

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ನಾಳೆ ಶನಿವಾರದಂದು ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿದ ಶಿವಮೊಗ್ಗ ತಹಶೀಲ್ದಾರ್ ರಾಜೀವ್
ನಾಳೆ ಶನಿವಾರದಂದು ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿದ ಶಿವಮೊಗ್ಗ ತಹಶೀಲ್ದಾರ್ ರಾಜೀವ್ ಶಿವಮೊಗ್ಗ ತಾಲೂಕಿನಾದ್ಯಂತ ವ್ಯಾಪಕವಾಗಿ ಮಳೆ ಸುರಿಯುತ್ತಿರುವ ಹಾಗೂ ಶೀತ ವಾತಾವರಣ ಹಿನ್ನೆಲೆಯಲ್ಲಿ ಜುಲೈ 26 ರ ಶನಿವಾರದಂದು ಶಿವಮೊಗ್ಗ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು. ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಿ ಶಿವಮೊಗ್ಗ ತಹಶೀಲ್ದಾರ್ ವಿ.ಎಸ್. ರಾಜೀವ್ ಆದೇಶಿಸಿದ್ದಾರೆ. ಮುಂಜಾಗ್ರತಾ ದೃಷ್ಟಿಯಿಂದ ಶಿವಮೊಗ್ಗ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು. ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ಶನಿವಾರದಂದು…
ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ಸಿಗೆ ನೂತನ ಸಾರಥಿ* *ಶ್ರೀಮತಿ ಶ್ವೇತಾ ಬಂಡಿ ನೂತನ ಅಧ್ಯಕ್ಷೆ*
*ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ಸಿಗೆ ನೂತನ ಸಾರಥಿ* *ಶ್ರೀಮತಿ ಶ್ವೇತಾ ಬಂಡಿ ನೂತನ ಅಧ್ಯಕ್ಷೆ* ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ಸಿನ ನೂತನ ಅಧ್ಯಕ್ಷೆಯನ್ನಾಗಿ ಶ್ರೀಮತಿ ಶ್ವೇತಾ ಬಂಡಿಯವರ ಹೆಸರನ್ನು ಘೋಷಿಸಲಾಗಿದೆ. ಆಲ್ ಇಂಡಿಯಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಅಲ್ಕಾ ಲಾಂಬಾರವರ ಆದೇಶದ ಮೇರೆಗೆ ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಸೌಮ್ಯಾರೆಡ್ಡಿಯವರು ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯನ್ನಾಗಿ ಶ್ರೀಮತಿ ಶ್ವೇತಾ ಬಂಡಿಯವರ ಹೆಸರು ಘೋಷಿಸಿ ಆದೇಶಿಸಿದ್ದಾರೆ. ಶ್ವೇತಾ ಬಂಡಿಯವರು ಹೊಸನಗರ ತಾಲ್ಲೂಕು ರಿಪ್ಪನ್ ಪೇಟೆ…
ಜೈಲಿನಲ್ಲೇ ಹಫ್ತಾ ವಸೂಲಿ!* *4 ಆರೋಪಿಗಳ ವಿರುದ್ದ ಕೋಕಾ ಕಾಯ್ದೆಯಡಿ ಎಫ್ಐಆರ್* ಶಿವಮೊಗ್ಗದಲ್ಲೂ ಬೀಳಲಿದೆಯಾ ಕೋಕಾ ಉರುಳು?
*ಜೈಲಿನಲ್ಲೇ ಹಫ್ತಾ ವಸೂಲಿ!* *4 ಆರೋಪಿಗಳ ವಿರುದ್ದ ಕೋಕಾ ಕಾಯ್ದೆಯಡಿ ಎಫ್ಐಆರ್* ಶಿವಮೊಗ್ಗದಲ್ಲೂ ಬೀಳಲಿದೆಯಾ ಕೋಕಾ ಉರುಳು? ಮಂಗಳೂರಿನಲ್ಲಿ (Mangaluru) ಕಾನೂನು ಸುವ್ಯವಸ್ಥೆ ಪೊಲೀಸರ ನಿಯಂತ್ರಣಕ್ಕೆ ಬಂದಿದೆ. ನಗರ ಪೊಲೀಸ್ ಕಮಿಷನರ್ ಆಗಿ ಖಡಕ್ ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅಧಿಕಾರ ಸ್ವೀಕರಿಸಿದ ಬಳಿಕ ಕ್ರಿಮಿನಲ್ಗಳನ್ನು ಹೆಡೆಮುರಿ ಕಟ್ಟಲಾಗುತ್ತಿದೆ. ಇದರ ಜೊತೆ ಕ್ರಿಮಿನಲ್ಗಳ ವಿರುದ್ದ ಕಠಿಣ ಕಾನೂನು ಕ್ರಮಕ್ಕೆ ಪೊಲೀಸರು ಮುಂದಾಗಿದ್ದು, ಇದೀಗ ಕೆ-ಕೋಕಾ ಕಾಯ್ದೆಯಡಿ (KOKA Act) ಪ್ರಕರಣ ದಾಖಲಿಸಲಾಗುತ್ತಿದೆ. ಇತ್ತಿಚೇಗೆ ಮಂಗಳೂರು ಜಿಲ್ಲಾ…
ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿ ಹೇಳಿಕೆ;* *ಎಂಎಲ್ಸಿ ಎನ್ ರವಿಕುಮಾರ್ಗೆ ಮಧ್ಯಂತರ ರಿಲೀಫ್*
*ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿ ಹೇಳಿಕೆ;* *ಎಂಎಲ್ಸಿ ಎನ್ ರವಿಕುಮಾರ್ಗೆ ಮಧ್ಯಂತರ ರಿಲೀಫ್* ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ (Shalini Rajneesh) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪ ಹೊತ್ತಿದ್ದ ಬಿಜೆಪಿ ಎಂಎಲ್ಸಿ ಎನ್ ರವಿಕುಮಾರ್ (BJP MLC N Ravikumar) ವಿರುದ್ಧದ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ತಡೆ ನೀಡಿದೆ. ಆ ಮೂಲಕ ಎನ್. ರವಿಕುಮಾರ್ಗೆ ಮಧ್ಯಂತರ ರಿಲೀಫ್ ಸಿಕ್ಕಿದೆ. ಶಾಲಿನಿ ರಜನೀಶ್ ದೂರು ನೀಡಿಲ್ಲ, 3ನೇ ವ್ಯಕ್ತಿ ದೂರು ಆಧರಿಸಿ ಕೇಸ್ ದಾಖಲಿಸಲಾಗಿದೆ. ಹೇಳಿಕೆಯಲ್ಲಿ…
ಶಿವಮೊಗ್ಗ ಶರಾವತಿ ನಗರದಲ್ಲಿ ಸಿಲಿಂಡರ್ ಸ್ಫೋಟ; ಗಾಯಗೊಂಡ ಕುಟುಂಬಕ್ಕೆ ಸಹಕರಿಸಿ ಧೈರ್ಯ ತುಂಬಿದ ಹೆಚ್.ಸಿ.ಯೋಗೇಶ್ ಮತ್ತು ತಂಡ
ಶಿವಮೊಗ್ಗ ಶರಾವತಿ ನಗರದಲ್ಲಿ ಸಿಲಿಂಡರ್ ಸ್ಫೋಟ; ಗಾಯಗೊಂಡ ಕುಟುಂಬಕ್ಕೆ ಸಹಕರಿಸಿ ಧೈರ್ಯ ತುಂಬಿದ ಹೆಚ್.ಸಿ.ಯೋಗೇಶ್ ಮತ್ತು ತಂಡ ಶಿವಮೊಗ್ಗ ಶರಾವತಿ ನಗರದ 1ನೇ ಅಡ್ಡ ರಸ್ತೆ ಮಸೀದಿ ಪಕ್ಕ ಓಣಿಯಲ್ಲಿ ಮೊಹಮದ್ ಪೀರ್ (49) ಅವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ತೀವ್ರವಾಗಿ ಗಾಯಗೊಂಡ ಕುಟುಂಬದ ಆರೋಗ್ಯ ವಿಚಾರಿಸಿದ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ ಅಭ್ಯರ್ಥಿಯಾದ ಹಾಗೂ ಮಹಾನಗರಪಾಲಿಕೆ ಮಾಜಿ ಸದಸ್ಯರಾದ *ಹೆಚ್. ಸಿ. ಯೋಗೇಶ್* ರವರು ಧೈರ್ಯ ತುಂಬಿದರು. ಗಾಯಾಳು ರವರ ಪತ್ನಿ ಸಾಹೇರ ಹಾಗೂ…
ಗಾಂಧಿ ಬಜಾರ್ ಫುಟ್ ಪಾತ್ ಒತ್ತುವರಿ;* *ತೆರವುಗೊಳಿಸಿದ ಶಿವಮೊಗ್ಗ ಮಹಾನಗರ ಪಾಲಿಕೆ* *ಶಹಬ್ಬಾಶ್ ಅಂತಿದ್ದಾರೆ ಫುಟ್ ಪಾತಲ್ಲಿ ಓಡಾಡೋ ಜನ*
*ಗಾಂಧಿ ಬಜಾರ್ ಫುಟ್ ಪಾತ್ ಒತ್ತುವರಿ;* *ತೆರವುಗೊಳಿಸಿದ ಶಿವಮೊಗ್ಗ ಮಹಾನಗರ ಪಾಲಿಕೆ* *ಶಹಬ್ಬಾಶ್ ಅಂತಿದ್ದಾರೆ ಫುಟ್ ಪಾತಲ್ಲಿ ಓಡಾಡೋ ಜನ* ಶಿವಮೊಗ್ಗದ ಜನ ನಿಭಿಡ ಪ್ರದೇಶವಾದ ಗಾಂಧಿ ಬಜಾರ್ ಫುಟ್ ಪಾತ್ ಗಳೆಲ್ಲ ಒತ್ತುವರಿಯಾಗಿದ್ದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆಯಿಂದ ಶಿವಮೊಗ್ಗ ಮಹಾನಗರ ಪಾಲಿಕೆಯ ನಲ್ಮ್ ವಿಭಾಗ ಮತ್ತು ಆರೋಗ್ಯ ವಿಭಾಗದ ಸಿಬ್ಬಂದಿ ಸ್ಥಳಕ್ಕೆ ಭೇಟಿ ಮಾಡಿ ಪಾದಾಚಾರಿ ಮಾರ್ಗವನ್ನು ತೆರವುಗೊಳಿಸಿದರು.
ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ನ್ಯಾನೋ ಯೂರಿಯಾ ಬಳಕೆ ಮಾಡಲು ಕೋರಿಕೆ*
*ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ನ್ಯಾನೋ ಯೂರಿಯಾ ಬಳಕೆ ಮಾಡಲು ಕೋರಿಕೆ* ಶಿವಮೊಗ್ಗ ತಾಲ್ಲೂಕಿನಾದ್ಯಂತ ಜುಲೈ ತಿಂಗಳಿನಲ್ಲಿ ಸತತವಾಗಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ರೈತರು ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ನ್ಯಾನೋ ಯೂರಿಯಾ ಬಳಕೆ ಮಾಡಲು ಕೃಷಿ ಇಲಾಖೆ ಸಲಹೆ ನೀಡಿದೆ. ಜುಲೈ ಮಾಹೆಯಲ್ಲಿ ಕಸಬಾ ಹೋಬಳಿಯಲ್ಲಿ ವಾಡಿಕೆ ಮಳೆಗೆ 163.4 ಮಿಮಿ ಗೆ 93 ಮಿಮಿ (ಶೇ.43 ರಷ್ಟು ಕಡಿಮೆ ಮಳೆ), ನಿದಿಗೆ-1 ಹೋಬಳಿ ವಾಡಿಕೆ ಮಳೆ 169.4 ಮಿಮಿ ಗೆ 123.5 ಮಿಮಿ(ಶೇ.27 ರಷ್ಟು ಕಡಿಮೆ ಮಳೆ),…
20 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ಆಯ್ಕೆ ಅಂತಿಮ;* *ಸದ್ಯದಲ್ಲೇ ಘೋಷಣೆ*
*20 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ಆಯ್ಕೆ ಅಂತಿಮ;* *ಸದ್ಯದಲ್ಲೇ ಘೋಷಣೆ* ಸಿಎಂ ಬದಲಾವಣೆ ಚರ್ಚೆ ನಡುವೆಯೇ ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿಕೆ ಶಿವಕುಮಾರ್ (DK Shivakumr) ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ಒಂದೇ ವಿಮಾನದಲ್ಲಿ ದೆಹಲಿಗೆ ಆಗಮಿಸಿದ್ದ ಸಿಎಂ ಹಾಗೂ ಡಿಸಿಎಂ ಈಗ ಒಟ್ಟಿಗೆ ಕೂತು 20 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ಹೆಸರುಗಳನ್ನು ಅಂತಿಮಗೊಳಿಸಿದ್ದಾರೆ. ಗುರುವಾರ ಸಂಜೆ ಕರ್ನಾಟಕ ಭವನ ಭವನದಿಂದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್, ಒಂದೇ ಕಾರಿನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ…
ಮನೆ-ಮನೆಗೆ ಪೊಲೀಸ್’ ಕಾರ್ಯಕ್ರಮ ಉದ್ಘಾಟನೆ *ಜನರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ-ಸ್ಪಂದಿಸಿ; ನ್ಯಾ.ಮಂಜುನಾಥ ನಾಯಕ್*
‘ಮನೆ-ಮನೆಗೆ ಪೊಲೀಸ್’ ಕಾರ್ಯಕ್ರಮ ಉದ್ಘಾಟನೆ *ಜನರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ-ಸ್ಪಂದಿಸಿ; ನ್ಯಾ.ಮಂಜುನಾಥ ನಾಯಕ್* ಶಿವಮೊಗ್ಗ, ‘ಮನೆ ಮನೆಗೆ ಪೊಲೀಸ್’ ಸೇವೆ ಒಂದು ಅತ್ಯುತ್ತಮ ಕಾರ್ಯಕ್ರಮವಾಗಿದ್ದು, ಪೊಲೀಸರು ಜನರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ ಸ್ಪಂದಿಸಬೇಕು ಹಾಗೂ ಜನರು ಕೂಡ ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ್ ತಿಳಿಸಿದರು. ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಾರ್ವಜನಿಕರೊಂದಿಗೆ ಪೊಲೀಸ್ ಇಲಾಖೆಯ ಉತ್ತಮ ಹಾಗೂ ಸ್ನೇಹಪರ ಸಂಬAಧವನ್ನು ಬೆಸೆದು ಸೌಹಾರ್ದ ಸಮಾಜ ನಿರ್ಮಿಸುವ ಉದ್ದೇಶದಿಂದ…