*ನಕಲಿ ವೈದ್ಯರ ಹಾವಳಿಗೆ 8 ವರ್ಷದ ಬಾಲಕಿ ಬಲಿ!*
*ನಕಲಿ ವೈದ್ಯರ ಹಾವಳಿಗೆ 8 ವರ್ಷದ ಬಾಲಕಿ ಬಲಿ!* ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ನಕಲಿ ವೈದ್ಯರ ಕಾಟ ಹೆಚ್ಚುತ್ತಿದೆ. ಯಾವುದೇ ವೈದ್ಯಕೀಯ ಪದವಿಯಿಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದರಿಂದ ಜನರ ಜೀವಕ್ಕೇ ಕುತ್ತು ಬಂದಿದೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ದೊಡ್ಡಿಗ್ಗಲೂರು ಗ್ರಾಮದಲ್ಲೊಂದು ದುರ್ಘಟನೆ ನಡೆದಿದೆ. ಅನಾರೋಗ್ಯದಿಂದ ಆಸ್ಪತ್ರೆಗೆ ಹೋದ ಬಾಕಿಯೊಬ್ಬಳು ವೈದ್ಯರ ಚಿಕಿತ್ಸೆಯಿಂದಲೇ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಆಕೆಗೆ ಚಿಕಿತ್ಸೆ ನೀಡಿದವರು ನಕಲಿ ವೈದ್ಯರೆಂದು ಹೇಳಲಾಗುತ್ತಿದೆ. ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೊಡ್ಡಿಗಲ್ಲೂರು ಗ್ರಾಮದ…