Category: ಇದೀಗ ಬಂದ ಸುದ್ದಿ
ಶಿವಮೊಗ್ಗ ದುರ್ಗಿಗುಡಿ ಸೊಸೈಟಿಗೆ ನರಸಿಂಹ, ಜಿ.ಚಂದ್ರಶೇಖರ್ ಸೇರಿದಂತೆ 13 ಜನ ನಿರ್ದೇಶಕರ ಅವಿರೋಧ ಆಯ್ಕೆ
ಶಿವಮೊಗ್ಗ ದುರ್ಗಿಗುಡಿ ಸೊಸೈಟಿಗೆ ನರಸಿಂಹ, ಜಿ.ಚಂದ್ರಶೇಖರ್ ಸೇರಿದಂತೆ 13 ಜನ ನಿರ್ದೇಶಕರ ಅವಿರೋಧ ಆಯ್ಕೆ ದುರ್ಗಿಗುಡಿ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿ 13 ಜನರು ಅವಿರೋಧವಾಗಿ ಇಂದು ಆಯ್ಕೆಯಾದರು. ಸಿ.ನರಸಿಂಹ ಗಂಧದಮನೆ, ಎನ್.ಉಮಾಪತಿ, ಜಿ.ಚಂದ್ರಶೇಖರ್, ಕೆ.ಈಶ್ವರಾಚಾರಿ, ಜಿ.ಗೋವಿಂದಪ್ಪ, ಶಿ.ದು.ಸೋಮಶೇಖರ್, ಡಿ.ಶ್ಯಾಮ, ಎಸ್.ಎಂ.ವೆಂಕಟೇಶ್, ಡಾ.ಕವಿತಾ ಸಾಗರ್, ವಿನ್ಸೆಂಟ್ ರೋಡ್ರಿಗಸ್, ಲಕ್ಷ್ಮೀ ಎಸ್.ವೈ., ಟಿ.ಎಲ್.ಮಣಿಕಂಠ, ಹೆಚ್.ನವೀನ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಧರ್ಮವೆಂದರೆ ಆತ್ಮ ಶುದ್ದೀಕರಣವೆಂದು ಸಾರಿದವರು ಕನಕದಾಸರು : ಬಲ್ಕೀಶ್ ಬಾನು*
*ಧರ್ಮವೆಂದರೆ ಆತ್ಮ ಶುದ್ದೀಕರಣವೆಂದು ಸಾರಿದವರು ಕನಕದಾಸರು : ಬಲ್ಕೀಶ್ ಬಾನು* ಶಿವಮೊಗ್ಗ, ಧರ್ಮ ಎಂದರೆ ಆತ್ಮದ ಶುದ್ದೀಕರಣ. ಹೃದಯ ಶುದ್ದವಾಗಿದ್ದರೆ ಮಾತ್ರ ಧನಾತ್ಮಕ ಚಿಂತನೆ ಸಾಧ್ಯ. ಎಲ್ಲ ಮನುಜರೂ ಸಮಾನರು ಎಂದು ಸಾರಿದವರು ಕನಕದಾಸರು. ನಾವೆಲ್ಲ ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕೆಂದು ವಿಧಾನ ಪರಿಷತ್ ಶಾಸಕಿ ಬಲ್ಕೀಶ್ ಬಾನು ಹಳಿದರು. ಜಿಲ್ಲಾಡಳಿತ, ಜಿ.ಪಂ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕುರುಬರ ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಕುವೆಂಪು ರಂಗ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಶ್ರೀ…
ಆರೋಗ್ಯ ಇಲಾಖೆ, ಗುತ್ತಿಗೆದಾರರ ಮತ್ತು ಹೆತ್ತವರ ನಿರ್ಲಕ್ಷತನಕ್ಕೆ ಬಲಿಯಾದ ಕಂದ..
ಆರೋಗ್ಯ ಇಲಾಖೆ, ಗುತ್ತಿಗೆದಾರರ ಮತ್ತು ಹೆತ್ತವರ ನಿರ್ಲಕ್ಷತನಕ್ಕೆ ಬಲಿಯಾದ ಕಂದ.. (ವರದಿ; ಡಾ.ಇಮಾಮ್ ಮಳಗಿ) ಶಿಕಾರಿಪುರ ಪಟ್ಟಣದ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಆವರಣದ ನೀರಿನ ತೊಟ್ಟಿಯಲ್ಲಿ ಬಾಲಕನೋರ್ವ ಬಿದ್ದು ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ. ತಾಲೂಕಿನ ಮತ್ತಿಕೋಟೆ ಗ್ರಾಮದ ಇಮ್ರಾನ್ ಮತ್ತು ನಿಜ್ಬಾನ್ ಬಾನು ದಂಪತಿಗಳ ಪುತ್ರ ಐಯಾನ್ (03) ಮೃತ ಬಾಲಕನಾಗಿದ್ದಾನೆ. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿನ ಆವರಣದ ನೀರಿನ ತೊಟ್ಟಿಯಲ್ಲಿ ಸಂಜೆ 4-00 ಗಂಟೆಗೆ ಬಿದ್ದು ಪೋಷಕರು ಹುಡುಕುವಾಗ ಸಂಜೆ 5-30ರ…
ರಾಜ್ಯ ಸರ್ಕಾರಿ ನೌಕರರ ಸಂಘದ ಶಿವಮೊಗ್ಗ ಜಿಲ್ಲಾ ಘಟಕದ ನಿರ್ದೇಶಕರ ಸ್ಥಾನಕ್ಕೆ ಇಂದು ನಡೆದ ಚುನಾವಣೆಯ ಫಲಿತಾಂಶ
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ನಿರ್ದೇಶಕರ ಸ್ಥಾನಕ್ಕೆ ಇಂದು ನಡೆದ ಚುನಾವಣೆಯ ಫಲಿತಾಂಶಗಳ ವಿವರ ಗಿರೀಶ್ ಬಿ ಕೃಷಿ ಇಲಾಖೆ ತಾಂತ್ರಿಕ ತರ ಸತ್ಯನಾರಾಯಣ ಜಿಎಚ್ ಕಂದಾಯ ಇಲಾಖೆ ದೀಪಕ್ ಪಿಎಸ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಕಿರಣ್ ಎಚ್ ಜಿಲ್ಲಾ ಪಂಚಾಯತಿ ಪ್ರವೀಣ್ ಕುಮಾರ್ ಜಿ ತಾಲೂಕು ಪಂಚಾಯಿತಿ ಮಧುಸೂದನ್ ಅಬಕಾರಿ ಇಲಾಖೆ ಕೊಟ್ರೇಶ್, ಸಮಾಜ ಕಲ್ಯಾಣ ಇಲಾಖೆ ಅನಿತಾ ವಿ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ರಂಗನಾಥ್ ಮಹಿಳಾ ಮತ್ತು ಮಕ್ಕಳ…
ಯುವಜನರ ಪ್ರತಿಭೆಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರವು ಅನೇಕ ವೇದಿಕೆಗಳನ್ನು ಸೃಷ್ಟಿಸುತ್ತಿದೆ: ಬಲ್ಕೀಷ್ ಬಾನು*
*ಯುವಜನರ ಪ್ರತಿಭೆಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರವು ಅನೇಕ ವೇದಿಕೆಗಳನ್ನು ಸೃಷ್ಟಿಸುತ್ತಿದೆ: ಬಲ್ಕೀಷ್ ಬಾನು* ಶಿವಮೊಗ್ಗ ಯುವಜನರ ಸರ್ವತೋಮುಖ ಬೆಳವಣಿಗೆಗೆ ಸಾಂಸ್ಕೃತಿಕ ಚಟುವಟಿಕೆಗಳು ಸಹಾಯಕವಾಗಿದೆ. ಯುವ ಸಮೂಹವು ತಮ್ಮ ಪ್ರತಿಭೆಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರವು ಅನೇಕ ವೇದಿಕೆಗಳನ್ನು ಸೃಷ್ಟಿಸುತ್ತಿದೆ ಎಂದು ವಿಧಾನ ಪರಿಷತ್ ಶಾಸಕಿ ಶ್ರೀಮತಿ ಬಲ್ಕೀಷ್ ಬಾನು ಅವರು ಹೇಳಿದರು. ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆ, ಕುವೆಂಪು…
ಬಿ.ಎ.ರಮೇಶ್ ಹೆಗ್ಡೆ ಪತ್ರಿಕಾಗೋಷ್ಠಿ;**ಕೊಡಗಿನ ಬಾನೆ ಭೂಮಿ ಮಾದರಿಯಲ್ಲೇ ಮಲೆನಾಡಿನ ಸೊಪ್ಪಿನಬೆಟ್ಟ, ಕಾನೂ ಭೂಮಿ ಮಂಜೂರಾತಿಗೆ ಕರ್ನಾಟಕ ಸರ್ಕಾರದ ಕಂದಾಯ ಸಚಿವರಿಗೆ ಒತ್ತಾಯ*
*ಬಿ.ಎ.ರಮೇಶ್ ಹೆಗ್ಡೆ ಪತ್ರಿಕಾಗೋಷ್ಠಿ;* *ಕೊಡಗಿನ ಬಾನೆ ಭೂಮಿ ಮಾದರಿಯಲ್ಲೇ ಮಲೆನಾಡಿನ ಸೊಪ್ಪಿನಬೆಟ್ಟ, ಕಾನೂ ಭೂಮಿ ಮಂಜೂರಾತಿಗೆ ಕರ್ನಾಟಕ ಸರ್ಕಾರದ ಕಂದಾಯ ಸಚಿವರಿಗೆ ಒತ್ತಾಯ* ಕರ್ನಾಟಕ ಭೂ ಕಂದಾಯ (3ನೇ ತಿದ್ದುಪಡಿ) ಕಾಯ್ದೆ 2011 ರ ರೀತ್ಯಾ ಕೊಡಗಿನ ಬಾನೆ ಭೂಮಿಗೆ ಕಂದಾಯ ನಿರ್ಧರಣೆ ಹಾಗೂ ಪೂರ್ಣ ಮಾಲೀಕತ್ವ ನೀಡುವ ಮಾದರಿಯಲ್ಲೇ ಮಲೆನಾಡಿನ ಸೊಪ್ಪಿನ ಬೆಟ್ಟ. ಕಾನೂ ಭೂಮಿಗಳ ಸಾಗುವಳಿದಾರರಿಗೆ ಮಾಲೀಕತ್ವ ನೀಡಲು ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡರವರನ್ನು…
*ನಕಲಿ ಸಿಬಿಐ ಅಧಿಕಾರಿಗಳನ್ನು ಬಂಧಿಸಿದ ಶಿವಮೊಗ್ಗದ ಪೊಲೀಸರು…**ಗೋಪಾಳದ 72 ವರ್ಷ ವಯಸ್ಸಿನ ಆನಂದ್ ರಿಗೆ ಹೆದರಿಸಿ 41 ಲಕ್ಷ ಪೀಕಿದ್ದರು!*
*ನಕಲಿ ಸಿಬಿಐ ಅಧಿಕಾರಿಗಳನ್ನು ಬಂಧಿಸಿದ ಶಿವಮೊಗ್ಗದ ಪೊಲೀಸರು…* *ಗೋಪಾಳದ 72 ವರ್ಷ ವಯಸ್ಸಿನ ಆನಂದ್ ರಿಗೆ ಹೆದರಿಸಿ 41 ಲಕ್ಷ ಪೀಕಿದ್ದರು!* ವಯೋವೃದ್ಧರೊಬ್ಬರಿಗೆ ಸಿಬಿಐ ಅಧಿಕಾರಿ ಎಂದು ಹೇಳಿ ವೀಡಿಯೋ ಕಾಲ್ ಮಾಡಿ, ಅಕ್ರಮ ಹಣ ವರ್ಗಾವಣೆಯ ಕಥೆ ಹೇಳಿ ಒಟ್ಟು 41 ಲಕ್ಷ ರೂ.,ಗಳನ್ನು ಪೀಕಿದ್ದ ಉತ್ತರ ಪ್ರದೇಶ ಮೂಲದ ಇಬ್ಬರನ್ನು ಬೇಟೆಯಾಡಿ 23.89 ಲಕ್ಷ ರೂ.,ಗಳನ್ನು ವಸೂಲು ಮಾಡಿರುವ ಘಟನೆ ಶಿವಮೊಗ್ಗದ ಸಿಇಎನ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ಮೊಹಮ್ಮದ್ ಅಹಮದ್…
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಿರುದ್ಧ ಸುಮೋಟೋ ಕೇಸ್ ದಾಖಲಿಸಿದ ಜಯನಗರ ಸಿಪಿಐ ಸಿದ್ದೇಗೌಡ*
*ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಿರುದ್ಧ ಸುಮೋಟೋ ಕೇಸ್ ದಾಖಲಿಸಿದ ಜಯನಗರ ಸಿಪಿಐ ಸಿದ್ದೇಗೌಡ* ಕಾಂಗ್ರೆಸ್ ಮತ್ತು ಮುಸ್ಲೀಮರ ವಿರುದ್ಧ ರಕ್ತಕ್ರಾಂತಿಯ ಮಾತಾಡಿದ್ದ ಮಾಜಿ ಉಪಮುಖ್ಯಮಂತ್ರಿ, ರಾಷ್ಟ್ರಭಕ್ತ ಬಳಗದ ಸಂಚಾಲಕರಾದ ಕೆ.ಎಸ್.ಈಶ್ವರಪ್ಪ ವಿರುದ್ಧ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಯನಗರ ಪೊಲೀಸ್ ಇನ್ಸ್ ಪೆಕ್ಟರ್ ಸಿದ್ದೇಗೌಡ ಹೆಚ್.ಎಂ. ರವರು ಸ್ವ ದೂರು ನೀಡಿದ್ದು, ಈಶ್ವರಪ್ಪರ ವಿರುದ್ಧ ನವೆಂಬರ್ 14 ರಂದು 81/2024 ರಂತೆ, ಕಲಂ 196(1)(a), 299BNS ನಂತೆ ಪ್ರಕರಣ ದಾಖಲಾಗಿದೆ. ನ.13…