ಶೋಭಾ ಮಳವಳ್ಳಿ ಟಿಪ್ಪಣಿ; ಸುನೀತಾ ವಿಲಿಯಮ್ಸ್, ಬಾಹ್ಯಾಕಾಶದ ಒಂಭತ್ತು ತಿಂಗಳ ಗರ್ಭ!
ಶೋಭಾ ಮಳವಳ್ಳಿ ಟಿಪ್ಪಣಿ; ಸುನೀತಾ ವಿಲಿಯಮ್ಸ್, ಬಾಹ್ಯಾಕಾಶದ ಒಂಭತ್ತು ತಿಂಗಳ ಗರ್ಭ! 2024, ಜೂನ್ 5 ರಿಂದ 2025 ಮಾರ್ಚ್ 19.. ಬರೋಬ್ಬರಿ 9 ತಿಂಗಳು. ತಾಯಿಯ ಗರ್ಭದಿಂದ ಹೊರಬಂದ ಮಗುವಿನಂತಿದ್ದರು ಸುನಿತಾ ವಿಲಿಯಮ್ಸ್. ಮಗು ಭೂಮಿಗೆ ಕಾಲಿಡುತ್ತಿದ್ದಂತೆ ಅಳುತ್ತದೆ, ಸುನಿತಾ ನಗುನಗುತ್ತಾ ಬಂದರು. ಅವರಿಗಿದು ಮರುಹುಟ್ಟು. ಅಕ್ಷರಶಃ ಅವರಿಗೀಗ ಮಗುವಿನಂತೆ ಚಿಕಿತ್ಸೆ. ಬಾಹ್ಯಾಕಾಶದಲ್ಲಿ ಕಾಲ್ನಡಿಗೆಯನ್ನೇ ಮರೆತ ಸುನಿತಾ, ಮಗು, ಪುಟ್ಟ ಪುಟ್ಟ ಹೆಜ್ಜೆ ಇಡುವಂತೆ ಇಡಬೇಕು. (ಬೇಬಿ ಫುಟ್) ಅವರ ಹಿಮ್ಮಡಿ ಅಷ್ಟು ಸೆನ್ಸಿಟಿವ್ ಆಗಿರುತ್ತದೆ….