ವೇಶ್ಯಾವಾಟಿಕೆಗೆ ಭದ್ರತೆ ಕೋರಿ ವಕೀಲರ ಅರ್ಜಿ, ಮದ್ರಾಸ್ ಹೈಕೋರ್ಟ್ ಶಾಕ್!
ವೇಶ್ಯಾವಾಟಿಕೆಗೆ ಭದ್ರತೆ ಕೋರಿ ವಕೀಲರ ಅರ್ಜಿ, ಮದ್ರಾಸ್ ಹೈಕೋರ್ಟ್ ಶಾಕ್! ಅರ್ಜಿಯಿಂದ ಕೆರಳಿದ ಮದ್ರಾಸ್ ಹೈಕೋರ್ಟ್‌ನ ಏಕಸದಸ್ಯ ಪೀಠವು ‘ಪ್ರತಿಷ್ಠಿತ’ ಕಾನೂನು ಕಾಲೇಜುಗಳ ಪದವೀಧರರನ್ನು ಮಾತ್ರ ವಕೀಲರಾಗಿ ನೋಂದಾಯಿಸಿಕೊಳ್ಳುವಂತೆ ಬಾರ್ ಕೌನ್ಸಿಲ್‌ಗೆ ತಿಳಿಸಿದೆ. ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ವೇಶ್ಯಾವಾಟಿಕೆ ನಡೆಸುವುದಕ್ಕೆ ರಕ್ಷಣೆ ನೀಡುವಂತೆ ವಕೀಲರೆಂದು ಹೇಳಿಕೊಂಡ ಅರ್ಜಿದಾರರೊಬ್ಬರು ಸಲ್ಲಿಸಿದ ಅರ್ಜಿಗೆ ಮದ್ರಾಸ್ ಹೈಕೋರ್ಟ್ ಕೆರಳಿ ಕೆಂಡವಾಗಿದೆ. ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ವಕೀಲರು ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಬಿ ಪುಗಲೇಂಧಿ ಅವರ ಪೀಠವು ವಯಸ್ಕ ಸಮ್ಮತಿಯ…
ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದವರನ್ನು ರಕ್ಷಿಸಿದ್ದ ಖಾಕಿ ಅಸಲಿ ಹೀರೋಗಳನ್ನು ಅಭಿನಂದಿಸಿದ ಎಸ್ ಪಿ*
*ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದವರನ್ನು ರಕ್ಷಿಸಿದ್ದ ಖಾಕಿ ಅಸಲಿ ಹೀರೋಗಳನ್ನು ಅಭಿನಂದಿಸಿದ ಎಸ್ ಪಿ* ಇತ್ತೀಚೆಗೆ 112-ERSS ವಾಹನದ ಅಧಿಕಾರಿಗಳಾದ ಶಿವರುದ್ರಯ್ಯ ಎ ಆರ್, ಹೆಚ್.ಸಿ, ಸಾಗರ ಪೇಟೆ, ಪೊಲೀಸ್ ಠಾಣೆ ಮತ್ತು ಚಾಲಕರಾದ ಶಿವಾನಂದ್, ಎಪಿಸಿ, ಡಿಎಆರ್ ಶಿವಮೊಗ್ಗ ರವರು ಸಾಗರ ತಾಲ್ಲೂಕಿನ ಕುಗ್ವೆ ಗ್ರಾಮದ ಹೊಳೆಯ ಹತ್ತಿರ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆ ಹಾಗೂ 2 ಮಕ್ಕಳು ಸೇರಿದಂತೆ 3 ಜನರನ್ನು ರಕ್ಷಿಸಿ, ಉತ್ತಮ ಕಾರ್ಯ ನಿರ್ವಹಿಸಿದ್ದು ಸಾರ್ವಜನಿಕ ಶ್ಲಾಘನೆಗೆ ಪಾತ್ರವಾಗಿತ್ತು. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ….
ಮೂರು ದೇವಸ್ಥಾನಗಳಲ್ಲಿ ಕಳುವು ಮಾಡಿದ್ದ ಮಾಲುಗಳ ಸಮೇತ ಭದ್ರಾವತಿ ಮೂಲದ ಇಬ್ಬರು ಕಳ್ಳರನ್ನು ಕೆಡವಿದ ಮಾಳೂರು ಪೊಲೀಸರು…*
*ಮೂರು ದೇವಸ್ಥಾನಗಳಲ್ಲಿ ಕಳುವು ಮಾಡಿದ್ದ ಮಾಲುಗಳ ಸಮೇತ ಭದ್ರಾವತಿ ಮೂಲದ ಇಬ್ಬರು ಕಳ್ಳರನ್ನು ಕೆಡವಿದ ಮಾಳೂರು ಪೊಲೀಸರು…* ಮಾಳೂರಿನ ದೇವಸ್ಥಾನದ ವಸ್ತುಗಳನ್ನು, ಹಣವನ್ನು ಕದ್ದಿದ್ದ ಕಳ್ಳರಿಬ್ಬರನ್ನು ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 2023ರ ಆಗಸ್ಟ್ 9 ರಂದು ರಾತ್ರಿ ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಚಿಡುವ ಗ್ರಾಮದ ಶ್ರೀ ವೀರಾಂಜನೇಯ ದೇವಸ್ಥಾನದ ಬಾಗಿಲನ್ನು ಒಡೆದು ಕಳ್ಳರು 75,000/- ರೂ ಮೌಲ್ಯದ ದೇವಸ್ಥಾನದ ಘಂಟೆ, ಜಾಗಟೆ, ತಟ್ಟೆಗಳು, ಬೆಳ್ಳಿದೀಪಗಳು, ಬೆಳ್ಳಿಯ ಅಕ್ಷಯ ಪಾತ್ರೆ ಮತ್ತು 40,000/- ರೂ ಕಾಣಿಕೆ…
ಏನಿದು ವಿಚಿತ್ರ?!32 ಹಲ್ಲುಗಳೊಂದಿಗೆ ಹುಟ್ಟಿದ ಮಗು!
ಏನಿದು ವಿಚಿತ್ರ?! 32 ಹಲ್ಲುಗಳೊಂದಿಗೆ ಹುಟ್ಟಿದ ಮಗು! ಅಮೆರಿಕದ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆದರೆ ಈ ಮಗುವಿನ ವಿಶೇಷತೆ ಎಂದರೆ ಹುಟ್ಟುವಾಗಲೇ 32 ಹಲ್ಲುಗಳನ್ನು ಹೊಂದಿದೆ. ಸದ್ಯ ತನ್ನ ಮಗುವಿನ ಬಗ್ಗೆ ಸ್ವತಃ ತಾಯಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಸಾಮಾನ್ಯವಾಗಿ ಮಗುವಿಗೆ ಹಲ್ಲು ಹುಟ್ಟಲು ಪ್ರಾರಂಭವಾಗುವುದು ಆರು ತಿಂಗಳಿಂದ 12 ತಿಂಗಳ ನಡುವೆ . ಆದಾಗ್ಯೂ, ಹಲ್ಲುಗಳು ಸಂಪೂರ್ಣವಾಗಿ ಬರಲು ಹಲವು ವರ್ಷಗಳು ಬೇಕಾಗುತ್ತದೆ….
ಗ್ಯಾರಂಟಿ ಸಮಿತಿ ಬಸವರಾಜ್ ಮನವಿಗೆ ಸ್ಪಂದಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್;**ಹತ್ತು ದಿಗಳಲ್ಲಿ ಮಹಿಳೆಯರ ಅಕೌಂಟಿಗೆ ಹಣ*
*ಗ್ಯಾರಂಟಿ ಸಮಿತಿ ಬಸವರಾಜ್ ಮನವಿಗೆ ಸ್ಪಂದಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್;* *ಹತ್ತು ದಿಗಳಲ್ಲಿ ಮಹಿಳೆಯರ ಅಕೌಂಟಿಗೆ ಹಣ* ಕಾಂಗ್ರೆಸ್ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಹಣ ಎರಡು ತಿಂಗಳುಗಳಿಂದ ಫಲಾನುಭವಿ ಮಹಿಳೆಯರಿಗೆ ತಲುಪಿಲ್ಲ.ಕೂಡಲೇ ಹಣ ಬಿಡುಗಡೆ ಮಾಡಿ ಎಂದು ಶಿವಮೊಗ್ಗ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ನೂತನ ಸದಸ್ಯರಾದ ಎಸ್.ಬಸವರಾಜ್ ವಿಧಾನಸಭೆಯಲ್ಲಿ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಗಮನಕ್ಕೆ ತಂದಾಗ, ಅವರು ಮುಂದಿನ ಹತ್ತು ದಿನಗಳಲ್ಲಿ ಎರಡು ತಿಂಗಳ ಗೃಹಲಕ್ಷ್ಮೀ ಹಣ…
ಶಿಕ್ಷಣ ಸಚಿವ ಮಧು ಬಂಗಾರಪ್ಪರವರ ಬೆಂಗಳೂರು ಕಚೇರಿಯಲ್ಲಿ ನಡೆದ ಅರಣ್ಯ ಒತ್ತುವರಿ, ಶರಾವತಿ ಮುಳುಗಡೆ ಸದಸ್ಯರ ಸಭೆಅರಣ್ಯ ಸಚಿವ ಈಶ್ವರ ಖಂಡ್ರೆ ಏನಂದ್ರು?
ಶಿಕ್ಷಣ ಸಚಿವ ಮಧು ಬಂಗಾರಪ್ಪರವರ ಬೆಂಗಳೂರು ಕಚೇರಿಯಲ್ಲಿ ನಡೆದ ಅರಣ್ಯ ಒತ್ತುವರಿ, ಶರಾವತಿ ಮುಳುಗಡೆ ಸದಸ್ಯರ ಸಭೆ ಅರಣ್ಯ ಸಚಿವ ಈಶ್ವರ ಖಂಡ್ರೆ ಏನಂದ್ರು? ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಅವರ ವಿಧಾನಸೌಧದ ಕಚೇರಿಯಲ್ಲಿ ಅರಣ್ಯ ಇಲಾಖೆ ಸಚಿವರಾದ ಈಶ್ವರ್ ಖಂಡ್ರೆ ಅವರೊಂದಿಗೆ ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ಶಿಕಾರಿಪುರ, ಹೊಸನಗರ, ಶಿವಮೊಗ್ಗ, ತೀರ್ಥಹಳ್ಳಿ ಹಾಗೂ ಭದ್ರಾವತಿ ತಾಲ್ಲೂಕುಗಳ ಅರಣ್ಯ ಭೂಮಿ ಒತ್ತುವರಿ,…
ಮೂರು ಜೀವ ಉಳಿಸಿದ ಆ ಖಾಕಿ ಹೀರೋಗಳು*
*ಮೂರು ಜೀವ ಉಳಿಸಿದ ಆ ಖಾಕಿ ಹೀರೋಗಳು* ಜುಲೈ 22ರ ಸೋಮವಾರ ಮಧ್ಯಾಹ್ನ ಸಾಗರ ತಾಲ್ಲೂಕಿನ ಕುಗ್ವೆ ಗ್ರಾಮದ ಹೊಳೆಯ ಹತ್ತಿರ ಮಹಿಳೆಯೊಬ್ಬರು ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾರೆಂಬ ಮಾಹಿತಿ ಪೊಲೀಸ್ ಇಲಾಖೆಗೆ ಸಿಗುತ್ತೆ. 112-ERSS ಸಹಾಯವಾಣಿಗೆ ಸಾರ್ವಜನಿಕರಿಂದ ಕರೆ ಬಂದ ಮೇರೆಗೆ, ERSS ವಾಹನದ ಅಧಿಕಾರಿಗಳಾದ ಶಿವರುದ್ರಯ್ಯ ಎ ಆರ್, ಹೆಚ್.ಸಿ,* ಸಾಗರ ಪೇಟೆ, ಪೊಲೀಸ್ ಠಾಣೆ ಮತ್ತು ಚಾಲಕರಾದ ಶಿವಾನಂದ್, ಎಪಿಸಿ, ಡಿಎಆರ್ ಶಿವಮೊಗ್ಗ ರವರು ಕೂಡಲೇ ಕಾರ್ಯ ಪ್ರವೃತ್ತರಾಗಿ ಸ್ಥಳಕ್ಕೆ ಹೋಗಿ ಆತ್ಮಹತ್ಯೆಗೆ…
ಅಂತರಗಂಗೆ ಗ್ರಾ.ಪಂ. ಅಧ್ಯಕ್ಷ ನಾಗೇಶನ ಖಜಾನೆ ಮೇಲೆ ಲೋಕಾಯುಕ್ತ ದಾಳಿಲಕ್ಷಕ್ಕೆಲ್ಲ ಬೆಲೆಯೇ ಇಲ್ಲದೇ ಕೊಳೀತಿತ್ತು ಹಣ!
ಅಂತರಗಂಗೆ ಗ್ರಾ.ಪಂ. ಅಧ್ಯಕ್ಷ ನಾಗೇಶನ ಖಜಾನೆ ಮೇಲೆ ಲೋಕಾಯುಕ್ತ ದಾಳಿ ಲಕ್ಷಕ್ಕೆಲ್ಲ ಬೆಲೆಯೇ ಇಲ್ಲದೇ ಕೊಳೀತಿತ್ತು ಹಣ! ನಾಗೇಶ್.ಬಿ, ಅಧ್ಯಕ್ಷರು, ಗ್ರಾಮ ಪಂಚಾಯಿತಿ ಅಂತರಗಂಗೆ ಗ್ರಾಮ, ಭದ್ರಾವತಿ ತಾಲ್ಲೂಕು ರವರು ತಮ್ಮ ಬಲ್ಲ ಮೂಲಗಳ ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಗಳಿಸಿರುತ್ತಾರೆಂಬ ದೂರಿನ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕಲಂ 13(1)(ಬಿ) ಸಹಿತ 13(2) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 (ತಿದ್ದುಪಡಿ ಕಾಯ್ದೆ-2018) ರೀತ್ಯಾ ಪ್ರಕರಣ ದಾಖಲಾಗಿರುತ್ತದೆ. ನಾಗೇಶ್.ಬಿ, ಅಧ್ಯಕ್ಷರು, ಗ್ರಾಮ ಪಂಚಾಯಿತಿ ಅಂತರಗಂಗೆ ಗ್ರಾಮ, ಭದ್ರಾವತಿ…