ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ನಿರೀಕ್ಷೆ ಬಿಟ್ಟುಬಿಟ್ಟೆ… ತೊಂದರೆ ತಾನು ತಾನಾಗಿಯೇ ಕಣ್ಮರೆ ಚಿಟ್ಟೆ! 2. ಹೊಗಳಿಕೆ ಇಷ್ಟ ಪಡಬೇಡವೋ… ರೆಕ್ಕೆ ಹಚ್ಚಿ ಆಕಾಶಕ್ಕೆ ಕಳಿಸಿಬಿಡುವರು… ನೀ ಯೋಗ್ಯನಲ್ಲ ಈ ಭೂಮಿಗೆ ಎಂದು! 3. ಎಲ್ಲರ ನೋವಿಗೂ ಹೆಗಲು ಕೊಟ್ಟವರು ತಮ್ಮದೇ ನೋವಿಗೆ ತಮ್ಮದೇ ಸವೆದ ಹೆಗಲ ತಡಕಾಡುವರು… 4. ನೀನಿದ್ದೀಯ ನಾನೂ ಇದ್ದೇನೆ… ಅಷ್ಟೇ! – *ಶಿ.ಜು.ಪಾಶ* 8050112067 (9/7/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಹೇಳಲು ಸಾವಿರ ಮಾತಿವೆ… ಆದರೆ ಮೌನದಲ್ಲೇ ನೆಮ್ಮದಿಯೂ… 2. ಸ್ವಲ್ಪ ಮುಳುಗಿದ್ದೇನೆ… ನೋಡುತ್ತಿರು; ಮುಳುಗಿಸುತ್ತಿರುವ ಇದೇ ನೀರು ನನ್ನ ಕಾಲ ಚುಂಬಿಸುವುದು! – *ಶಿ.ಜು.ಪಾಶ* 8050112067 (6/7/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ನೀನಿಲ್ಲದೇ ನಿದ್ದೆಯೂ ಬರುವುದಿಲ್ಲ… ನಿದ್ದೆಯೂ ನಿನ್ನದಾ?! 2. ನೀನು ಕಾಫಿಯಾಗಿ ಪ್ರೀತಿಸು ನಾನು ಬಿಸ್ಕತ್ತಿನಂತೆ ನಿನ್ನೊಳಗೆ ಮುಳುಗಿ ಹೋಗುವೆ! – *ಶಿ.ಜು.ಪಾಶ* 8050112067 (4/7/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1 ನಿನ್ನ ಹೃದಯದ ವಿಶೇಷ ಖೈದಿ ನಾನು… ಬಾಗಿಲು ತೆರೆದಿಟ್ಟರೂ ಓಡಿ ತಪ್ಪಿಸಿಕೊಳ್ಳಲಾರೆ… 2. ಹುಡುಕಿದರೆ ಸುಲಭದಲ್ಲಿ ಸಿಗುವನು ದೇವರು; ಸಿಕ್ಕುವುದಿಲ್ಲ ಮನುಷ್ಯ! – *ಶಿ.ಜು.ಪಾಶ* 8050112067 (3/7/25)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಎಂಥ ಸಿರಿವಂತನೂ ಕೂಡ ಇಡೀ ಭೂಮಿ ಕೊಂಡು ಕೊಳ್ಳಲಿಲ್ಲವಲ್ಲ ಈವರೆಗೆ ಹೃದಯವೇ… 2. ಎಡವಿ ಬೀಳು; ಅರ್ಥವಾಗುವುದು… ಎಷ್ಟು ಜನ ನಿನ್ನ ಕೈ ಹಿಡಿಯುವರೆಂದು! – *ಶಿ.ಜು.ಪಾಶ* 8050112067 (29/6/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಬದುಕೆಂಬುದು ಹೂವೂ ಮುಳ್ಳೂ… ಮುಳ್ಳಿಂದ ಹೆದರಿದವನು ಹೂವ ಸುವಾಸನೆಯಿಂದಲೂ ವಂಚಿತನಾಗುವನು! 2. ಆಗುವುದಾದರೆ ಸಿಂಹವಾಗಿ ಬಿಡು ಹೃದಯವೇ ಸಿಂಹಾಸನದ ಚಿಂತೆ ಬಿಟ್ಟು; ಎಲ್ಲಿ ಕುಳಿತುಕೊಳ್ಳುವುದೋ ಸಿಂಹ ಅದೇ ಸಿಂಹಾಸನವಾಗುವುದು! 3. ಮುಗುಳ್ನಗೆ; ಅತ್ಯಂತ ಕಠಿಣ ಕಾಲದ ಪ್ರತಿಕ್ರಿಯೆಯು ಮೌನವು; ತಪ್ಪು ಪ್ರಶ್ನೆಯ ಅತ್ಯುತ್ತಮ ಉತ್ತರವೂ… – *ಶಿ.ಜು.ಪಾಶ* 8050112067 (28/6/2025)

Read More