ಕೈದಿ ಬಾಂಬೆ ಸಲೀಂನಿಂದ ಪೊಲೀಸರ ಮೇಲೆ ಹಲ್ಲೆ*
*ಕೈದಿ ಬಾಂಬೆ ಸಲೀಂನಿಂದ ಪೊಲೀಸರ ಮೇಲೆ ಹಲ್ಲೆ* ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಪೈಲ್ಸ್ ಚಿಕಿತ್ಸೆಗೆಂದು ಕರೆತರಲಾಗಿದ್ದ ವಿಚಾರಣಾಧೀನ ಕೈದಿ ಮಹಮ್ಮದ್ ಖಲೀಲ್ ಅಲಿಯಾಸ್ ಬಾಂಬೆ ಸಲೀಂ, ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಹೈಡ್ರಾಮಾ ಸೃಷ್ಟಿಸಿದ ಘಟನೆ ನಡೆದಿದೆ. ಕುಖ್ಯಾತ ಕಳ್ಳನಾಗಿರುವ ಬಾಂಬೆ ಸಲೀಂ, ಟಿನ್ನರ್ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೊಲೀಸರಿಗೆ ಬೆದರಿಕೆ ಹಾಕಿದ್ದಾನೆ. ಈ ಘಟನೆಯಲ್ಲಿ ಬಾಂಬೆ ಸಲೀಂ, ಪೊಲೀಸ್ ಸಿಬ್ಬಂದಿ ಸಂತೋಷ್ ಹಾಗೂ ಹುಲಗಪ್ಪ ಎಂಬುವರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಇದರ ಜೊತೆಗೆ, ‘ಸ್ಥಳಕ್ಕೆ ಎಸ್ಪಿಯವರನ್ನು…