*ಮದುವೆಯಾದ 27 ದಿನಗಳೊಳಗೇ ಸತ್ತಳು ವಿವಾಹಿತೆ!* *ಕೊಲೆಯೋ? ಆತ್ಮಹತ್ಯೆಯೋ?*
*ಮದುವೆಯಾದ 27 ದಿನಗಳೊಳಗೇ ಸತ್ತಳು ವಿವಾಹಿತೆ!* *ಕೊಲೆಯೋ? ಆತ್ಮಹತ್ಯೆಯೋ?* ಮದುವೆಯಾಗಿ ಒಂದು ತಿಂಗಳು ಕಳೆಯುವ ಒಳಗೆ ನವ ವಿವಾಹಿತೆ ನಿಗೂಢವಾಗಿ ಮೃತಪಟ್ಟಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ಐಶ್ವರ್ಯ (26) ಮೃತ ಯುವತಿಯಾಗಿದ್ದು, ಗಂಡನೇ ಆಕೆಯನ್ನು ಕೊಲೆ ಮಾಡಿರೋದಾಗಿ ಪೋಷಕರು ಆರೋಪಿಸಿದ್ದಾರೆ. 27 ದಿನಗಳ ಹಿಂದೆಯಷ್ಟೇ ಲಿಖಿತ್ ಸಿಂಹ ಜೊತೆ ಐಶ್ವರ್ಯ ಮದುವೆ ನಡೆದಿತ್ತು. ಸುಂದರ ಸಂಸಾರದ ಕನಸು ಕಂಡಿದ್ದ ಐಶ್ವರ್ಯ, ಸಾಂಸಾರಿಕ ಬದುಕನ್ನು ಸರಿಯಾಗಿ ಆರಂಭಿಸುವ ಮುನ್ನವೇ ಪ್ರಾಣ ಕಳೆದುಕೊಂಡಿದ್ದಾರೆ. ಮೂಲತಃ ನಾಗಮಂಗಲ ನಿವಾಸಿಗಳಾದ ಮಮತಾ ಹಾಗೂ…


