ಪೊಲೀಸರ ಕಾರ್ಯಕ್ಕೆ ಸಮಾಜ ಸೇವಕ ಶರತ್ ಅಭಿನಂದನೆ**ಮೀಟರ್ ಬಡ್ಡಿ ದಂಧೆ ವಿರುದ್ಧ ಶಿವಮೊಗ್ಗ ಜಿಲ್ಲಾ ಪೊಲೀಸರ ಕಾರ್ಯಾಚರಣೆ ಅಭಿನಂದನಾರ್ಹ*

*ಪೊಲೀಸರ ಕಾರ್ಯಕ್ಕೆ ಸಮಾಜ ಸೇವಕ ಶರತ್ ಅಭಿನಂದನೆ*

*ಮೀಟರ್ ಬಡ್ಡಿ ದಂಧೆ ವಿರುದ್ಧ ಶಿವಮೊಗ್ಗ ಜಿಲ್ಲಾ ಪೊಲೀಸರ ಕಾರ್ಯಾಚರಣೆ ಅಭಿನಂದನಾರ್ಹ*

ಎಸ್ ಪಿ ಮಿಥುನ್ ಕುಮಾರ್ ರವರ ನೇತೃತ್ವದಲ್ಲಿ ಶಿವಮೊಗ್ಗದ ವಿವಿಧ ಭಾಗಗಳಲ್ಲಿ ನಡೆದ ಅಕ್ರಮ ಬಡ್ಡಿ ದಂಧೆಕೋರರ ವಿರುದ್ಧದ ದಾಳಿ ಅಭಿನಂದನಾರ್ಹ ಎಂದು ಶಿವಮೊಗ್ಗ ಕೇಬಲ್ ಆಪರೇಟರ್ ಹಾಗೂ ಸಮಾಜ ಸೇವಕರಾದ ಶರತ್ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಬಹಳಷ್ಟು ಜನ ಮೀಟರ್ ಬಡ್ಡಿ ದಂಧೆಯಿಂದ ತೊಂದರೆಗೆ ಒಳಗಾಗಿದ್ದು, ಇವರ ನೋವಿಗೆ ಸ್ಪಂದಿಸಿದ ಪೊಲೀಸ್ ಇಲಾಖೆ ಸಾರ್ವಜನಿಕರ ಪರ ನಿಂತು ಮೀಟರ್ ಬಡ್ಡಿ ದಂಧೆಕೋರರಿಗೆ ಮಟ್ಟ ಹಾಕುತ್ತಿರುವುದು ಸಂತೋಷದಾಯಕ ಸಂಗತಿ. ಪೊಲೀಸರ ಇಂತಹ ಕೆಲಸ ನಿರಂತರವಾಗಿ ಮುಂದುವರೆಯಲಿ ಎಂದು ಶರತ್ ಹೇಳಿದ್ದಾರೆ.