ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು**132, 352,351/2,189/2,190 ಬಿಎನ್ಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲು**ಮೂವರ ಬಂಧನ**ಅಜಯ್, ರವಿ, ವರುಣ್ ಬಂಧಿಸಿದ ಪೊಲೀಸರು*
*ಮಹಿಳಾ ಅಧಿಕಾರಿಗೆ ಕಾಂಗ್ರೇಸ್ ಎಂಎಲ್ಎ ಮಗನ ರೌಡಿಸಂ ವಿಡಿಯೋ ವೈರಲ್ ಪ್ರಕರಣ*
*ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು*
*132, 352,351/2,189/2,190 ಬಿಎನ್ಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲು*
*ಮೂವರ ಬಂಧನ*
*ಅಜಯ್, ರವಿ, ವರುಣ್ ಬಂಧಿಸಿದ ಪೊಲೀಸರು*
![](https://malenaduexpress.com/wp-content/uploads/2025/02/IMG-20250211-WA0202-2.jpg)
![](https://malenaduexpress.com/wp-content/uploads/2025/02/IMG-20250211-WA0625-1024x1024.jpg)
*ಗಣಿ ಅಧಿಕಾರಿ ಕೆ.ಕೆ.ಜ್ಯೋತಿ ಶಾಸಕರ ಪುತ್ರನ ಹೆಸರು ಯಾಕೆ ದೂರಿನಲ್ಲಿ ದಾಖಲಿಸಿಲ್ಲ?*
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಜ್ಯೋತಿ ನೀಡಿದ ದೂರಿನ್ವಯ ಪ್ರಕರಣ ದಾಖಲು…
*ಭದ್ರಾವತಿಯಲ್ಲಿ ಮಹಿಳಾ ಅಧಿಕಾರಿ ಜ್ಯೋತಿ ಹೇಳಿಕೆ*
ಘಟನೆ ಬಗ್ಗೆ ಈಗಾಗಲೇ ಎಫ್ಐಆರ್ ದಾಖಲಿಸಿದ್ದೆನೆ.
ನನ್ನ ಜೊತೆ ಯಾರು ಮಾತನಾಡಿದ್ದಾರೆ? ಯಾರು ನನಗೆ ಬೈದರು? ಎನ್ನುವ ಸ್ಪಷ್ಟತೆ ಇಲ್ಲ.
ತನಿಖೆ ನಂತರ ಸತ್ಯಾಸತ್ಯತೆ ಹೊರಬರುತ್ತೆ. ಪೊಲೀಸರು ಆ ಕೆಲಸ ಮಾಡುತ್ತಾರೆ ಎಂದ ಅಧಿಕಾರಿ.
*ಭದ್ರಾವತಿ ಡಿವೈಎಸ್ಪಿ ಕೆ.ಆರ್. ನಾಗರಾಜ್ ಗೆ ದೂರು*
*ದೂರು ಸಲ್ಲಿಸಿದ ಅಧಿಕಾರಿ ಜ್ಯೋತಿ*
ಈ ವೇಳೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಅಧಿಕಾರಿ ನಾಯಕ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತಿ.
*ಶಿವಮೊಗ್ಗ ಬ್ರೇಕಿಂಗ್ :- ಮಹಿಳಾ ಅಧಿಕಾರಿಗೆ ಕಾಂಗ್ರೆಸ್ ಎಂಎಲ್ಎ ಮಗನ ರೌಡಿಸಂ ವಿಡಿಯೋ ವೈರಲ್ ಪ್ರಕರಣ*
ಭದ್ರಾವತಿಯಲ್ಲಿ ಡಿವೈಎಸ್ಪಿಗೆ ದೂರು ನೀಡಿ ಗಣಿ ಮತ್ತು ಭೂ ವಿಜ್ಞಾನಿ ಇಲಾಖೆ ಅಧಿಕಾರಿ ಜ್ಯೋತಿ ಪ್ರತಿಕ್ರಿಯೆ
*ಪ್ರಕರಣ ಸಂಬಂಧ ದೂರು ದಾಖಲು ಮಾಡಿದ್ದೇನೆ
*ಅವತ್ತು ದಾಳಿ ಮಾಡಿದಾಗ ಏನ್ ಏನ್ ಸಮಸ್ಯೆ ಆಯ್ತೋ ಆ ಬಗ್ಗೆ ದೂರು ನೀಡಿದ್ದೇನೆ*
*ದಾಳಿ ಮಾಡಿದ ಸಂದರ್ಭದಲ್ಲಿ ನಮ್ಮ ಮೇಲೆ ಗಾಡಿ ಹತ್ತಿಸ್ರೋ ಅಂತ ಹೇಳುತ್ತಿದ್ರು*
ಆಗ ಭಯ ಆಯ್ತು ಪೋನ್ ಕಾಲ್ ಸಹ ಬಂತು ಯಾಕೋ ಸರಿಯಾಗಲ್ಲ ಅಂತ ವಾಪಾಸ್ಸು ಬಂದೆ
ಅವತ್ತು ದಾಳಿ ವೇಳೆ ಬೆದರಿಕೆ ಸಹ ಬಂತು
*ಅಧಿಕಾರಿಗಳು ಸಹ ನನಗೆ ಸಪೋರ್ಟ್ ನೀಡಿದ್ದಾರೆ ಎಂದ ಅಧಿಕಾರಿ ಜ್ಯೋತಿ*
ನನ್ನ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ.
ಅಟ್ರಾಸಿಟಿ ಕೇಸು ಹಾಕುವ ಬೆದರಿಕೆಯೂ ಒಡ್ಡಿಲ್ಲ.
ಪ್ರಕರಣ ಖಂಡಿಸಿ ಬೀದಿಗಿಳಿದ ಬಿಜೆಪಿ ಕಾರ್ಯಕರ್ತರು
ಭದ್ರಾವತಿಯಲ್ಲಿ ತಾಲೂಕು ಬಿಜೆಪಿಯಿಂದ ಪ್ರಕರಣ ಖಂಡಿಸಿ ಪ್ರತಿಭಟನೆ
ಭದ್ರಾವತಿ ತಾಲೂಕು ಕಚೇರಿಯಿಂದ ಹಳೆ ನಗರ ಪೊಲೀಸ್ ಠಾಣೆಯವರೆಗೆ ಪ್ರತಿಭಟನಾ ಮೆರವಣಿಗೆ
ಎಂಎಲ್ಎ ಸಂಗಮೇಶ್ ಮಗನ ವಿರುದ್ದ ಧಿಕ್ಕಾರ ಕೂಗಿ ಘೋಷಣೆ
ಕೂಡಲೇ ಬಸವೇಶನನ್ನು ಬಂಧಿಸುವಂತೆ ಬಿಜೆಪಿ ಕಾಯಕರ್ತರ ಆಗ್ರಹ
ಸುಮೋಟೋ ಪ್ರಕರಣ ದಾಖಲಿಸುವಂತೆ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು….