ಶಿವಮೊಗ್ಗದಓ ಟಿ ರಸ್ತೆಯ ಗುಜರಿ ಅಂಗಡಿಯಲ್ಲಿ ಕಾಳಿಂಗ ದರ್ಶನ
ಶಿವಮೊಗ್ಗದ ಓ ಟಿ ರಸ್ತೆಯ ಗುಜರಿ ಅಂಗಡಿಯಲ್ಲಿ ಕಾಳಿಂಗ ದರ್ಶನ ಶಿವಮೊಗ್ಗ ನಗರದ ಓ ಟಿ ರಸ್ತೆಯ ಗುಜರಿ ಅಂಗಡಿಯಲ್ಲಿ ಸುಮಾರು 2 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡು ಸ್ಥಳೀಯರನ್ನು ಬೆಚ್ಚಿಬೀಳಿಸಿದ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ. ಗಾಬರಿಗೊಂಡ ಸ್ಥಳೀಯರು ಕೂಡಲೇ ಉರಗ ರಕ್ಷಕರಾದ ಸ್ನೇಕ್ ವಿಕ್ಕಿ ಮತ್ತು ಉರಗತಜ್ಞರಾದ ಜಯಂತ್ ಬಾಬುರವರಿಗೆ ಕರೆಮಾಡಿ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅವರು, ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸಂರಕ್ಷಿಸಿದರು. ಅರಣ್ಯ ಇಲಾಖೆ ಸಿಬ್ಬಂದಿಗಳ ಸಮ್ಮುಖದಲ್ಲಿ ಅರಣ್ಯ ಪ್ರದೇಶಕ್ಕೆ…
2022-23 ನೇ ಸಾಲಿನಲ್ಲಿ ಒಟ್ಟು 247 ಬಾಲ ಗರ್ಭಿಣಿಯರ ಪ್ರಕರಣ*ಬಾಲ್ಯ ವಿವಾಹ ವಿರುದ್ದ ಪ್ರಕರಣ ದಾಖಲಿಸಿ-ಅರಿವನ್ನು ತೀವ್ರಗೊಳಿಸಲು ಡಿಸಿ ಸೂಚನೆ*
2022-23 ನೇ ಸಾಲಿನಲ್ಲಿ ಒಟ್ಟು 247 ಬಾಲ ಗರ್ಭಿಣಿಯರ ಪ್ರಕರಣ *ಬಾಲ್ಯ ವಿವಾಹ ವಿರುದ್ದ ಪ್ರಕರಣ ದಾಖಲಿಸಿ-ಅರಿವನ್ನು ತೀವ್ರಗೊಳಿಸಲು ಡಿಸಿ ಸೂಚನೆ* ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚುತ್ತಿದ್ದು, ಇದರ ವಿರುದ್ದ ಹೆಚ್ಚೆಚ್ಚು ಪ್ರಕರಣಗಳನ್ನು ದಾಖಲಿಸಬೇಕು ಹಾಗೂ ಅರಿವನ್ನು ತೀವ್ರಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆ ನೀಡಿದರು. ಬುಧವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವಿವಿಧ ಯೋಜನೆಗಳು, ಕಾರ್ಯಕ್ರಮಗಳು ಮತ್ತು ಜಿಲ್ಲಾ ಮಟ್ಟದ ಸಮಿತಿಗಳ ಪ್ರಗತಿ ಪರಿಶೀಲನಾ ಸಭೆಯ…
ಲೋಕಾಯುಕ್ತ: ಸಾರ್ವಜನಿಕರ ಕುಂದು ಕೊರತೆ ಅಹವಾಲು ಸ್ವೀಕಾರ ಸಭೆ*ಯಾವ ಯಾವಾಗ? ಎಲ್ಲ್ಲೆಲ್ಲಿ?
*ಲೋಕಾಯುಕ್ತ: ಸಾರ್ವಜನಿಕರ ಕುಂದು ಕೊರತೆ ಅಹವಾಲು ಸ್ವೀಕಾರ ಸಭೆ* ಯಾವ ಯಾವಾಗ? ಎಲ್ಲ್ಲೆಲ್ಲಿ? ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಜಿಲ್ಲಾ ಅಧಿಕಾರಿಗಳು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಆಗಸ್ಟ್-2024ರ ಮಾಹೆಯ ಕೆಳಕಂಡ ದಿನಗಳಂದು ಸಾರ್ವಜನಿಕರ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆ ನಡೆಸುವರು. ಆ. 23 ರಂದು ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಸೊರಬ ತಾಲೂಕು ಕಚೇರಿ ಸಭಾಂಗಣ, ಆ.27 ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ತೀರ್ಥಹಳ್ಳಿ ತಾಲೂಕು ಕಚೇರಿ ಸಭಾಂಗಣ ಮತ್ತು ಬೆಳಿಗ್ಗೆ 11.00…
ಬಡವರು-ಹಿಂದುಳಿದವರ ಕೈಹಿಡಿದು ಶ್ರಮಿಸಿದವರು ದೇವರಾಜ ಅರಸು : ಬಿ.ವೈ.ರಾಘವೇಂದ್ರ*
*ಬಡವರು-ಹಿಂದುಳಿದವರ ಕೈಹಿಡಿದು ಶ್ರಮಿಸಿದವರು ದೇವರಾಜ ಅರಸು : ಬಿ.ವೈ.ರಾಘವೇಂದ್ರ* ಶೋಷಿತರು, ಹಿಂದುಳಿದವರು, ತಳ ಸಮುದಾಯ, ರೈತಾಪಿ ವರ್ಗದವರ ಕೈಹಿಡಿದು ಅವರ ಪರವಾಗಿ ಕಾನೂನುಗಳನ್ನು ತರುವ ಮೂಲಕ ಅವರ ಏಳ್ಗೆಗೆ ಶ್ರಮಿಸಿದವರು ಡಿ.ದೇವರಾಜ ಅರಸುರವರು ಎಂದು ಸಂಸದರಾದ ಬಿ.ವೈ.ರಾಘವೇಂದ್ರ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಕುವೆಂಪು ರಂಗಮAದಿರದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿಪರ ಸಾಧನೆಗಳ ಸರದಾರ, ಸಾಮಾಜಿಕ ಪರಿವರ್ತನೆಯ ಹರಿಕಾರ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸುರವರ 109…
ರಾಜೀವ್ ಗಾಂಧಿ ಮತ್ತು ಅರಸು ಬಡವರ ಧ್ವನಿಯಾಗಿದ್ದವರು; ಶಾಸಕಿ ಬಲ್ಕೀಷ್ ಬಾನು
ರಾಜೀವ್ ಗಾಂಧಿ ಮತ್ತು ಅರಸು ಬಡವರ ಧ್ವನಿಯಾಗಿದ್ದವರು; ಶಾಸಕಿ ಬಲ್ಕೀಷ್ ಬಾನು ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಇಂದಿರಾಗಾಂಧಿಯವರ 20 ಅಂಶದ ಕಾರ್ಯಕ್ರಮಗಳನ್ನು ಪರಿಪೂರ್ಣವಾಗಿ ಜಾರಿಗೆ ತಂದವರು. ಅದರಲ್ಲೂ ಜೀತ ಪದ್ಧತಿ ಮತ್ತು ಮಲ ಹೊರುವ ಪದ್ಧತಿಯನ್ನು ನಿಷೇಧಿಸಿದವರು, ದಮನಿತರ ಧ್ವನಿಯಾಗಿದ್ದವರು ಎಂದು ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಬಲ್ಕೀಶ್ ಬಾನು ಹೇಳಿದರು. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಆರ್.ಪ್ರಸನ್ನ ಕುಮಾರ್; ದೇವರಾಜ್ ಅರಸುರವರ ಹುಟ್ಟುಹಬ್ಬ ಅರ್ಥಪೂರ್ಣ. ಇವತ್ತಿಗೂ ನೆನಪು…
ವಿನೋಬನಗರದ ಲೈರಾ ಸ್ಪಾದಲ್ಲಿ ವೇಶ್ಯಾವಾಟಿಕೆ;ಇಬ್ಬರು ಸಂತ್ರಸ್ತರನ್ನು ಉಳಿಸಿದ ಪೊಲೀಸರು…ಮಿಳಘಟ್ಟ ಮೂಲದ ಸೌಮ್ಯ ಪ್ರಭು ಬಂಧನ
ವಿನೋಬನಗರದ ಲೈರಾ ಸ್ಪಾದಲ್ಲಿ ವೇಶ್ಯಾವಾಟಿಕೆ; ಇಬ್ಬರು ಸಂತ್ರಸ್ತರನ್ನು ಉಳಿಸಿದ ಪೊಲೀಸರು… ಮಿಳಘಟ್ಟ ಮೂಲದ ಸೌಮ್ಯ ಪ್ರಭು ಬಂಧನ ಸ್ಪಾ ಸಲೂನ್ ಗಳಲ್ಲಿ ನಡೆಯುತ್ತಿದೆಯೇ ವೇಶ್ಯಾವಾಟಿಕೆ? ಹೌದು ಎನ್ನುತ್ತದೆ ಈ ಪೊಲೀಸ್ ವರದಿ. ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ವೀರಣ್ಣ ಲೇ ಔಟ್ ನ ಮೂರನೇ ತಿರುವಿನಲ್ಲಿರೋ ಲೈರಾ ಮೇಕ್ ಓವರ್ ಸ್ಟುಡಿಯೋ ಸಲೂನ್ ಎಂಡ್ ಸ್ಪಾನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಇಬ್ಬರು ಸಂತ್ರಸ್ತ ಮಹಿಳೆಯರನ್ನಿಟ್ಟುಕೊಂಡು ಮಿಳಘಟ್ಟ ಮೂಲದ ಸೌಮ್ಯಾ ಪ್ರಭು ಎಂಬ…
ಔಷಧಿ ವ್ಯಾಪಾರಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ
ಔಷಧಿ ವ್ಯಾಪಾರಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ ಶಿವಮೊಗ್ಗ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ 2024-27 ಸಾಲಿನ ಪದಾಧಿಕಾರಿಗಳ ಸ್ಥಾನಕ್ಕೆ ಈ ಕೆಳಕಂಡವರು ಆಯ್ಕೆಯಾಗಿದ್ದಾರೆ ಎಂದು ಸಂಘದ ಖಜಾಂಚಿ ಕೆ.ಸಿ.ನಾಗರಾಜ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಘದ ಜಿಲ್ಲಾ ಅಧ್ಯಕ್ಷರಾಗಿ ಎಸ್. ಪಿ .ಮಧುಕರ್, ಉಪಾಧ್ಯಕ್ಷರಾಗಿ ದತ್ತಾತ್ರೇಯ ಎನ್. ಉಡುಪ, ಕಾರ್ಯದರ್ಶಿಯಾಗಿ ಈ.ಜಿ.ವೆಂಕಟೇಶ, ಸಹಕಾರ್ಯದರ್ಶಿಯಾಗಿ ಎಂ.ಎಲ್. ಮಂಜುನಾಥ ಮತ್ತು ಖಜಾಂಚಿಯಾಗಿ ಕೆ.ಸಿ.ನಾಗರಾಜ ಅವರು ಆಯ್ಕೆಯಾಗಿದ್ದಾರೆ. ಚುನಾಯಿತ ಸದಸ್ಯರಾಗಿ ಎಸ್.ಪಿ ಮಧುಕರ್, ವಿವೇಕಾನಂದ ನಾಯಕ್, ಕೆ.ಕುಮಾರ್, ಎಂ.ಎಲ್.ಮಂಜುನಾಥ್, ಎಸ್. ವಿನಾಯಕ್ ಸ್ವಾಮಿ…
ಸಿದ್ದರಾಮಯ್ಯ ಗೌರವಯುತವಾಗಿ ರಾಜಿನಾಮೆ ನೀಡಲಿ; ಶಾಸಕ ಎಸ್ ಎನ್ ಚನ್ನಬಸಪ್ಪ(ಚನ್ನಿ)
ಸಿದ್ದರಾಮಯ್ಯ ಗೌರವಯುತವಾಗಿ ರಾಜಿನಾಮೆ ನೀಡಲಿ; ಶಾಸಕ ಎಸ್ ಎನ್ ಚನ್ನಬಸಪ್ಪ(ಚನ್ನಿ) ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲಿಗೆ ಕಾಂಗ್ರೆಸ್ ಕೈ ಹಾಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ವಿರುದ್ಧ ನಡೆ ತೋರಿಸಿ ದೇಶಕ್ಕೆ ಅಪಮಾನ ಮಾಡಿದೆ. ಪ್ರಶ್ನಿಸಬಹುದು. ಅದಕ್ಕೊಂದು ನೈತಿಕ ನೆಲೆಗಟ್ಟಿರಬೇಕು. ರಾಜ್ಯಪಾಲರ ನಿರ್ಣಯದ ವಿರುದ್ಧ ಅಪಮಾನಿಸುವ ಕೆಲಸ ಕಾಂಗ್ರೆಸ್ ಮಾಡ್ತಿದೆ. ಇದು ದೇಶದ ನಾಗರೀಕರಿಗೆ ಮಾಡುತ್ತಿರುವ ಅಪಮಾನ ಸಚಿವ ಕೃಷ್ಣ ಭೈರೇಗೌಡರ ಮಾತಿಂದ ಗೌರವ ಕಡಿಮೆ. ಐವಾನ್ ಡಿಸೋಜಾ ಹೈವಾನ್ ಡಿಸೋಜಾ ಥರ ಮಾತಾಡ್ತಿದ್ದಾರೆ. ಬಾಂಗ್ಲಾ ಘಟನೆ ರಾಜ್ಯಕ್ಕೆ ಹೋಲಿಸುತ್ತಿರುವವರನ್ನು ಬಂಧಿಸಬೇಕು….