Headlines

ಮೂಕ ಕಣಿವೆಯೊಂದರಲ್ಲಿ ಹೂತು ಹೋದಂತಿದ್ದ ಗುಲ್ಜಾರ್

*ಮೂಕ ಕಣಿವೆಯೊಂದರಲ್ಲಿ ಹೂತು ಹೋದಂತಿದ್ದ ಗುಲ್ಜಾರ್* _______________ ನಾವು ಅವರನ್ನು ನೋಡುತ್ತಿದ್ದರೆ ಯಾವುದೋ ರಾಗದ ಅಲೆಯಲ್ಲಿ ತೇಲಿದಂತೆ ಭಾಸವಾಗುತ್ತಿತ್ತು. ಅಥವಾ ಹೇಳಲಾಗದೇ ಇರುವ ಒಂದು ಭಾವವೊಂದು ಅವರನ್ನು ನೋಡಿದೊಡನೆ ಬಿಡುಗಡೆಯಾದಂತೆ ಅನಿಸುತ್ತಿತ್ತು. ಹಾಗಾಗಿ ಹರಡಿಕೊಂಡಿರುವ ಮರದ ನೆರಳಿನ ಕೆಳಗೆ ದಣಿವಾರಿಸಿಕೊಳ್ಳುವಂತೆ ಅವರ ಸುತ್ತ ಕುಳಿತು ನಮ್ಮೆಲ್ಲರ ಕತೆ-ಕಷ್ಟ-ಅನುಭವಗಳನ್ನು ಹೇಳುತ್ತಿದ್ದೆವು. ಗುಲ್ಜಾರರನ್ನು ಹತ್ತಿರದಿಂದ ನೋಡಿದರೆ ಪಕ್ಕದಲ್ಲೇ ತೇಲುವ ಮೋಡದ ತುಂಡಿನ ಹಾಗೆ ಸ್ಫಟಿಕಶುದ್ಧವಾಗಿಯೂ-ಹಗುರವಾಗಿಯೂ ಕಾಣುತ್ತಿದ್ದರು. ಎಂಬತ್ನಾಲ್ಕು ವರ್ಷಗಳ ಪರಿಪಕ್ವ ಹರೆಯದಲ್ಲಿಯೂ ಬದುಕಿನ ಸಂತೋಷವನ್ನು ಸವಿಯುವ ಜೀವನದ ಉತ್ಸಾಹ ಕಿಂಚಿತ್ತೂ…

Read More

ಗುಲ್ಝಾರ್ ಬಗ್ಗೆ ಬರೆದಿದ್ದಾರೆ ರಹಮತ್ ತರಿಕೆರೆ

“ ರೆಹಮತ್ ತರಿಕೆರೆ ಸಾರ್ ರವರ ಪೇಸ್ ಬುಕ್ ವಾಲ್ ನಿಂದ ಉರ್ದು ಕವಿ ಗುಲ್ಜಾರ್ ಅವರಿಗೆ ಜ್ಞಾನಪೀಠ‌ ಬಂದಿದೆ. ಗುಲ್ಜಾರ್ ಮುಸ್ಲಿರಿರಬಹುದು ಎಂದು ಊಹಿಸಿದವರುಂಟು. ಅದು ಅವರ ಕಾವ್ಯನಾಮ. ಅವರ ಹೆಸರು ಸಂಪೂರ್ಣ ಸಿಂಗ್. ಉರ್ದುವಿನಲ್ಲಿ ಮೊದಲನೇ ಜ್ಞಾನಪೀಠ ಲಭಿಸಿದ್ದು ಗೋರಖಪುರದ ರಘುಪತಿ ಫಿರಾಖ್ ಅವರಿಗೆ. ಬಳಿಕ ಖುರ್ರತುಲೈನ್ ಹೈದರ್ ಅವರಿಗೆ. ಈಗ ಗುಲ್ಜಾರ್. ನನ್ನ ಜತೆ ಕೇಂದ್ರ ಸಾಹಿತ್ಯ ಅಕಾದೆ‌ಮಿ ಬಹುಮಾನ ಸ್ವೀಕರಿಸಿದ ಉರ್ದು ಕವಿ ಶೀನ್ ಕಾಫ್ ನಿಝಾಂ ಜೈಪುರದವರು.‌ ಅವರ ಮೂಲ…

Read More

ಬಸವಣ್ಣನವರ ತತ್ವಾದರ್ಶಗಳ ಪಾಲನೆ ಆಗಬೇಕು :ಜಿಲ್ಲಾಧಿಕಾರಿ ಗುರುದತ್ ಹೆಗಡೆ

ಬಸವಣ್ಣನವರ ತತ್ವಾದರ್ಶಗಳ ಪಾಲನೆ ಆಗಬೇಕು :ಜಿಲ್ಲಾಧಿಕಾರಿ ಗುರುದತ್   ಶಿವಮೊಗ್ಗ- ಸಾಂಸ್ಕೃತಕ ನಾಯಕ ಬಸವಣ್ಣನವರ ಭಾವಚಿತ್ರ ಅನಾವರಣ ಕೇವಲ ಸರ್ಕಾರಿ ಕಾರ್ಯಕ್ರಮವಾಗಿ ಸೀಮಿತವಾಗದೆ ಅವರ ತತ್ವ ಆದರ್ಶಗಳನ್ನು ನಾವೆಲ್ಲ ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರು ತಿಳಿಸಿದರು. ಜಿಲ್ಲಾಡಳಿ, ಜಿಲ್ಲಾ ಪಂಚಾಯತ್ ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಸರ್ಕಾರಿ ಕಚೇರಿಗಳಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿದರು.ಬಸವಣ್ಣನವರು…

Read More