ಮರ್ಯಾದಾ ಹತ್ಯೆಗೆ ಕ್ರೂರ ಕಾನೂನು ತನ್ನಿ; ಎನ್.ರವಿಕುಮಾರ್ (ಟೆಲೆಕ್ಸ್) ಮತ್ತು ದೇಶಾದ್ರಿ ಹೊಸ್ಮನೆ ಪತ್ರಿಕಾಗೋಷ್ಠಿಯಲ್ಲಿ ಆಗ್ರಹ
ಮರ್ಯಾದಾ ಹತ್ಯೆಗೆ ಕ್ರೂರ ಕಾನೂನು ತನ್ನಿ; ಎನ್.ರವಿಕುಮಾರ್ (ಟೆಲೆಕ್ಸ್) ಮತ್ತು ದೇಶಾದ್ರಿ ಹೊಸ್ಮನೆ ಪತ್ರಿಕಾಗೋಷ್ಠಿಯಲ್ಲಿ ಆಗ್ರಹ ಶಿವಮೊಗ್ಗ : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಜಾತಿ ವೈಷಮ್ಯ ಹೆಚ್ಚಾಗುತ್ತಿದ್ದು ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ ಇದನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಸರ್ಕಾರ ಉಗ್ರಶಿಕ್ಷೆಯ ಕಾಯ್ದೆಯನ್ನು ರೂಪಿಸಬೇಕಾಗಿದೆ ಎಂದು ಸಮಾನ ಮನಸ್ಕರ ವೇದಿಕೆ ಆಗ್ರಹಿಸಿದೆ. ವೇದಿಕೆಯ ಪ್ರಮುಖರು ಹಾಗೂ ಪತ್ರಕರ್ತರಾದ ಎನ್.ರವಿಕುಮಾರ್ (ಟೆಲೆಕ್ಸ್) ಮತ್ತು ದೇಶಾದ್ರಿ ಹೊಸ್ಮನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹುಬ್ಬಳ್ಳಿಯ ಇನಾಂ ವೀರಾಪುರದಲ್ಲಿ ದಲಿತ ಸಮುದಾಯದ ಹುಡುಗನನ್ನು ಮದುವೆಯಾಗಿ ತುಂಬು ಗರ್ಭಿಣಿಯಾಗಿದ್ದ…


