
ಈಶ್ವರಪ್ಪ ಬಿಜೆಪಿ ಬಿಡೋದು ಡೌಟು! ಏನಂದ್ರು ಕೆಎಸ್ ಈ!!
ಶಿವಮೊಗ್ಗ: ಯಡಿಯೂರಪ್ಪ ನಮ್ಮ ನಾಯಕರು, ಅದರಲ್ಲಿ ಯಾವ ಅನುಮಾನವೂ ಇಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ನಮ್ಮವರು. ನಮ್ಮ ನಾಯಕರು ಅದರಲ್ಲಿ ಯಾವ ಅನುಮಾನ ಇಲ್ಲ. ಆದರೆ, ಅವರು ಏಕೆ ನನಗೆ ಅನ್ಯಾಯ ಮಾಡಿದ್ರು? .ಕೊನೆ ಕ್ಷಣದವರೆಗೂ ಹೇಳ್ತಿದ್ದರೂ ನಿನಗೆ ಟಿಕೇಟ್ ಅಂತಿದ್ದರು. ಈ ರೀತಿ ಸುಳ್ಳು ಆಶ್ವಾಸನೆ ಏಕೆ ಕೊಟ್ಟರು ಎಂದು ಪ್ರಶ್ನಿಸಿದ್ದಾರೆ. ಇಂದು ಕಾಂತೇಶ್ ಹಾವೇರಿಯಲ್ಲಿ ನಿಂತುಕೊಂಡರೆ 100 ಕ್ಕೆ 100 ಗೆಲ್ಲುತ್ತಾನೆ….