಲಿಸುವ ಜನ ಈ ಜಗತ್ತಲ್ಲಿದ್ದಾರೆ ಹೃದಯವೇ ಹುಷಾರು! – *ಶಿ.ಜು.ಪಾಶ* 8050112067 (30/11/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಹಿಟ್ಟಿನ ಜರಡಿಯಲ್ಲಿ ಹಾಕಿ ನೋಡು ಮಣ್ಣಿನ ಹೊರತು ನೀನೇನೂ ಅಲ್ಲ! 2. ಹೃದಯ ಶ್ರೀಮಂತವಾಗಿಡು ಜನ ಮಹಲುಗಳಲ್ಲೂ ಕಣ್ಣೀರು ಸುರಿಸುತ್ತಿದ್ದಾರೆ! – *ಶಿ.ಜು.ಪಾಶ* 8050112067 (28/11/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ನಿನ್ನ ನಿಶ್ಯಬ್ದದಲ್ಲಿ ಅತ್ಯಂತ ದೊಡ್ಡ ಸದ್ದಿದೆ! 2. ನೆನಪಿಸಿಕೊಳ್ಳುವ ಹಕ್ಕು ಕೊಟ್ಟುಬಿಡು ಇಲ್ಲವೇ ಮರೆತು ಬಿಡುವ ಅನುಮತಿ! 3. ಪ್ರೇಮ ಎಂಬುದು ಪೂಜೆ ಎನ್ನುವರು ನೀನು ಪ್ರಸಾದವು! – *ಶಿ.ಜು.ಪಾಶ* 8050112067 (27/11/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಬೆಳಕು ಸಿಕ್ಕಾಗ ನಿನಗೆ ಕತ್ತಲಲ್ಲಿ ಜೊತೆಗಿದ್ದವರನ್ನು ಮರೆತರೆ ಹೇಗೆ?! 2. ಬಣ್ಣ ಬದಲಾಯಿಸಿದರೆ… ಮರವೂ ಎಲೆಯನ್ನು ಮಣ್ಣಿಗೆಸೆಯುವುದು! – *ಶಿ.ಜು.ಪಾಶ* 8050112067 (11/11/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಆನ್ ಲೈನಲ್ಲಿ ಕೋಟಿ ದಾಟಿದೆ ಸಂಖ್ಯೆ ಸ್ನೇಹಿತರದ್ದು… ಕಷ್ಟದಲ್ಲೊಬ್ಬರೂ ಕೈ ಹಿಡಿದು ದಾಟಿಸುವವರಿಲ್ಲ! 2. ಮುಖದ ಮೇಲೆ ದುಃಖದ ಹೊದಿಕೆ ಏಕೆ ಹೃದಯವೇ? ಕಷ್ಟಕಾಲವಿರಬಹುದಿದು ಕಳೆಯುವುದು ಮುಗುಳ್ನಗುವಿನಿಂದಲೇ… – *ಶಿ.ಜು.ಪಾಶ* 8050112067 (5/11/2025)

Read More