ಕವಿಸಾಲು

Gm ಶುಭೋದಯ💐💐 *ಕವಿಸಾಲು* ೧. ನಿನ್ನ ಪ್ರೀತಿಯೇ ಅದ್ಭುತ ತಾಯಿ… ಉಳಿದಿದ್ದೆಲ್ಲ ತೋರ್ಪಡಿಕೆಯ ರಸ್ ಮಲಾಯಿ! ೨. ನೀನು ಯಾವತ್ತಿಗೂ ಮುಗಿಯದ ಕಾಯುವಿಕೆ… ೩. ಈ ಜಗತ್ತಿನ ಹೃದಯವಂತಿಕೆಯಲ್ಲೂ ಮೋಸವಿದೆ ಹೃದಯವೇ… – *ಶಿ.ಜು.ಪಾಶ* 8050112067 (21/6/25)

Read More

ಹೀಗೂ ಇರುತ್ತೆ ಜಗತ್ತು!* *ನಿಮ್ಮ ಸಹಕಾರ ಮತ್ತು ಸಹಾಯಕ್ಕೆ ಧನ್ಯವಾದಗಳು…*

*ಹೀಗೂ ಇರುತ್ತೆ ಜಗತ್ತು!* *ನಿಮ್ಮ ಸಹಕಾರ ಮತ್ತು ಸಹಾಯಕ್ಕೆ ಧನ್ಯವಾದಗಳು…* ನನ್ನಮ್ಮಿ ಇದ್ದಕ್ಕಿದ್ದ ಹಾಗೆ ನಂಬಿದ ವೈದ್ಯನೊಬ್ಬನ ಕಾರಣದಿಂದ ಗ್ಯಾಂಗ್ರೀನ್ ಗೆ ಒಳಗಾದರು. ಆ ನಂತರ ಸುಮ್ಮನೆ ಭರವಸೆ ಕೊಟ್ಟು ಕಾಲ ಕಳೆದ ಆ ಡಾಕ್ಟರ್ ಮಹಾಶಯ ಹಣದ ಆಸೆಗೆ ಬಿದ್ದಿದ್ದನೇನೋ…ದಾರಿ ತಪ್ಪಿಸುತ್ತಲೇ ಹೋದ… ನನ್ನಮ್ಮಿ ಸರಿ ಇದ್ದವರು ಆ ವೈದ್ಯನನ್ನು ನಂಬಿದ್ದರಿಂದ ಬಹಳ ನೋವು ಪಡುವಂತಾಯ್ತು…ಈಗಲೂ ಅದು ಮುಂದುವರೆದಿದೆ… ಈ ನಡುವೆ ಗ್ಯಾಂಗ್ರಿನ್…ಕಾಲಿನ ಎರಡು ಬೆರಳಿನ‌ ಆಪರೇ಼ನ್…ಆಪರೇಷನ್ನಿನ ಸಂದರ್ಭದಲ್ಲೇ ಎರಡೂ ಕಿಡ್ನಿಗಳು ಕೆಲಸ ನಿಲ್ಲಿಸಿ ಅಮ್ಮಿಯ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ೧. ಈ ಜಗತ್ತೆಲ್ಲ ನನ್ನದೇ… ಅದೇ ದೊಡ್ಡ ಭ್ರಮೆಯೂ… ೨. ಹೊರಳಾಡಲು ದಿಕ್ಕೆರಡು; ಎರಡೂ ಕಡೆ ಚಿಂತೆಯು! ೩ ನೀನೇನೆಂಬುದು ಗೊತ್ತು ಮಾಡಿಕೋ… ಅರ್ಥವಾಗಿಬಿಡುವುದು ಎಲ್ಲದೂ! ೪ ಮೌನವೂ ಒಮ್ಮೊಮ್ಮೆ ಮಹಾ ಸ್ಫೋಟವು… – *ಶಿ.ಜು.ಪಾಶ* 8050112067 (18/6/25)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ೧. ಕಾಲಕ್ಕೆ ಗಾಯ ಮಾಡುವುದಷ್ಟೇ ಗೊತ್ತು; ಹಾಗಾಗಿ, ಗಡಿಯಾರದಲ್ಲಿ ಮುಳ್ಳುಗಳೇ ಹೆಚ್ಚು… ಹೂವಿನ ಗಡಿಯಾರ ಕಂಡವರಿಲ್ಲ! ೨. ಜನರ ಮುಖವಾಡಗಳನ್ನು ತೆಗೆದಿರಿಸಿದ ಓ ನನ್ನ ಕೆಟ್ಟ ಕಾಲವೇ… ನಿನಗಿದೋ ಕೋಟಿ ಕೋಟಿ ವಂದನೆ! – *ಶಿ.ಜು.ಪಾಶ* 8050112067 (17/6/25)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ೧. ಬದುಕು ಎಲ್ಲದನ್ನೂ ನೀಡಿ ಒಂದಲ್ಲಾ ಒಂದರಲ್ಲಿ ಫಕೀರನಾಗಿರಿಸುತ್ತಲ್ಲ ಹೃದಯವೇ… ೨. ಹುಡುಕಾಟ ನೆಮ್ಮದಿಯದಾಗಿರುತ್ತೆ… ಸಂಬಂಧಗಳ ಹೆಸರು ಏನೇ ಇರಲಿ… ೩. ಹಗುರ ಜೀವನ ಭಾರದ ಆಸೆಗಳು ಹುಟ್ಟಿದ್ದು ಒಂದೇ ದಿನ ಸಾವೋ ಪ್ರತಿ ಕ್ಷಣ! – *ಶಿ.ಜು.ಪಾಶ* 8050112067 (16/6/25)

Read More

ಕವಿಸಾಲು

*ನನ್ನ ತಾಯಿಯ ಆರೋಗ್ಯಕ್ಕೆ ಪ್ರಾರ್ಥಿಸಬೇಕೆಂದು ಈ ಮೂಲಕ ವಿನಂತಿಸುತ್ತಾ…* Gm ಶುಭೋದಯ💐💐 *ಕವಿಸಾಲು* ೧ ಒಳ್ಳೆಯ ಜನ ವಿಶೇಷವಾಗಿರುತ್ತಾರೆ… ಕೆಟ್ಟ ಸಂದರ್ಭದಲ್ಲೂ ಅವರು ಒಳ್ಳೆಯವರೇ ಆಗಿರುತ್ತಾರೆ… ೨ ದುಃಖ ಎಂಬುದು ಸರ್ವಶ್ರೇಷ್ಟ.. ಬಂದಾಗಲೆಲ್ಲ ಮನುಷ್ಯತ್ವದ ಉತ್ಖನನಕ್ಕಿಳಿದು ಬಿಡುತ್ತೆ! – *ಶಿ.ಜು.ಪಾಶ* 8050112067 (15/6/25)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ೧. ನಿನ್ನ ಹೆಸರು ಕೂಗಿದರೆ ಸಾಕು ಆಮ್ಲಜನಕ ಸಿಗುವುದು… ಇಲ್ಲದಿದ್ದರೆ ಬದುಕೆಲ್ಲ ಇಂಗಾಲದ ಡೈಯಾಕ್ಸೈಡ್! ೨ ಹಸಿವು ಸಾವಿಗಿಂತ ದೊಡ್ಡದು… ತಿಂದು ಕೊಂದಂತೆಲ್ಲ ಮತ್ತೆ ಮತ್ತೆ ಹುಟ್ಟುವುದು… ಕೊಲ್ಲುವುದು! ೩ ಸೋತ ಮನಸ್ಸಿಂದ ಏನನ್ನು ಗೆದ್ದಿದ್ದಾರೆ… ಯಾರೂ… – *ಶಿ.ಜು.ಪಾಶ* 8050112067 (10/6/25)

Read More