ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ನನಗೆ ನಾನೇ ಸಿಗದವನು ನಿನಗೆ ಹೇಗೆ ಸಿಕ್ಕೇನು?! 2. ರೊಟ್ಟಿಯಂತೆ ಬದುಕು… ಎರಡೂ ಬದಿ ಸುಡಬೇಕು! 3. ಪ್ರೇಮವೆಂಬುದು ಮರುಭೂಮಿಯು… ಅಲ್ಲಿ ಯೌವನ ಹೂಳಲಾಗುತ್ತಲ್ಲ ಹೃದಯವೇ… – *ಶಿ.ಜು.ಪಾಶ* 8050112067 (9/2/2026)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಹಾರುವ ಗಾಳಿಪಟಗಳ ಬುದ್ದಿವಂತಿಕೆ ನನಗಿಲ್ಲ… ನಾನೋ ಬೀಸುವ ಗಾಳಿಯಲ್ಲಿ ನಿನ್ನ ಸುಗಂಧ ಹುಡುಕುವವನು… 2. ಹೊಗಳುವವರು ಸ್ವಾರ್ಥದಿಂದ ಹೊಗಳುವರು ನಿಂದನೆ ಈ ಜಗತ್ತಿನ ನಿಯಮ! 3. ಮಸಣವೇ ನಿನ್ನದೇ ಒಂದು ಲೆಕ್ಕಾಚಾರ ಈ ಜಗತ್ತಿನಲ್ಲಿ… ಶ್ರೀಮಂತನೋ ಬಡವನೋ ಭಿಕ್ಷುಕನೋ ಎಲ್ಲರಿಗೂ ಸಮ ಸಮ ಹಾಸಿಗೆಯು! – *ಶಿ.ಜು.ಪಾಶ* 8050112067 (12/1/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಸಿಗರೇಟು ಪ್ಯಾಕಿನ ಮೇಲೆ ಬರೆದಂತೆ ಮನುಷ್ಯನ ಮುಖದ ಮೇಲೂ ಬರೆಯಬೇಕಿನ್ನು Human attachments Are injuries to health! 2. ನನ್ನಂಥ ಗ್ರಾಹಕ ಸಿಕ್ಕಾನೆಲ್ಲಿ? ದುಃಖವನ್ನೂ ಖರೀದಿಸುತ್ತೇನೆ ಮತ್ತೊಬ್ಬರ ಖುಷಿಗಾಗಿ! 3. ಮೊದಲು ಮುಗುಳ್ನಗುವ ಹೃದಯವಿದ್ದ ಜಾಗದಲ್ಲೀಗ ದುಃಖತಪ್ತ ಪ್ರೇಮವಿದೆ! – *ಶಿ.ಜು.ಪಾಶ* 8050112067 (7/1/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಗುರಿಗೆ ಗೊತ್ತೇ ಇಲ್ಲ ನಾನ್ಯಾರೆಂದು! 2. ಕೆಟ್ಟ ದಿನವೂ ಪಾಠ ಕಲಿಸಿಯೇ ಹೋಗುತ್ತೆ! 3. ಬಹಳ ಒಳ್ಳೆತನಕ್ಕೂ ಇಲ್ಲಿ ಬೆಲೆ ಕಟ್ಟಬೇಕಲ್ಲ ಹೃದಯವೇ… – *ಶಿ.ಜು.ಪಾಶ* 8050112067 (4/1/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಆತ್ಮಜ್ಞಾನ ವಿನಾಶಕಾರಿಯೂ… ಸುಟ್ಟುಬಿಡುತ್ತೆ; ಕಾಮ ಕ್ರೋಧ ಲೋಭ ಮದ ಮತ್ಸರ ಅಹಂಕಾರವನ್ನು! 2. ನಾನೆಂಬುದೇನು! ಅಲ್ಲಿ ಕಲ್ಲು ಇಲ್ಲಿ ಮುತ್ತು ಮತ್ತಲ್ಲಿ ಕನ್ನಡಿಯೂ… – *ಶಿ.ಜು.ಪಾಶ* 8050112067 (3/1/2026)

Read More

ಕವಿಸಾಲು

*ಹೊಸ ವರ್ಷದ ಹೊಸ ಹೊಸ ಶುಭಾಶಯಗಳನ್ನು ನಿಮಗೆ ಹೇಳುತ್ತಾ…* Gm ಶುಭೋದಯ💐💐 *ಕವಿಸಾಲು* ಮತ್ತೊಂದು ಇಟ್ಟಿಗೆ ಬಿದ್ದು ಹೋಯ್ತು ಜೀವನದ ಗೋಡೆಯಿಂದ… ಜನ ಮುಗ್ಧರು ಹೊಸ ವರ್ಷದ ಶುಭಾಶಯ ಹೇಳುತ್ತಿದ್ದಾರೆ! – *ಶಿ.ಜು.ಪಾಶ* 8050112067 (1/1/2026)

Read More

ಕವಿಸಾಲು

*ಹೊಸ ವರ್ಷದ ಹೊಸ ಹೊಸ ಶುಭಾಶಯಗಳನ್ನು ನಿಮಗೆ ಹೇಳುತ್ತಾ…* Gm ಶುಭೋದಯ💐💐 *ಕವಿಸಾಲು* ಮತ್ತೊಂದು ಇಟ್ಟಿಗೆ ಬಿದ್ದು ಹೋಯ್ತು ಜೀವನದ ಗೋಡೆಯಿಂದ… ಜನ ಮುಗ್ಧರು ಹೊಸ ವರ್ಷದ ಶುಭಾಶಯ ಹೇಳುತ್ತಿದ್ದಾರೆ! – *ಶಿ.ಜು.ಪಾಶ* 8050112067 (1/1/2026)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ನಂಬಿಕೆ ಒಳ್ಳೇದೇ ಆದರೆ ಎಲ್ಲರ ಮೇಲಲ್ಲ! 2. ನಾನು ಮಲಗುವ ಮುನ್ನವೇ ಮಲಗಿಸಿಬಿಡುತ್ತೇನೆ ನನ್ನೆಲ್ಲಾ ಆಸೆಗಳನ್ನು… ಆದರೂ ಆಶ್ಚರ್ಯ ನಾ ಏಳುವುದಕ್ಕಿಂತ ಮುಂಚೆಯೇ ಎದ್ದಿರುತ್ತವೆ! 3. ಕಣ್ಣು ಕುಕ್ಕುವ ಸೌಂದರ್ಯ ತಾಜ್ ಮಹಲ್ ಗೋರಿ ಎಂಬುದನ್ನು ಮುಚ್ಚಿಟ್ಟಿತು! – *ಶಿ.ಜು.ಪಾಶ* 8050112067 (31/12/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಮತ್ತೆ ಬೆಂಕಿ ಹಚ್ಚಲು ನೋಡುತ್ತಿದ್ದಾರೆ ಅವರು; ಹೇಳಿಬಿಡು… ಬೂದಿಗೆ ಬೆಂಕಿ ಹತ್ತುವುದಿಲ್ಲವೆಂದು! 2. ಏನನ್ನೂ ಕೇಳದೇ ಎಲ್ಲದನ್ನೂ ಬದಲಾಯಿಸಿಬಿಟ್ಟೆ ನೀನು… ಧನ್ಯವಾದಗಳು 2025! – *ಶಿ.ಜು.ಪಾಶ* 8050112067 (30/12/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಕೆಲಸ ಮುಗಿದ ಮೇಲಿಲ್ಲಿ ಪೂಜೆಗಿಟ್ಟ ಹೂವೂ ಕಸವೇ… 2. ಉದ್ದೇಶ ಸಿಕ್ಕಿದೆ ಈಗ ನಿನ್ನಿಂದ ಬದುಕಿಗೆ… ಜೀವನವೋ ಸಕ್ಕರೆ ರೋಗಿಯಂತಿತ್ತು! 3. ವಯಸ್ಸಾದ ಮೇಲೆ ತನುವೆಂಬುದು ಆಮೆಯು ಮನವೆಂಬುದು ಮೊಲವು… – *ಶಿ.ಜು.ಪಾಶ* 8050112067 (24/12/2025)

Read More