ಅಶ್ವತ್ಥ ಅಂಕಣ- ಜಂಗ್ಲಿಯ ಚುನಾವಣಾ ಕಾವು…
ಹಳ್ಳಿಯಲ್ಲೂ ಚುನಾವಣಾ ಕಾವು ಏರಿತ್ತು. ಸುಡು ಸುಡು ಮದ್ಯಾನ ಚವಳ್ಳಿಯ ಪೆಟ್ಟಿಗೆ ಅಂಗಡಿಯ ಕಲ್ಲು ಹಾಸಿನ ಮೇಲೆ ಜಂಗ್ಲಿ ಕೂತಿದ್ದ. ಕಲ್ಲು ಬೆಂಚು ಎಷ್ಟು ಕಾದಿತ್ತೆಂದರೆ ಪಟ್ಟಪಟ್ಟಿ ನಿಕ್ಕರನ್ನೂ ದಾಟಿ ಆ ಕಾವು ಕುಂಡಿಗೆ ತಾಗಿತ್ತು. ಒಂದು ಸಲ ಎದ್ದು ಕುಂಡಿಯನ್ನು ಸವರಿಕೊಂಡು ಮತ್ತೆ ಕೂತ. ಲ್ಯೇ ಚವಳ್ಳಿ ಈ ಬಿಸಿಲು ಕಾಲದಲ್ಲಿ ಅಂಗಡಿ ಮುಂದೆ ಒಂದು ಟಾರ್ಪಲ್ನಾದ್ರು ಇಳಿಬಿಡದಲ್ವ. ನಾಲ್ಕು ಜನ ಕೂತ್ಕೊಂಡ್ರೆ ತಾನೇ ನಿಂಗು ನಾಕ್ಕಾಸು ಸಂಪಾದನೆ ಆಗೋದು ಅಂದ. ಜಂಗ್ಲಿಯ ಮಾತು ಉರಿಯೋ…