ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ನಿರ್ಧಾರ ಗಟ್ಟಿಯಿರಲಿ ಹೃದಯವೇ… ವಿಷಕಾರುವವರೂ ಕಾಲಕೆಳಗಿರುವರು! 2. ಸುಮ್ಮನೆ ಸೇರುವುದಿಲ್ಲ ಜನ ಶವಯಾತ್ರೆಗೆ… ಸತ್ತ ಮೇಲೆ ಸತ್ಪ್ರಜೆಗಳೆಲ್ಲರೂ! – *ಶಿ.ಜು.ಪಾಶ* 8050112067 (5/12/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಮೌನ‌ ಓದುವ ಅಕ್ಷರಸ್ಥ ಸಿಕ್ಕರದೇ ಸ್ವರ್ಗ! 2. ನಿನ್ನೆ ನಿನ್ನನ್ನು ಪಡೆಯುವ ಹಠವಿತ್ತು… ಇಂದು ಅದೇ ನಿನ್ನನ್ನು ಮರೆಯುವ ಹಠವಿದೆ 3. ಪುಸ್ತಕಕ್ಕಿಂತ ದೊಡ್ಡ ಪಾಠ ಕಲಿಸುವ ಜನ ಈ ಜಗತ್ತಲ್ಲಿದ್ದಾರೆ ಹೃದಯವೇ ಹುಷಾರು! – *ಶಿ.ಜು.ಪಾಶ* 8050112067 (30/11/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಹಿಟ್ಟಿನ ಜರಡಿಯಲ್ಲಿ ಹಾಕಿ ನೋಡು ಮಣ್ಣಿನ ಹೊರತು ನೀನೇನೂ ಅಲ್ಲ! 2. ಹೃದಯ ಶ್ರೀಮಂತವಾಗಿಡು ಜನ ಮಹಲುಗಳಲ್ಲೂ ಕಣ್ಣೀರು ಸುರಿಸುತ್ತಿದ್ದಾರೆ! – *ಶಿ.ಜು.ಪಾಶ* 8050112067 (28/11/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ನಿನ್ನ ನಿಶ್ಯಬ್ದದಲ್ಲಿ ಅತ್ಯಂತ ದೊಡ್ಡ ಸದ್ದಿದೆ! 2. ನೆನಪಿಸಿಕೊಳ್ಳುವ ಹಕ್ಕು ಕೊಟ್ಟುಬಿಡು ಇಲ್ಲವೇ ಮರೆತು ಬಿಡುವ ಅನುಮತಿ! 3. ಪ್ರೇಮ ಎಂಬುದು ಪೂಜೆ ಎನ್ನುವರು ನೀನು ಪ್ರಸಾದವು! – *ಶಿ.ಜು.ಪಾಶ* 8050112067 (27/11/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಬೆಳಕು ಸಿಕ್ಕಾಗ ನಿನಗೆ ಕತ್ತಲಲ್ಲಿ ಜೊತೆಗಿದ್ದವರನ್ನು ಮರೆತರೆ ಹೇಗೆ?! 2. ಬಣ್ಣ ಬದಲಾಯಿಸಿದರೆ… ಮರವೂ ಎಲೆಯನ್ನು ಮಣ್ಣಿಗೆಸೆಯುವುದು! – *ಶಿ.ಜು.ಪಾಶ* 8050112067 (11/11/2025)

Read More