ಅಜೋಲಾ ನೀಡಿ, ಹಾಲು ಉತ್ಪಾದನೆ ಹೆಚ್ಚಿಸಿ

 ಅಜೋಲಾ ನೀಡಿ, ಹಾಲು ಉತ್ಪಾದನೆ ಹೆಚ್ಚಿಸಿ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹೊಸ ಗೊದ್ದನಕೊಪ್ಪ ಗ್ರಾಮದಲ್ಲಿ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ , ಇರುವಕ್ಕಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಅಜೋ಼ಲ ಕೃಷಿ ಬಗ್ಗೆ ಗುಂಪು ಚರ್ಚೆ ಮತ್ತು ಪದ್ಧತಿ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಿದ್ದರು. ಅಜೋಲ್ಲಾ ಕೃಷಿಯು ಪ್ರಸ್ತುತ ಕೃಷಿ ಕ್ಷೇತ್ರದಲ್ಲಿ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭವನ್ನು ಪಡೆಯಲು ಉಪಯುಕ್ತ ಪದ್ಧತಿಯಾಗಿದೆ.
ಬತ್ತದ ಗದ್ದೆಗಳಲ್ಲಿ 5 ಇಂಚು ನೀರನ್ನು ನಿಲ್ಲಿಸಿದಾಗ ಅಜೋ಼ಲಾ ಬೆಳೆಯಬಹುದು. ಪ್ರಾರಂಭದ ಹಂತಗಳಲ್ಲಿ ಅದಕ್ಕೆ ನೆರಳಿನ ಅವಶ್ಯಕತೆ ಇರುತ್ತದೆ. ವಿದ್ಯಾರ್ಥಿಗಳು ಅಜೋ಼ಲ್ಲಾ ಬೆಳೆಯುವ ವಿಧಾನ, ಮತ್ತು ಜಾನುವಾರುಗಳಿಗೆ ಪೌಷ್ಟಿಕ ಆಹಾರವಾಗಿ ಬಳಸುವುದನ್ನು ರೈತರಿಗೆ ಹೇಳಿಕೊಟ್ಟರು. ಅಜೋಲಾ ಬೆಳೆಯುವುದರಿಂದ ಮಣ್ಣಿನ ನೈಸರ್ಗಿಕ ಪೋಷಕಾಂಶ ವೃದ್ಧಿ ಯಾಗಿ ಹೆಚ್ಚಿನ ಬೆಳೆ ಇಳುವರಿಯನ್ನು ಪಡೆಯಬಹುದು. ಅಜೋಲ್ಲಾವನ್ನು ಹಿಂಡಿ ಬೂಸ ಹಾಗೂ ಮೇವಿನ ಜೊತೆಗೆ ಜಾನುವಾರುಗಳಿಗೆ ದಿನಕ್ಕೆ 1 ಕೆಜಿ ಕೊಡಬೇಕು. ಹೀಗೆ ಕೊಡುವುದರಿಂದ ಹಾಲಿನ ಇಳುವರಿ 15 -20% ಹೆಚ್ಚಾಗುತ್ತದೆ, ಕೊಬ್ಬಿನ ಅಂಶ ಹಾಗೂ ಎಸ್. ಎನ್. ಎಫ್. ಅಂಶವು ಹೆಚ್ಚಾಗುತ್ತದೆ. ಇದರಿಂದ ಕಡಿಮೆ ಖರ್ಚಿನಲ್ಲಿ ಅಧಿಕ ಹಾಲಿನ ಇಳುವರಿಯನ್ನು ಪಡೆಯಬಹುದು ಎಂದು ರೈತರು ಅಭಿಪ್ರಾಯ ಪಟ್ಟರು.