ನೆಲ-ಸಮುದಾಯಗಳಿಗೆ ಇದು *ಅಧಿಕಾರದಾಚೆಗಿನ ಅಧಿಕಾರವಿದ್ದಂತೆ!!*(ಚಿಕ್ಕನಾಯಕನಹಳ್ಳಿ ತಾತಯ್ಯನ ಉರುಸು)
ನೆಲ-ಸಮುದಾಯಗಳಿಗೆ ಇದು *ಅಧಿಕಾರದಾಚೆಗಿನ ಅಧಿಕಾರವಿದ್ದಂತೆ!!* (ಚಿಕ್ಕನಾಯಕನಹಳ್ಳಿ ತಾತಯ್ಯನ ಉರುಸು) ಎಲ್ಲರ ತಾತಯ್ಯ’ನಾಗಿ ಸಾಮರಸ್ಯದ ಹೃದಯರಂಗದಲ್ಲಿ ನೆಲೆಸಿರುವ ಜನ-ಮಾನ್ಯರ ಪಾಲಿನ ಪವಾಡ-ಪುರುಷ, ಹಜ಼ರತ್ ಮೊಹಿಯುದ್ದೀನ್ ಶಾ ಖಾದ್ರಿಯವರ 65’ನೇ ವರ್ಷದ ಉರುಸ್ಸನ್ನು ಆಯೋಜಿಸಲಾಗುತ್ತಿದೆ. ಇದೇ ಫೆಬ್ರುವರಿ ತಿಂಗಳ 17, 18, 19’ರ ಮೂರು ದಿನಗಳ ಕಾಲ ಚಿಕ್ಕನಾಯಕನಹಳ್ಳಿ ಪಟ್ಟಣದ ತಾತಯ್ಯನ ಗೋರಿಯಲ್ಲಿ ಈ ಉರುಸ್ ಆಚರಿಸಲಾಗುವುದು. ಪಟ್ಟಣದ ಹೃದಯಭಾಗದಲ್ಲಿ ನೆಲೆಗೊಂಡಿರುವ ನಾನಾವಲಿ-ತಾತಯ್ಯನ ಗೋರಿ, ದೀನ-ದಮನಿತರ ಸಂಕಟ ಪರಿಹರಿಸುವ ಪವಾಡ-ಪುರುಷನ ಶಕ್ತಿಸೌಧದಂತೆ ಬಹುಜನರ ಎದೆಯಲ್ಲಿ ಕಂಗೊಳಿಸುತ್ತಿದೆ. ಬಡವರ, ಬಲಹೀನರ ಬದುಕು…