
ಇವತ್ತಿನ ಕವಿಸಾಲು
Gm ಶುಭೋದಯ💐 *ಮಹಿಳಾ ದಿನಾಚರಣೆ ಮತ್ತು ಅರ್ಧ ನಾರೀಶ್ವರನ ಶಿವರಾತ್ರಿಯ ಶುಭಾಶಯಗಳು* *ಕವಿಸಾಲು* ನಾರಿ ಅರ್ಥ ವಾಗಿದ್ದರೆ ಅರ್ಧ ನಾರೀ ಶ್ವರ ನಾಗುತ್ತಿದ್ದನೇ ಶಿವ?… – *ಶಿ.ಜು.ಪಾಶ* 8050112067 (8/3/24)
Gm ಶುಭೋದಯ💐 *ಮಹಿಳಾ ದಿನಾಚರಣೆ ಮತ್ತು ಅರ್ಧ ನಾರೀಶ್ವರನ ಶಿವರಾತ್ರಿಯ ಶುಭಾಶಯಗಳು* *ಕವಿಸಾಲು* ನಾರಿ ಅರ್ಥ ವಾಗಿದ್ದರೆ ಅರ್ಧ ನಾರೀ ಶ್ವರ ನಾಗುತ್ತಿದ್ದನೇ ಶಿವ?… – *ಶಿ.ಜು.ಪಾಶ* 8050112067 (8/3/24)
ದ್ವಿಮುಖ ನಡೆ ************ ಜೀವಸಖೀ ನಿನ್ನ ನಡೆಯ ಒಳತೋಟಿ ತಿಳಿಯುತ್ತಿಲ್ಲ, ಒಮ್ಮೊಮ್ಮೆ ನನ್ನ ಬಳಸಿ ನಾನೇ ನೀನು ಎನ್ನುತ್ತೀಯ.. ಮಗದೊಮ್ಮೆ ಏಕಾಂತದ ಮೊರೆಹೋಗಿ ವಿಮುಖಳಾಗುತ್ತೀ.. ಒಮ್ಮೊಮ್ಮೆ ಚಡಪಡಿಸಿ ಬಡಬಡಿಸಿ ತಾನೇ ಸುಖಿಸುತ್ತೀ.. ಮಗದೊಮ್ಮೆ ಸ್ನೇಹ ಪ್ರೀತಿ ಹಗಲಲಿ ತೋರುವ ಅನುರಾಧಾ ನಕ್ಷತ್ರ ಎನ್ನುತ್ತೀ..! **
Gm ಶುಭೋದಯ💐 *ಕವಿಸಾಲು* ಪ್ರಾಣ ಕೊಡುವುದು ಪ್ರೇಮವಲ್ಲ; ಪ್ರಾಣವೇ ಆಗಿಬಿಡುವುದು ಪ್ರೇಮ! – *ಶಿ.ಜು.ಪಾಶ* 8050112067 (7/3/24)
ಮಲೆನಾಡು ಎಕ್ಸ್ ಪ್ರೆಸ್ ವಾರಪತ್ರಿಕೆಯಲ್ಲಿ ಈ ವಾರ ಏನಿದೆ ವಿಶೇಷ?
Gm ಶುಭೋದಯ💐 *ಕವಿಸಾಲು* ಕಣ್ರೆಪ್ಪೆಯಲ್ಲಿ ಕಣ್ಣೀರು ಹೃದಯದಲ್ಲಿ ನೋವು ಈಗಷ್ಟೇ ಮಲಗಿದೆ; ನಗುವವರೇ ಮೆಲ್ಲಗೆ ನಗಿ… ನಿಗಿನಿಗಿ ಕೆಂಡದ ಮೇಲಿನ ಬೂದಿ ಹಾರೀತು! – *ಶಿ.ಜು.ಪಾಶ* 8050112067 (6/3/24)
ಒಲೆ ಉರಿಸುವ ಕಲೆಯ – ಲಯ , ರಾಗ, ತಾಳ. ಕಾಲ ಯಾವುದಾದರೇನು ಒಲೆ ಉರಿಯಲೇ ಬೇಕು ತಾನೆ? ಅದೇ ಉರಿಯಲ್ಲಿ ನಾವೂ ಬೇಯುತ್ತ ಅಡುಗೆ ಮಾಡಲೇಬೇಕಾದ ಅನಿವಾರ್ಯತೆ. ಮಳೆಗಾಲಕ್ಕೆಂದು ಸೌದೆ , ಕಾಯಿ ಚೆಪ್ಪು , ತೆಂಗಿನ ಗರಿಗಳನ್ನೆಲ್ಲ ಸಂಗ್ರಹಿಸಿ ಇಟ್ಟದ್ದು ಆಯ್ತು , ಅದು ಅದರಷ್ಟಕ್ಕೆ ಅತಿಯಾದ ಗಾಳಿ ಮಳೆಗೆ ಥಂಡಿ ಹಿಡಿದದ್ದು ಆಯ್ತು ! ಅದನ್ನುರಿಸಿ ಅಡುಗೆ ಮಾಡುವ ಮಹಿಳೆಯರ ಪಾಡು , ಅವಳಿಗಷ್ಟೇ ತಿಳಿದ ಹಾಡು. ಮಳೆಗಾಲದ ಸುಂದರವಾದ ,…
ಬದುಕಿನ ಅನೇಕ ಮಜಲುಗಳಲ್ಲಿ ನಮ್ಮ ದೃಷ್ಟಿಕೋನಗಳು ಕಾಲ ಕಾಲಕ್ಕೆ ಬದಲಾಗುವುದು ಎಷ್ಟು ಸತ್ಯವೂ ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಕೂಡ ಅಷ್ಟೇ ಸತ್ಯ ಹೀಗಿರುವಾಗ ನಮ್ಮ ನಡುವಿನ ಸಂಬಂಧಗಳು ತಿದ್ದಿ ತೀಡಿದಷ್ಟು ಡೊಂಕಾಗಿಯೇ ಉಳಿದುಬಿಡುವುದು ಮತ್ತೊಂದು ರೀತಿಯ ವಿಪರ್ಯಾಸ. ಯಾವಾಗಲೋ ಕರಗಿ ಹೋಗುವ ಮೇಣದಬತ್ತಿಗೆ ಅಡ್ಡಲಾಗಿ ಏನನ್ನಾದರೂ ಮರೆಮಾಚುತ್ತೇವೆ. ಇದರ ಉದ್ದೇಶ ಬೆಳಕು ಇಡೀ ಕೋಣೆಗೆ ಆವರಿಸುತ್ತದೆ ಅನ್ನುವುಕ್ಕಿಂತ ಆ ಮೇಣದಬತ್ತಿಯ ಕ್ಷಣಕಾಲದ ಜೊತೆಗಾರಿಕೆ ಕತ್ತಲೆಯ ಭಯವನ್ನು ಹೋಗಲಾಡಿಸಿ ಒಂದಷ್ಟು ಧೈರ್ಯ ಮತ್ತು ಭರವಸೆಯನ್ನು ಕೊಡುತ್ತದೆ. ಬೆಳಕಿನ ಜೊತೆ ಬದುಕುತ್ತಿದ್ದೇವೆನ್ನುವ…
*ಮಾಯಾವಿ* “””””””””””””””” ಗೆಳತಿ ಮೊದಲ ನೋಟದಲೇ ದಿಟ್ಟಿಸಿ ನಂತರ ಮೋಹಿಸಿ ನಿರಂತರ ಪ್ರೀತಿಸಿ ಅರ್ಥೈಸಿ ಒಪ್ಪಿಸಿ ಸಹಿಸಿ ಸೈರೈಸಿ ಹಂಬಲಿಸಿ ಹುರಿದುಂಬಿಸಿ ಚೇತರಿಸಿ ಪರವಶವಾಗಿಸಿ ಕನವರಿಸಿ ಗರಿಗೆದರಿಸಿ ಹಾರಾಡಿಸಿ ಈಗ ರೆಕ್ಕೆ ಕತ್ತರಿಸಿ ನೋಯಿಸಿ ಗಹಗಹಿಸಿ ಸ್ನೇಹ ಪ್ರೀತಿ ಇಲ್ಲವಾಗಿಸಿ ಅದೆಲ್ಲಿಗೆ ಮಾಯವಾದೆ ಪಲಾಯನವಾದಿ ? # ಸಾರಂಗರಾಜ್ 28/02/2024
Gm ಶುಭೋದಯ💐 *ಕವಿಸಾಲು* ನಿನ್ನನ್ನು ಗೌರವಿಸಲೆಂದು ಬಾಗಿದ್ದೆ; ನೀ ಬೆನ್ನ ಹುರಿ ಮೇಲೆ ಕಾಲಿಟ್ಟು ತೆರಳಿದ್ದೆ! *ಕವಿಸಾಲು- 2* ಪ್ರೇಮ ಧ್ಯಾನ ನೆಮ್ಮದಿ ಬದುಕು ಏನೆಲ್ಲಾ ಅನ್ನುತ್ತಿರುತ್ತಾರೆ ಜನ ಮಾತಿನಲ್ಲಿ; ನಾನಂತೂ ನೀನು ಎಂದುಬಿಡುತ್ತೇನೆ ಮುಗುಳ್ನಕ್ಕು ಮೌನದಲ್ಲಿ… ಜನ ಮತ್ತು ನಾನು ಎಷ್ಟೊಂದು ವಿರುದ್ಧ ದಿಕ್ಕಿನಲ್ಲಿದ್ದೇವೆ ಈ ಜಗತ್ತಿನಲ್ಲಿ! – *ಶಿ.ಜು.ಪಾಶ* 8050112067 (28/2/24)