
ಮಾರ್ಚ್ 7 ರಂದು ಸಂಜೆ ಖ್ಯಾತ ಕತೆಗಾರ್ತಿ ಮತ್ತು ಲೇಖಕಿ ಬಿ.ಟಿ.ಜಾಹ್ನವಿಯವರ ಅಭಿನಂದನಾ ಸಮಾರಂಭ ಮತ್ತು ಪುಸ್ತಕ ಬಿಡುಗಡೆ
ಮಾರ್ಚ್ 7 ರಂದು ಸಂಜೆ ಖ್ಯಾತ ಕತೆಗಾರ್ತಿ ಮತ್ತು ಲೇಖಕಿ ಬಿ.ಟಿ.ಜಾಹ್ನವಿಯವರ ಅಭಿನಂದನಾ ಸಮಾರಂಭ ಮತ್ತು ಪುಸ್ತಕ ಬಿಡುಗಡೆ ತಳಸಮುದಾಯಗಳ ಅಲಕ್ಷಿತ ಅನುಭವಗಳನ್ನು ಮತ್ತು ಆ ಸಮುದಾಯಗಳ ಒಳಗಣ ಈ ಹೊತ್ತಿಗೂ ಕುದಿಯುತ್ತಲೇ ಇರುವ ಮಹಿಳೆಯ ಸಂಕಟ ಮತ್ತು ಬೆರಗುಗಳ ಸಂವೇದನೆಗಳನ್ನೆಲ್ಲ ಒಟ್ಟಿಗೆ ಕಡೆದು ಕನ್ನಡ ಸಾಹಿತ್ಯ ಲೋಕದ ಮುಂದೆ ಇರಿಸಿದ ಮೊದಲ ತಲೆಮಾರಿನ ಬರಹಗಾರ್ತಿ ಬಿ.ಟಿ. ಜಾಹ್ನವಿ. ಲಂಕೇಶರಂತಾ ಲಂಕೇಶರ ಸದಾ ನಿಗಿನಿಗಿ ಉರಿಯುವ ಕುಲುಮೆಯಲ್ಲೇ ಹದಗೊಂಡು ಅಪಾರ ಓದುಗರನ್ನು ತಲುಪಿದ ಜಾಹ್ನವಿಯವರ ಕತೆಗಳು ವಿಮರ್ಶಾರಾಜಕಾರಣದಲ್ಲಿ…