![ಸಂಗೀತ ರವಿರಾಜ್ ಅಂಕಣ- ಪಯಸ್ವಿನಿಯ ತೀರದಲ್ಲಿ!](https://malenaduexpress.com/wp-content/uploads/2024/02/IMG-20240225-WA0033-1-600x400.jpg)
ಸಂಗೀತ ರವಿರಾಜ್ ಅಂಕಣ- ಪಯಸ್ವಿನಿಯ ತೀರದಲ್ಲಿ!
ಪಯಸ್ವಿನಿಯ ತೀರದಲ್ಲಿ…… ಸರಾಗವಾಗಿ, ಸರಳವಾಗಿ, ನಿಧಾನಗತಿಯಲ್ಲಿ , ಹದವಾಗಿ ಬಳುಕುತ್ತಾ, ಏರಿಳಿತವ ಬಯಸುತ್ತಾ, ಶುಭ್ರವಾಗಿ ಸಾಗುವ ನನ್ನೂರ ಚೆಲುವೆ ಪಯಸ್ವಿನಿಯ ಸೌಂದರ್ಯದ ಎದುರು ಲೋಕದಲ್ಲಿ ಬೇರೇನಿರಲು ಸಾಧ್ಯವೇ ಇಲ್ಲ ಎಂಬ ಭಾವನೆ ಪ್ರತಿದಿನ ಮೂಡುತ್ತದೆ. ಸುತ್ತಮುತ್ತ ಅಂದನೆಯ ಹಸಿರು, ದಡದಲ್ಲಿ ಹಳದಿ ಹೂವುಗಳು, ಉರುಟುರುಟಾದ ಕಲ್ಲುಗಳು, ಲಲ್ಲೆ ಹೊಡೆಯುತ್ತ ಈಜಾಡುವ ಮೀನುಗಳು ಈ ಸುಂದರಿಗೆ ಇನ್ನು ಹೆಚ್ಚಿನ ಸಾಥ್ ನೀಡುತ್ತವೆ. ಯಾವ ಅಡೆತಡೆಯು ಇಲ್ಲದೆ, ನಿರ್ವಿಕಾರವಾಗಿ ಮನೆಯ ಆಜುಬಾಜಿನಲ್ಲಿಯೆ ಹರಿಯುವ ಈ ಪಯಸ್ವಿನಿಗೆ ಅಣೆಕಟ್ಟು ಕಟ್ಟುವಾಗ…